spot_img
Monday, July 27, 2026
spot_img

ಆಗಸ್ಟ್ 7-8: ಆಳ್ವಾಸ್‍ನಲ್ಲಿ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ 2026’

ಕುಂದಾಪುರ: ದೇಶದ ಯುವಜನರ ಉದ್ಯೋಗ ಕನಸುಗಳಿಗೆ ಬಲ ತುಂಬುತ್ತಿರುವ ‘ಆಳ್ವಾಸ್ ಪ್ರಗತಿ’ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಅತಿದೊಡ್ಡ ಉಚಿತ ಬೃಹತ್ ಉದ್ಯೋಗ ಮೇಳವಾಗಿದೆ. ಕಳೆದ ಎರಡು ದಶಕಗಳಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠ್ಠಾನವು ಈ ಅಭೂತಪೂರ್ವ ಉದ್ಯೋಗ ಅಭಿಯಾನವನ್ನು ನಿರಂತರವಾಗಿ ಆಯೋಜಿಸುತ್ತಿದ್ದು, ಇದೀಗ 16ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ 2026’ ಆಗಸ್ಟ್ 7 ಮತ್ತು 8 ರಂದು ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್‍ನಲ್ಲಿ ನಡೆಯಲಿದೆ ಎಂದು  ಆಳ್ವಾಸ್ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ತಿಳಿಸಿದರು.

ಅವರು ಕುಂದಾಪುರ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

2007ರಲ್ಲಿ ಆರಂಭಗೊಂಡ ‘ಆಳ್ವಾಸ್ ಪ್ರಗತಿ’ ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ಉದ್ಯಮ ಸಂಸ್ಥೆಗಳು ಮತ್ತು ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ರಾಜ್ಯದ ಅತ್ಯಂತ ವಿಶ್ವಾಸಾರ್ಹ ಉದ್ಯೋಗ ಮೇಳಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಸಾಮಾಜಿಕ ಹೊಣೆಗಾರಿಕೆ ಉಪಕ್ರಮದ ಭಾಗವಾಗಿ ಈ ಬೃಹತ್ ಉದ್ಯೋಗ ಮೇಳವನ್ನು ಸಂಪೂರ್ಣ ಉಚಿತವಾಗಿ ಆಯೋಜಿಸಲಾಗುತ್ತಿದ್ದು, ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಭಾಗಗಳ ಅರ್ಹ ಯುವಜನತೆಗೆ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದೆ ಎಂದರು.

ಕಳೆದ ಆವೃತ್ತಿಯ ಆಳ್ವಾಸ್ ಪ್ರಗತಿಯಲ್ಲಿ 2,873 ಮಂದಿಗೆ ಸ್ಥಳದಲ್ಲೇ ಉದ್ಯೋಗದ ಆಫರ್‍ಗಳು ಲಭಿಸಿದರೆ, 3,734 ಅಭ್ಯರ್ಥಿಗಳು ವಿವಿಧ ಸಂಸ್ಥೆಗಳ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗೆ ಆಯ್ಕೆಯಾಗಿದ್ದರು. ಇದುವರೆಗೆ ಆಳ್ವಾಸ್ ಪ್ರಗತಿ ವೇದಿಕೆಯ ಮೂಲಕ ಒಟ್ಟು 40,848 ಮಂದಿ ಸ್ಥಳದಲ್ಲೇ ಉದ್ಯೋಗಾವಕಾಶಗಳನ್ನು ಪಡೆದು ತಮ್ಮ ವೃತ್ತಿಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಂಡಿದ್ದರೆ, 66,432 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್  ಗೊಂಡು ಮುಂದಿನ ಹಂತದ ಆಯ್ಕೆಯಾಗಿದ್ದಾರೆ ಎಂದರು.

ಈ ಬಾರಿಯ ಉದ್ಯೋಗಮೇಳದಲ್ಲಿ ಐಟಿ/ಐಟಿಇಎಸ್, ಉತ್ಪಾದನಾ ವಲಯ, ಆರೋಗ್ಯ ಮತ್ತು ಔಷಧ, ಬ್ಯಾಂಕಿಂಗ್ ಮತ್ತು ಹಣಕಾಸು, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆತಿಥ್ಯ, ಮಾಧ್ಯಮ, ಎಲೆಕ್ಟ್ರಾನಿಕ್ಸ್, ದೂರಸಂಪರ್ಕ ಹಾಗೂ ನಿರ್ಮಾಣ ಕ್ಷೇತ್ರಗಳ ಪ್ರಮುಖ ಕಂಪನಿಗಳು ಭಾಗವಹಿಸುತ್ತಿವೆ ಎಂದರು.

