spot_img
Tuesday, August 25, 2026
spot_img

‘ಕರ್ಗಲ್ಲು ಯಕ್ಷ ಮಾರ್ಗ’:  ಸಿರಿಬಾಗಿಲು ಪ್ರತಿಷ್ಠಾನ  ತೆಂಕುತಿಟ್ಟು ಯಕ್ಷಗಾನದ ಪ್ರಾಥಮಿಕ ಹಂತದ ನಾಟ್ಯ ಪ್ರಸ್ತುತಿ : ದಾಖಲೀಕರಣ ಪಠ್ಯ ಲೋಕಾರ್ಪಣೆ

ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ  ಕರ್ಗಲ್ಲು ವಿಶ್ವೇಶ್ವರ ಭಟ್ ರವರ ಕರ್ಗಲ್ಲು ಯಕ್ಷ ಮಾರ್ಗದ ಪ್ರಾಥಮಿಕ ಹಂತ ವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ದಾಖಲೀಕರಿಸಿದೆ.
 ಆಗಸ್ಟ್ 25 ರಂದು ಮಂಗಳವಾರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಯಕ್ಷ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ರವರು ಈ ದಾಖಲೀಕರಣದ ಕಿರು ಭಾಗವನ್ನು ಮಾದ್ಯಮಕ್ಕೆ  ಬಿಡುಗಡೆಗೊಳಿಸಿದರು. ಕಲಾವಿದರಾದ  ಶಂಭಯ್ಯ ಕಂಜರ್ಪಣೆ, ಕಲಾವಿದ ಉಪನ್ಯಾಸಕ ಡಾ. ಶ್ರುತಕೀರ್ತಿರಾಜ ಉಜಿರೆ, ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯ, ಸುಮಿತ್ರ ಆರ್ ಮಯ್ಯ ,ಶ್ರೀಮುಖ ಎಸ್ ಆರ್ ಮಯ್ಯ , ಶ್ರೀ ರಾಜ ಎಸ್ ಆರ್ ಮಯ್ಯ ಉಪಸ್ಥಿತರಿದ್ದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ‌ ಪ್ರತಿಷ್ಠಾನವು ಆರಂಭವಾದ ದಿನದಿಂದಲೇ ಕಲೆ -ಸಂಸ್ಕೃತಿ- ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ,  ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ   ಪ್ರಯತ್ನಶೀಲವಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಪ್ರತಿಷ್ಟಾನದ ಚಟುವಟಿಕೆಗಳನ್ನು ಗಮನಿಸಿದರೆ.  ಹೆಚ್ಚಿನ ಕಾರ್ಯಕ್ರಮಗಳು ಅಧ್ಯಯನದೊಂದಿಗೆ ರಂಗ ಪ್ರದರ್ಶನಕ್ಕೂ ಯೋಗ್ಯವಾಗಿವೆ.  ಈ ನಿಟ್ಟಿನಲ್ಲಿ ಇದರ ಮುಂದಿನ ಪ್ರಯತ್ನವಾಗಿ ಹಿಂದಿನ, ಇಂದಿನ ಯಕ್ಷಗಾನದ ನಾಟ್ಯ ಪ್ರಸ್ತುತಿಯನ್ನು ಗಮನಿಸಿ, ಅಂದಾಜು ನಾಲ್ಕು ದಶಕಗಳಿಗೂ ಹೆಚ್ಚು  ವರುಷ ನಿರಂತರವಾಗಿ ಯಕ್ಷಗಾನ ಅಧ್ಯಯನ, ಅಧ್ಯಾಪನದೊಂದಿಗೆ ವಿಶೇಷವಾದ ಅನುಭವವನ್ನು ಹೊಂದಿರುವ ತೆಂಕುತಿಟ್ಟಿನ ಏಕೈಕ ಕಲಾವಿದರಾಗಿರುವಂತಹ  ಕರ್ಗಲ್ಲು ವಿಶ್ವೇಶ್ವರ ಭಟ್ ರ ಅಮೂಲ್ಯ ನಾಟ್ಯ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ ಮುಂದಿನ ಪೀಳಿಗೆಗೆ ಹಸ್ತಾಂತರಿಸು ಕಾಯಕದಂತೆ ಸಿರಿಬಾಗಿಲು ಪ್ರತಿಷ್ಠಾನವು ದಾಖಲಿಕರಣಗೊಳಿಸಿ ಪ್ರಸ್ತುತಪಡಿಸುತಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನವು ವಿಶ್ವರಂಗದಲ್ಲಿ ಶಾಶ್ವತವಾಗಿ ಮೆರೆಯುವಂತಾಗಲು ಇದು  ಪೂರ್ಣಪ್ರಮಾಣದಲ್ಲಿ ಸಹಕಾರಿಯಾಗಲಿದೆ. ಇಂದಿನ ಯಕ್ಷಗಾನ ನಾಟ್ಯ ಶಿಕ್ಷಕರು, ಕಲಾವಿದರುಗಳು, ವಿದ್ಯಾರ್ಥಿಗಳು ಇದನ್ನು ಗಮನಿಸಿ ಅಧ್ಯಯನ ಶೀಲರಾಗುವರೆಂದು ನಮ್ಮ ಆಶಯ.  ಅಗತ್ಯತೆ ಇರುವವರು ಮಾತ್ರ ಪ್ರತಿಷ್ಠಾನವನ್ನು ಸಂಪರ್ಕಿಸಬೇಕೆಂಬ ಉದ್ದೇಶದಿಂದ ಮಾಧ್ಯಮದಲ್ಲಿ ಕೆಲವು ಕ್ಲಿಪಿಂಗ್ಸ್ ಮಾತ್ರವೇ ಪ್ರಕಟಿಸಿರುತ್ತೇವೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವನ್ನು  ಸಂಪರ್ಕಿಸಬಹುದಾಗಿದೆ.
ಈ ಯೋಜನೆಗೆ   ಕೆ.ಕೆ.ಶೆಟ್ಟಿ ಅಹಮದ್ ನಗರ, ಶ್ರೀ ವಾಸುದೇವ ಐತಾಳ ಪಣಂಬೂರು,  ಮಹಾಬಲೇಶ್ವರ ಭಟ್ ಎಡಕ್ಕಾನ, ಮಧುರ ಉಪಾಧ್ಯ ಬೆಂಗಳೂರು  ಇವರು ಆರ್ಥಿಕ ಸಹಕಾರ ಮಾಡಿರುತ್ತಾರೆ.
 ದಾಖಲೀಕರಣಕ್ಕೆ  ಕಲಾವಿದರಾದ  ಶಂಭಯ್ಯ ಕಂಜರ್ಪಣೆ,  ಮಧೂರು ಗೋಪಾಲಕೃಷ್ಣ ನಾವಡ,  ಲಕ್ಷ್ಮಣ ಕುಮಾರ್ ಮರಕಡ,  ಶಿವಾನಂದ ಪೆರ್ಲ ಸಹಕರಿಸಿದರೆ ,ಚಿತ್ರೀಕರಣವನ್ನು   ಶ್ರೀಮುಖ ಮಯ್ಯ ಎಸ್. ವಿ. ವಿಷನ್,  ಕಾರ್ತಿಕ ಕರ್ಗಲ್ಲು ಇವರು ದಾಖಲಿಸಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಆಸಕ್ತರಿಗೆ  ಅಧ್ಯಯನಕ್ಕೆ ಮುಂದಿನ ದಿನಗಳಲ್ಲಿ ಈ ದಾಖಲೀಕರಣ ಲಭ್ಯವಾಗಲಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!