spot_img
Monday, August 24, 2026
spot_img

ಹಾಲಾಡಿ ಗುರುಪ್ರಸಾದ ಶೆಟ್ಟಿಯವರಿಗೆ ಜೆಸಿಐ ವಲಯ ಮಟ್ಟದ ‘ಸಾಧನಾ ಶ್ರೀ’ ಪ್ರಶಸ್ತಿ

ಹಾಲಾಡಿ: ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ  ಜೆಸಿಐ ವತಿಯಿಂದ  ನಡೆದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ “ಮೃದಿನಿ 2026” ಕಾರ್ಯಕ್ರಮದಲ್ಲಿ ಹಾಲಾಡಿ -ವಾರಾಹಿ  ಜೆಸಿಐ ಘಟಕದ  ಸದಸ್ಯರಾದ ಜೆಸಿ ಗುರುಪ್ರಸಾದ್ ಶೆಟ್ಟಿಯರಿಗೆ   ಜೆಸಿಐ ವಲಯ – 15 ರ ಅಧ್ಯಕ್ಷರಾದ ಜೆಎಫ್ಎಸ್ ಸಂತೋಷ ಶೆಟ್ಟಿಯವರು  ಪ್ರತಿಷ್ಠಿತ “ಸಾಧನಾ ಶ್ರೀ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದರು.
ಜೆಸಿ ಗುರುಪ್ರಸಾದ ಶೆಟ್ಟಿಯವರು ಸಮಾಜ ಸೇವೆ, ನಾಯಕತ್ವ ಹಾಗೂ ಜೆಸಿಐ ಚಟುವಟಿಕೆಗಳಲ್ಲಿ ನೀಡಿರುವ ವಿಶೇಷ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರ ಈ ಸಾಧನೆಗೆ ಜೆಸಿಐ ಹಾಲಾಡಿ ವಾರಾಹಿ ಘಟಕದ ಸದಸ್ಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ  ಹಾಲಾಡಿ ವಾರಾಹಿ ಘಟಕದ ಅಧ್ಯಕ್ಷರಾದ ಜೆಸಿ ಪ್ರದೀಪ್ ಹಾಲಾಡಿ,ಜೆಸಿಐ ಶಂಕರನಾರಾಯಣ ಘಟಕದ ಅಧ್ಯಕ್ಷರಾದ ಯೋಗೇಶ್ ಕಾಂಚನ್, ಶಂಕರನಾರಾಯಣ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಪ್ರವೀಣ್ ಬಾಳೆಕೊಡ್ಲು, ಕಾರ್ಯದರ್ಶಿ ಅಶೋಕ ಆಚಾರಿ,  ಹಾಗೂ ಉಪಾಧ್ಯಕ್ಷರಾದ ಜೆಸಿ ಜನಾರ್ಧನ ಮೊಗವೀರ ಹಾಲಾಡಿ, ಜೆಸಿ ನಾರಾಯಣ ಮೊಗವೀರ,ಜೆಸಿ ರಾಘವೇಂದ್ರ ಕುದ್ರುಬೆಟ್ಟು, ಜೆಸಿ ಆಶಾ ಕುಲಾಲ್, ಜೆಸಿ ಅವಶ್ಯ ಶೆಟ್ಟಿ, ಜೆಸಿ ಮಂಜುಳ  ಶೆಟ್ಟಿ ಹಾಗೂ ಜೆಸಿಐ ಘಟಕಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!