spot_img
Thursday, August 27, 2026
spot_img

ಕೊಕ್ಕರ್ಣೆ: ಸಿಂಡಿಕೇಟ್ ರೈತ ಸಮಾವೇಶ

ಕೊಕ್ಕರ್ಣೆಯ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ಬುಧವಾರ ಕೊಕ್ಕರ್ಣೆ ಶಿವಗಿರಿ ನಾರಾಯಣ ಗುರು ಸಭಾಭವನದಲ್ಲಿ ಸಿಂಡಿಕೇಟ್ ರೈತರ ಸಮಾವೇಶ  ನಡೆಯಿತು.
ಕಾರ್ಯಕ್ರಮವನ್ನು ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಉದ್ಘಾಟಿಸಿ ಮಾತನಾಡಿ, ರೈತರ ಸೇವಾ ಸಹಕಾರಿ ಸಂಘಗಳು ಹೆಸರಿಗೆ ಮಾತ್ರ ರೈತರ ಸಹಕಾರಿ ಸಂಘ ಎಂದು ಹೆಸರು ಇಟ್ಟುಕೊಂಡಿವೆ. ಆದರೆ ಕೊಕ್ಕರ್ಣೆ ಸಂಘವು ರೈತರಿಗೆ ಇಂತಹ ಕಾರ್ಯಕ್ರಮಗಳನ್ನು ಮಾಡಿ, ರೈತಸ್ನೇಹಿಯಾಗಿ ಜಿಲ್ಲೆಗೆ ಮಾದರಿಯಾಗಿದೆ. ಎಲ್ಲ ರೈತರು ವರ್ಷಕ್ಕೆ 2 ಬಾರಿ ಬೆಳೆ ನೋಂದಣಿ ಮಾಡಬೇಕು. ಬೆಳೆ ಸಮೀಕ್ಷೆ ಮಾಡುವವರ ತಪ್ಪಿನಿಂದಲೂ ರೈತರಿಗೆ ಪರಿಹಾರ ಸಿಗುತ್ತಿಲ್ಲ. ಕೊಕ್ಕರ್ಣೆ ರೈತರ ಸಹಕಾರಿ ಸಂಘ ತನ್ನ ವ್ಯಾಪ್ತಿಯ ಎಲ್ಲ ರೈತರ ಬೆಳೆ ಸಮೀಕ್ಷೆ ಮಾಡಿ ಮಾದರಿ ಕೆಲಸ ಮಾಡಿದೆ ಎಂದರು.
ಸಂಘದ ಅಧ್ಯಕ್ಷ ಬಿ.ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಮಾತನಾಡಿ, 1528 ರೈತರಿಗೆ 28.65 ಕೋಟಿ ಬೆಳೆ ಸಾಲ ವಿತರಿಸಿದ್ದೇವೆ. 419 ರೈತರಿಗೆ ಡೈರಿ ಸಾಲ ನೀಡಿ ದ್ದೇವೆ. 65 ಲಕ್ಷ ಬೆಳೆ ವಿಮೆ ಸಿಕ್ಕಿದೆ. ಈ ಬಾರಿ 947 ಜನರಿಗೆ 30 ಲಕ್ಷ ಬೆಳೆ ವಿಮೆ ಕಟ್ಟಿದ್ದೇವೆ. 1836 ಎಕರೆ ಭೂಮಿಯಲ್ಲಿ ಯಾವ ಬೆಳೆ ಇದೆ ಎಂಬುದನ್ನು ದಾಖಲಿಸಿದ್ದೇವೆ. ಕರ್ಜೆ ಶಾಖೆಯಲ್ಲಿ ರೈತರಿಗೆ ಬೇಕಾಗುವ ಎಲ್ಲ ಕೃಷಿ ಸಲಕರಣೆ ಗಳನ್ನು ಮಾರಾಟ ಮಾಡುತ್ತಿದ್ದು ಮುಂದೆ ಎಲ್ಲ ಶಾಖೆ ಗಳಿಗೂ ಇದನ್ನು ವಿಸ್ತರಿಸಲಿದ್ದೇವೆ. ರೈತರಿಂದ ರೈತರಿಗಾಗಿ ರೈತರಿಗೋಸ್ಕರ ನಮ್ಮ ಸಂಘವು ಕೆಲಸ ಮಾಡುತ್ತಿದೆ. ವಿನೂತನ ಪರಿಕಲ್ಪನೆಯಲ್ಲಿ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ರೈತರ ಹಬ್ಬವಾಗಿ ಪರಿವರ್ತಿಸುವ ಆಶಯ ಇದೆ ಎಂದರು.
