spot_img
Monday, August 31, 2026
spot_img

ಕೋಟಿಲಿಂಗೇಶ್ವರ ದೇಗುಲ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ – ಪರಿಸರ ಸ್ವಚ್ಛತೆ ಹಾಗೂ ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು: ಶ್ರೀನಿವಾಸರಾವ್ ಗೋಪಾಡಿ

ಕೋಟೇಶ್ವರದ ಕೋಟಿಲಿಂಗೇಶ್ವರ ದೇಗುಲ ಹಾಗೂ ಕೋಟೇಶ್ವರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ದೇಗುಲದ ವಿವಿಧ ಕಾಮಗಾರಿಗೆ ಚಾಲನೆ ಹಾಗೂ ನಿರ್ಮಾಣಗೊಂಡ ಹೂದೋಟದ ಉದ್ಘಾಟನಾ ಸಮಾರಂಭ ದೇಗುಲದಲ್ಲಿ ಆ. 30 ರಂದು ನಡೆಯಿತು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾಮಗಾರಿಗಳಿಗೆ ಚಾಲನೆ ನೀಡಿ, ಧಾರ್ಮಿಕ ದತ್ತಿ ಇಲಾಖೆಯ ಐತಿಹಾಸಿಕ ಚರಿತ್ರೆಯನ್ನು ಹೊಂದಿರುವ ಶ್ರೀ ಕೋಟಿಲಿಂಗೇಶ್ವರ ದೇಗುಲದ ಅಭಿವೃದ್ಧಿ ಕಾರ್ಯಗಳಿಗೆ ಕೋಟೇಶ್ವರ ಸೇವಾ ಟ್ರಸ್ಟ್ ಕೈಜೋಡಿಸಿ, ಸಹಕರಿಸಿರುವುದು ಮಾದರಿಯಾಗಿದೆ ಎಂದು ಹೇಳಿ ಶುಭಹಾರೈಸಿದರು.
ನಿರ್ಮಾಣಗೊಂಡ ಹೂದೋಟವನ್ನು ಕೋಟೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸರಾವ್ ಗೋಪಾಡಿ ಉದ್ಘಾಟಿಸಿ, ಮಾತನಾಡಿ, ಕೋಟೇಶ್ವರ ಸೇವಾ ಟ್ರಸ್ಟ್ ದೇಗುಲದ ಅಭಿವೃದ್ಧಿ ಕಾರ್ಯದಲ್ಲಿ ಟ್ರಸ್ಟಿನ ಸದಸ್ಯರ ನೆರವಿನೊಡನೆ ದೇಗುಲದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದೆ. ಪರಿಸರ ಸ್ವಚ್ಛತೆ ಹಾಗೂ ನೈರ್ಮಲ್ಯತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಿವಿಧ ಸೇವಾ ಕಾರ್ಯ ಮಾಡಿರುವ ಟ್ರಸ್ಟ್ ಮುಂದೆ ಕೂಡ ಸಹಕಾರ ಮನೋಭಾವದಿಂದ ಕೆಲಸ ಕಾರ್ಯ ಮಾಡಲಾಗುವುದು ಎಂದರು.
ಉಪ್ಪುಂದ ಶಾಂತ ರಾಮಕೃಷ್ಣ ಭಟ್ ಚಾರಿಟೆಬಲ್ ಟ್ರಸ್ಟ್ ಮುಖ್ಯಸ್ಥ ಯು. ಅಶೋಕ ಭಟ್ ಬೆಂಗಳೂರು ಅವರು ದೇಗುಲದ ಹೊರಪೌಳಿಯಲ್ಲಿ 10 ಸಾವಿರ ಚದರ ಅಡಿ ಗ್ರಾನೈಟ್ ನೆಲಹಾಸಲು 25 ಲಕ್ಷ ರೂ. ನೀಡಿ, ದೇಗುಲದ ಅಭಿವೃದ್ಧಿ ಕಾರ್ಯಕ್ಕೆ ತನ್ನ ಸಹಕಾರ ಸದುಪಯೋಗವಾಗಲಿ ಎಂದರು. ರಕ್ಷಾ ಚಾರಿಟೆಬಲ್ ಟ್ರಸ್ಟ್ ಕುಂದಾಪುರ ಇದರ ಟ್ರಸ್ಟಿ ಬೆಂಗಳೂರಿನ ಉದ್ಯಮಿ ದಿನೇಶ ಕುಂದಾಪುರ ದೇಗುಲಕ್ಕೆ ನೆರಳುಮಾಡು ನಿರ್ಮಾಣಕ್ಕೆ 15 ಲಕ್ಷ ನೀಡಿ, ಶುಭಹಾರೈಸಿದರು. ಹೂದೋಟ ನಿರ್ಮಾಣ ಕಾರ್ಯಕ್ಕೆ ಗೋಪಾಡಿ ಶ್ರೀನಿವಾಸ ರಾವ್ 4 ಲಕ್ಷ ರೂ. ದೇಣಿಗೆ ನೀಡಿದ್ದು, ರಥ ಕೊಠಡಿಯ ಮುಂಭಾಗದ ರಸ್ತೆಯ ಕಾಂಕ್ರೀಟಿಕರಣಕ್ಕೆ ಸ್ಥಳೀಯ ಶಾಸಕರ ಅನುದಾನದಿಂದ ಕಿರಣ್ ಕುಮಾರ್ ಕೊಡ್ಗಿಯವರು 8 ಲಕ್ಷ ರೂ. ನೀಡಿದರು.
ದೇಗುಲದ ಕಾಮಗಾರಿಗಳಿಗೆ ನೆರವು ನೀಡಿದ ದಾನಿಗಳಾದ ಸುಧೀರ್ ಕುಮಾರ ಶೆಟ್ಟಿ ಮಾರ್ಕೋಡು, ನೇರಂಬಳ್ಳಿ ರಾಘವೇಂದ್ರ ಬೆಂಗಳೂರು, ಉದ್ಯಮಿ ಪ್ರಶಾಂತ ಕುಮಾರ್ ಶೆಟ್ಟಿ ಹುಬ್ಬಳ್ಳಿ, ಸುರೇಶ ಬೆಟ್ಟಿನ್, ರಾಜಗೋಪಾಲ ಆಚಾರ್ಯ, ಜಗದೀಶ ಮೊಗವೀರ, ವಿಟ್ಠಲ ಪೂಜಾರಿ, ಪ್ರಶಾಂತ ಕಿಣಿ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ಮಂಜುನಾಥ ದೇವಾಡಿಗ, ಕೃಷ್ಣದೇವಾ ಕಾರಂತ್ ಕೋಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೋಟೇಶ್ವರದ ಕೋಟಿಲಿಂಗೇಶ್ವರ ದೇಗುಲದ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕೋಟಿಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ, ಸಮಿತಿ ಸದಸ್ಯರಾದ ರಾಜೀವ ಶೆಟ್ಟಿ, ಗಣಪ ಪೂಜಾರಿ, ಡಾ| ಸುಧಾಕರ ಕೆ.ವಿ. ಉಷಾ ಬಂಗೇರ, ಗಾಯತ್ರಿ ಆಚಾರ್ಯ, ನೇತ್ರಾವತಿ ಉಪಸ್ಥಿತರಿದ್ದರು. ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲ ಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ ಕಿಣಿ ಕಾರ್ಯಕ್ರಮ ನಿರೂಪಿಸಿದರು. ರಾಜಗೋಪಾಲ ಆಚಾರ್ಯ ವಂದಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!