spot_img
Tuesday, September 1, 2026
spot_img

ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್: ವಿದ್ಯಾರ್ಥಿ ಶಾಖೆ ಉದ್ಘಾಟನೆ

ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (AITM) ನಲ್ಲಿ ಆಗಸ್ಟ್ 31, 2026 ರಂದು ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ (IEEE) ವಿದ್ಯಾರ್ಥಿ ಶಾಖೆಯು(STB60242177) ಯಶಸ್ವಿಯಾಗಿ ಉದ್ಘಾಟನೆಗೊಂಡಿತು. ಇದೇ ಸಂದರ್ಭದಲ್ಲಿ ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಂಜಿನಿಯರಿಂಗ್ ಸೈನ್ಸ್, ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ (IJESTM) ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ IEEE ಮಂಗಳೂರು ಉಪ-ವಿಭಾಗದ ಅಧ್ಯಕ್ಷರಾದ ಡಾ. ವೇಣುಗೋಪಾಲ ಪಿ. ಎಸ್. ಮತ್ತು ಅತಿಥಿಗಳಾಗಿ IEEE ಮಂಗಳೂರು ಉಪ-ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ವಾಸುದೇವ ಆಚಾರ್ಯ ಉಪಸ್ಥಿತರಿದ್ದರು. ಆಧುನಿಕ ಎಂಜಿನಿಯರಿಂಗ್ ವೃತ್ತಿಜೀವನವನ್ನು ಮುನ್ನಡೆಸುವಲ್ಲಿ ವೃತ್ತಿಪರ ಸದಸ್ಯತ್ವ, ವಿದ್ಯಾರ್ಥಿ ಶಾಖೆಯ ಚಟುವಟಿಕೆಗಳು ಮತ್ತು ಸಂಶೋಧನಾ ಪ್ರಕಟಣೆಗಳ ಮಹತ್ವವನ್ನು ತಿಳಿಸಿದ ಗಣ್ಯರು ನೂತನವಾಗಿ ಸ್ಥಾಪಿತವಾದ ಶಾಖೆಗೆ ಶುಭಕೋರಿದರು. ಅಂಜುಮನ್ ಸಂಸ್ಥೆಯ ಮೊಹಮ್ಮದ್ ಇಸ್ಮಾಯಿಲ್ ಜುಕಾಕು, ಮೊಹಮ್ಮದ್ ಅನ್ಸರ್ ದಮ್ದಾ ಅಬು, ಪ್ರಾಂಶುಪಾಲ ಡಾ. ಕೆ. ಫಜ್ಲುರ್ ರೆಹಮಾನ್ ಮತ್ತು ರಿಜಿಸ್ಟ್ರಾರ್ ಪ್ರೊ. ಜಾಹಿದ್ ಹಸನ್ ಖರುರಿ ಅವರು ಉಪಸ್ಥಿತರಿದ್ದರು. ಶಾಖೆಯ ಸಲಹೆಗಾರ ಡಾ. ಅನ್ವರ್ ಸಾದಿಕ್ ಸ್ವಾಗತಿಸಿದರು. ವಿದ್ಯಾರ್ಥಿ ಅಧ್ಯಕ್ಷ ಮೊಹಮ್ಮದ್ ಝೈದ್ ಶಾಖೆಯ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶಾಖೆಯ ಸಂಚಾಲಕರಾದ ಪ್ರೊ. ರೆನಿಶಾ ಪಿ. ಎಸ್. ಸಂಯೋಜಿಸಿದರು. ವಿದ್ಯಾರ್ಥಿ ಉಪಾಧ್ಯಕ್ಷ ಅಬ್ದುಲ್ ಖಾದಿರ್ ವಂದಿಸಿದರು.

ಇದೇ ಸಂದರ್ಭದಲ್ಲಿ ಇನ್ನೋವೇಶನ್ ಸ್ಟಾರ್ಟ್ಅಪ್ ಪಿಚ್ ಸ್ಪರ್ಧೆಯಲ್ಲಿ ವಿದ್ಯಾರ್ಥಿ ತಂಡಗಳು ಎಂಜಿನಿಯರಿAಗ್ ಮೂಲಮಾದರಿಗಳು ಮತ್ತು ಸ್ಟಾರ್ಟ್ಅಪ್ ಮಾದರಿಗಳನ್ನು ಪ್ರಸ್ತುತಪಡಿಸಿದವು. ವಿಶೇಷ ಆಹ್ವಾನಿತ ಮತ್ತು ಅತಿಥಿ ತೀರ್ಪುಗಾರರಾಗಿ ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥರಾದ ಡಾ. ಅಬ್ದುಲ್ಲಾ ಗುಬ್ಬಿ ಭಾಗವಹಿಸಿ ಮಹತ್ವಾಕಾಂಕ್ಷಿ ವಿದ್ಯಾರ್ಥಿ ಉದ್ಯಮಿಗಳಿಗೆ ತಾಂತ್ರಿಕ ಕಾರ್ಯಸಾಧ್ಯತೆ, ನಾವೀನ್ಯತೆ ಮತ್ತು ಮಾರುಕಟ್ಟೆ ಕುರಿತು ತಜ್ಞರ ಅಭಿಪ್ರಾಯ ನೀಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!