spot_img
Monday, July 27, 2026
spot_img

ಜೆಸಿ‌ಐ ಶಂಕರನಾರಾಯಣ ವತಿಯಿಂದ “ಕೆಸರುಸಿರು” ಕೆಸರುಗದ್ದೆ ಕ್ರೀಡಾಕೂಟ

ಶಂಕರನಾರಾಯಣ: ಜೆಸಿ‌ಐ ಶಂಕರನಾರಾಯಣದ ಅರ್ಥಪೂರ್ಣ ಕಾರ್ಯಕ್ರಮಗಳಲ್ಲಿ ಒಂದಾದ, ಕೃಷಿ ಗದ್ದೆಯಲ್ಲಿ ಆ ದಿನಗಳಲ್ಲಿ ಬೆಳೆಯುತ್ತಿದ್ದ ಸುವರ್ಣ ದಿನಗಳ ನೆನಪಿನ ಕೆಸರುಗದ್ದೆ ಕ್ರೀಡಾಕೂಟಗಳ ಸಂಗಮವಾದ “ಕೆಸರುಸಿರು” (ಹಿರಿಯರ ಬೆವರಿನ ಬಸಿರು) ಕಾರ್ಯಕ್ರಮವು ಎಡಮಕ್ಕಿ ಬೈಲಿನಲ್ಲಿ ಅತ್ಯಂತ ಅದ್ಭುತವಾಗಿ ಹಾಗೂ ಯಶಸ್ವಿಯಾಗಿ ಮೂಡಿಬಂತು.

ಜೆಸಿ‌ಐ ಸಂಸ್ಥೆಯ ಸೆಲ್ಯೂಟ್ ಸೈಲೆಂಟ್ ಸ್ಟಾರ್ ಅಭಿಯಾನದಡಿ ಸಾವಯವ ಕೃಷಿಕ, ಶ್ರೇಷ್ಠ ರೈತ ಪ್ರಶಸ್ತಿ ಪುರಸ್ಕೃತ ನರಸಿಂಹ ಶಾಂತದಾಸ್ ಶೇಟ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನಂತರ ಅವರು ಕೆಸರುಸಿರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷ ಪರಮೇಶ್ವರ ಉಡುಪ, ಐಪಿಪಿ ಪ್ರವೀಣ್ ಬಾಳೆಕೋಡ್ಲು, ಹಾಗೂ ಪೂರ್ವಾಧ್ಯಕ್ಷರುಗಳಾದ ರಾಘವೇಂದ್ರ ಕುಪ್ಪಾರು, ರಾಮಚಂದ್ರ ದೇವಾಡಿಗ, ಕೆ ಪರಮೇಶ್ವರ ಉಡುಪ, ಪ್ರವೀಣ್ ಚಂದ್ರ ಶೆಟ್ಟಿಗಾರ್, ಪ್ರಶಾಂತ್ ಶೆಟ್ಟಿ ಶಾಡಿಗುಂಡಿ, ಗುರುದತ್ ಶೇಟ್, ರಾಘವೇಂದ್ರ ಶೆಟ್ಟಿ ಹೆಬ್ಬಾಡಿ, ವಿರಾಜ್ ಶೇಟ್ ಉಪಸ್ಥಿತರಿದ್ದರು.

ಜೆಸಿ‌ಐ ಸದಸ್ಯರುಗಳಾದ ವಿನಯ್ ದೇವಾಡಿಗ, ಸರ್ವೋತ್ತಮ ಶೆಟ್ಟಿ, ನಾಗರಾಜ್ ಶೆಟ್ಟಿ ಸೌಡ, ಯೋಗೀಶ್ ದೇವಾಡಿಗ ಹಂಚಿನಮನೆ, ನಾರಾಯಣ ದೇವಾಡಿಗ, ಕೇಶವ ಮಕ್ಕೀಮನೆ, ಸಂದೀಪ್ ನಾಯ್ಕ, ಪ್ರತಿಮಾ ಶೆಟ್ಟಿ, ಚೈತ್ರ ಪಿ ಶೆಟ್ಟಿ, ಜೆಸಿ ಗೀತಾ ಆರ್ ಚಾತ್ರಮಕ್ಕಿ, ಪಲ್ಲವಿ ಪ್ರವೀಣ್, ಲತಾ ಆರ್ ಕುಪ್ಪಾರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಜೆಸಿ‌ಐ ಶಂಕರನಾರಾಯಣದ ಅಧ್ಯಕ್ಷರಾದ ಜೆ‌ಎಫ್‌ಎಂ ಯೋಗೇಶ್ ಕಾಂಚನ್ ಸ್ವಾಗತಿಸಿದರು. ರಕ್ಷತ್ ಜೆಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ರಂಜಿತ್ ಕುಮಾರ್ ಶೆಟ್ಟಿ ವಂದಿಸಿದರು. ರಾಘವೇಂದ್ರ ಚಾತ್ರಮಕ್ಕಿ ಕಾರ್ಯಕ್ರಮ ನಿರೂಪಿಸಿದರು.

ಗದ್ದೆಯಲ್ಲಿಯೇ ಹಾಳೇ ತಟ್ಟೆ ಗಂಜಿ ಊಟ, ಡಿಜೆ ಡ್ಯಾನ್ಸ್ ಮತ್ತು ಹಿರಿಯರು-ಮಕ್ಕಳು-ಮಹಿಳೆಯರಿಗೆ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳು ಎಲ್ಲರ ಮನ ಸೆಳೆದವು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!