ಸಂಘದ ನಿರ್ದೇಶಕ ಪ್ರತಾಪ್ ಹೆಗ್ಡೆ ಮಾರಾಳಿ ಪ್ರಸ್ತಾವನೆಗೈದು ಮಾತನಾಡಿ, ಸಂಘವು ತಾಲೂಕಿನಲ್ಲೇ ಅತಿ ಹೆಚ್ಚು ಕೃಷಿ ಸಾಲ ನೀಡಿದ ಕೀರ್ತಿ ಹೊಂದಿದೆ. 2026ರಲ್ಲಿ 28.51 ಕೋಟಿ ರೂ. ಕೃಷಿ ಸಾಲ, 3.43 ಕೋಟಿ ರೂ. ಹೈನುಗಾರಿಕೆ ಸಾಲ ನೀಡಿದೆ. ಬೆಳೆ ವಿಮೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ. ಈ ವರ್ಷ ಸಂಘದಿಂದಲೇ ಜನರನ್ನು ನೇಮಿಸಿ 1,000ಕ್ಕೂ ಮಿಕ್ಕಿ ರೈತರ ಬೆಳೆ ನಮೂದು ಮಾಡಲಾಗಿದೆ ಎಂದರು.
ಬ್ರಹ್ಮಾವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ. ವೈಕುಂಠ ಹೇರ್ಳೆ ಮಾತನಾಡಿ, ರೈತರು ಯೋಗಿಗಳಾದಲ್ಲಿ ಮಾತ್ರ ಉಳಿದವರು ಭೋಗಿಗಳಾಗಲು ಸಾಧ್ಯವಿದೆ. ರೈತರಿಗೆ ಪ್ರತೀ ವರ್ಷ ಒಂದು ಕೃಷಿ ಹಬ್ಬಮಾಡುವ ವ್ಯವಸ್ಥೆ ಯಾಗಬೇಕು. ಅಂದು ರೈತರು ತಮ್ಮ ತಮ್ಮ ಬೆಳೆಗಳ ಅಭಿವೃದ್ಧಿಯ ಮಾಹಿತಿ ಹಂಚಿಕೊಳ್ಳಬೇಕು ಎಂದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪ್ರದೀಪ್ ಹೆಬ್ಬಾರ್ ಕೆ.ನಂಚಾರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾತನಾಡಿದರು. ಬ್ರಹ್ಮಾವರ ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷೆ ಡಾ. ಸುನಿತಾ ಶೆಟ್ಟಿ ಕೆಂಜೂರು, ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ವಂಡಾರು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ., ಹಿರಿಯ ಪಶು ವೈದ್ಯಾಧಿಕಾರಿ ಮಂಜುನಾಥ ಅಡಿಗ ಎನ್., ಸಹಾಯಕ ಕೃಷಿ ಅಧಿಕಾರಿ ಸುರೇಶ್ ಬಂಗೇರ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಮೋಹನ್ ರಾಜ್, ನಿರ್ದೇಶಕರಾದ ಶುಭಕರ ಶೆಟ್ಟಿ ಕಕ್ಕುಂಜೆ, ಪ್ರಸನ್ನ ಶೆಟ್ಟಿ ಹಳ್ಳಿ, ರವಿ ಪೂಜಾರಿ ಸಂತೆಕಟ್ಟೆ, ದಯಾನಂದ ನಾಯ್ಕ ತಡಾಲು, ಮನೋಜ್ ಶೆಟ್ಟಿ ಕಳ್ಳೂರು, ಕೆ.ಉದಯ ಶೆಟ್ಟಿ ಗೊರಟೆ, ಹೇಮಾವತಿ ಶೆಟ್ಟಿ ಮಾರಾಳಿ, ಕಮಲ ಯಾನೆ ಶಾರದ, ಚಂದ್ರಶೇಖರ ಪೂಜಾರಿ ಆವರ್ಸೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯಲ್ಲಿ ಬರುವ ಪ್ರಗತಿಪರ ಹೈನುಗಾರರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ಕಾರ್ಯನಿರ್ವಹಣಾಧಿಕಾರಿ ಅಭಿಷೇಕ್ ಶೆಟ್ಟಿ ಸ್ವಾಗತಿಸಿದರು. ಡಾ.ಸುನಿತಾ ಶೆಟ್ಟಿ ವಂದಿಸಿದರು. ಶಿಶಿರ್ ಹಾಗೂ ಶರತ್ ಕಾರ್ಯಕ್ರಮ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!