spot_img
Saturday, August 29, 2026
spot_img

ಹಿರಿಯ ಸಾಹಿತಿ ಕ ವೆಂ ರಾಜಗೋಪಾಲರ ಶತಮಾನೋತ್ಸವ ಸಂಸ್ಮರಣೆ, ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

 

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನೀಲಾವರ ಸುರೇಂದ್ರ ಅಡಿಗರ ಸಾಧನೆ ಅನನ್ಯ ವಾದದ್ದು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಅಡಿಗರ 82 ನೆಯ ಕೃತಿ ‘ಅಡಿಗರ ಬಿಡಿ ಬರಹಗಳು’ ಕೃತಿಯನ್ನು ನನಗೆ ಅರ್ಪಿಸಿ ನನ್ನಿಂದಲೇ ಬಿಡುಗಡೆ ಮಾಡಿಸಿದ್ದಾರೆ ಎಂದು ನೀಲಾವರ ಸುರೇಂದ್ರ ಅಡಿಗರ ಪುಸ್ತಕ ಬಿಡುಗಡೆ ಮಾಡಿ ಉಡುಪಿ ಜಿಲ್ಲಾ ಕಸಾಪ ಸ್ಥಾಪಕ ಅಧ್ಯಕ್ಷ ರಾದ ಎ ಎಸ್ ಎನ್ ಹೆಬ್ಬಾರ್ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟ ಇಲ್ಲಿ ಆಯೋಜಿಸಿದ್ದ ಹಿರಿಯ ಸಾಹಿತಿ ಪ್ರೊ.ಕ ವೆಂ ರಾಜಗೋಪಾಲರ ಶತಮಾನೋತ್ಸವ ಸಂಸ್ಮರಣೆ, ದತ್ತಿ ಉಪನ್ಯಾಸ, ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ನಿವೃತ್ತ ಪ್ರಾಚಾರ್ಯರಾದ ಎಂ.ಬಾಲಕೃಷ್ಣ ಶೆಟ್ಟಿ ಶ್ರೀಮತಿ ಅಕ್ಕಮ್ಮ ಮತ್ತು ಪರಮೇಶ್ವರ ಹೆಬ್ಬಾರ ಚುಂಗಿಗುಡ್ಡೆ ಸ್ಮಾರಕ ದತ್ತಿ ಉಪನ್ಯಾಸ ದಲ್ಲಿ ಕುಂದಾಪ್ರ ಭಾಷಾ ಸೊಬಗಿನ ಕುರಿತು ಮಾತನಾಡಿದರು.
ಇನ್ನೊಬ್ಬ ಉಪನ್ಯಾಸಕರಾದ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು ಶ್ರೀಮತಿ ರತ್ನಾವತಿ ಉಪನ್ಯಾಸ ದಲ್ಲಿ ಶಿಕ್ಷಣ ಮತ್ತು ಶಿಕ್ಷಕ ಕುರಿತು ಮಾತನಾಡಿ ಪ್ರಚಲಿತ ಶಿಕ್ಷಣ ವ್ಯವಸ್ಥೆ ಹಾಗೂ ಶಿಕ್ಷಕರ ಸಮಸ್ಯೆ ಗಳ ಬಗ್ಗೆ ಬೆಳಕು ಚಲ್ಲಿದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಹಿರಿಯ ಸಾಹಿತಿ ಕ ವೆಂ ರಾಜಗೋಪಾಲರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಂಸ್ಮರಣೆ ಮಾಡಿ,ರಂಗಕರ್ಮಿಯಾಗಿ, ಸಾಹಿತಿ ಹಾಗೂ ಸಂಶೋಧಕರಾಗಿ, ಶಿಕ್ಷಣ ತಜ್ಞ ರಾಗಿ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ, ರಂಗ ಕರ್ಮಿ ಪ್ರೊ. ಉಪೇಂದ್ರ ಸೋಮಯಾಜಿ ಅವರಿಗೆ ಕ ವೆಂ ರಾಜಗೋಪಾಲ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಸುರೇಶ ಮರಕಾಲ ಅವರಿಗೆ ಅನಂತಯ್ಯ ಹಂದೆ ಸ್ಮರಣಾರ್ಥ ರತ್ನಾವತಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದತ್ತಿ ದಾನಿಗಳಾದ ಪ್ರಕಾಶ್ ಹೆಬ್ಬಾರ್, ಶ್ರೀಮತಿ ರತ್ನಾವತಿ, ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ದೇವದಾಸ ಹೆಬ್ಬಾರ್,ಕೊಂಡಳ್ಳಿ ಪ್ರಭಾಕರ ಶೆಟ್ಟಿ, ನರಸಿಂಹ ಮೂರ್ತಿ ಮಣಿಪಾಲ, ಸುನಂದಾ ಎಸ್ ಅಡಿಗ ಉಪಸ್ಥಿತರಿದ್ದರು.
ರಂಗಕರ್ಮಿ ಸತ್ಯನಾ ಕೊಡೇರಿ ರಂಗ ಗೀತೆ ಪ್ರಸ್ತುತ ಪಡಿಸಿದರು.ಕಾರ್ಕಳ ಕ ಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಂಕುತಿಮ್ಮನ ಕಗ್ಗ ವಾಚಿಸಿದರು. ಲೇಖಕಿ ಸುಮನ ಹೇರ್ಳೆ ಸನ್ಮಾನ ಪತ್ರ ವಾಚಿಸಿದರು. ಬ್ರಹ್ಮಾವರ ಕಸಾಪ ಅಧ್ಯಕ್ಷ ರಾಮಚಂದ್ರ ಐತಾಳರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮನೋಹರ ಪಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!