ಆಳ್ವಾಸ್ ಪ್ರಗತಿಯ ಸಂಪೂರ್ಣ ಮಾಹಿತಿಯನ್ನು  https://www.alvaspragati.com  ವೆಬ್‍ಸೈಟ್‍ನಲ್ಲಿ ನೀಡಲಾಗಿದ್ದು, ಉದ್ಯೋಗಾಕಾಂಕ್ಷಿಗಳು ನಿಯಮಿತವಾಗಿ ವೆಬ್‍ಸೈಟ್‍ನ್ನು ಪರಿಶೀಲಿಸಲು ಕೋರಲಾಗಿದೆ. ಸಂಪೂರ್ಣ ಉಚಿತವಾಗಿರುವ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆನ್‍ಲೈನ್ ನೋಂದಣಿ ಕಡ್ಡಾಯವಾಗಿದೆ. ನೋಂದಣಿಗಾಗಿ: https://alvaspragati.com/candidate-registration

ಇದುವರೆಗೆ 320 ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಈ ವರ್ಷ 350ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ವರ್ಷದ ಆಳ್ವಾಸ್ ಪ್ರಗತಿ 2026ರಲ್ಲಿ 23972 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಇವುಗಳಲ್ಲಿ 5228 ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ, ಡಿಪ್ಲೋಮಾ ಹಾಗೂ ಐಟಿಐ 8748, ಯಾವುದೇ ಪದವೀಧರರಿಗೆ 3473, ಬಿಇ/ಬಿಟೆಕ್ ಗೆ 1601, ಕೊರ್ ಐಟಿ 180, ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್ , ಎಂಬಿಎ ಹಾಗೂ ಸ್ನಾತಕೋತ್ತರ -1843 ಹಾಗೂ ಬಿಕಾಮ್ ಹಾಗೂ ಬಿಬಿಎ ಪದವೀಧÀರರಿಗೆ 2149 ಹುದ್ದೆಗಳು ಲಭ್ಯವಿವೆ ಎಂದರು.

16ನೇ ಆವೃತ್ತಿಯ ಆಳ್ವಾಸ್ ಪ್ರಗತಿಯಲ್ಲಿ 17 ಪ್ರಮುಖ ಆತಿಥ್ಯವಲಯದ ಸಂಸ್ಥೆಗಳು ನೋಂದಾಯಿಸಿಕೊಂಡಿವೆ. ಲೆಮನ್ ಟ್ರೀ ಹೊಟೇಲ್ಸ್, ಗೋಕುಲಂ ಗ್ರೂಪ್ ಆಫ್ ಹೊಟೇಲ್ಸ್, ಪೆನಿನ್ಸುಲಾ ಡೆಲ್ಮಾರ್, ಪಿವಿಆರ್ ಐನಾಕ್ಸ್, ತಾಜ್ ಸ್ಯಾಟ್ಸ್, ತಮಾರಾ ಕೂರ್ಗ್ ಸೇರಿದಂತೆ ಹಲವು ಪ್ರತಿಷ್ಠಿತ ಆತಿಥ್ಯ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಹೋಟೆಲ್ ನಿರ್ವಹಣಾ ಪದವೀಧರರು ಹಾಗೂ ಬಿ.ಕಾಂ, ಬಿಸಿಎ, ಬಿಎ, ಬಿಎಸ್ಸಿ ಮತ್ತು ಎಂ.ಕಾಂ ಪದವೀಧರರಿಗಾಗಿ 240ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ.
ಏರ್‍ಟೆಲ್, ಆರ್‍ವಿ ಇನ್ಫೋಟೈನ್‍ಮೆಂಟ್, ಜಿಯೋ ಸೇರಿದಂತೆ ಪ್ರಮುಖ ದೂರಸಂಪರ್ಕ ಸಂಸ್ಥೆಗಳು ನೇಮಕಾತಿ ನಡೆಸುತ್ತಿವೆ.

ಇದುವರೆಗೆ 320 ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಈ ವರ್ಷ 350ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ªರ್ಷದ ಆಳ್ವಾಸ್ ಪ್ರಗತಿ 2026ರಲ್ಲಿ 23972 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಇವುಗಳಲ್ಲಿ 5228 ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ, ಡಿಪ್ಲೋಮಾ ಹಾಗೂ ಐಟಿಐ 8748, ಯಾವುದೇ ಪದವೀಧರರಿಗೆ 3473, ಬಿಇ/ಬಿಟೆಕ್ ಗೆ 1601, ಕೊರ್ ಐಟಿ 180, ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್ , ಎಂಬಿಎ ಹಾಗೂ ಸ್ನಾತಕೋತ್ತರ -1843 ಹಾಗೂ ಬಿಕಾಮ್ ಹಾಗೂ ಬಿಬಿಎ ಪದವೀಧರರಿಗೆ 2149 ಹುದ್ದೆಗಳು ಲಭ್ಯವಿವೆ.

ಎಕ್ಸ್‍ಪರ್ಟೀಸ್ ಕಂಪನಿ ಡಿಪೆÇ್ಲಮಾ ಮತ್ತು ಐಟಿಐ ಅಭ್ಯರ್ಥಿಗಳಿಗಾಗಿ ಗಲ್ಫ್ ದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಎಂಬಿಎ, ಎಂಎಚ್‍ಆರ್‍ಡಿ, ಎಂಎಸ್‍ಡಬ್ಲ್ಯು ಮತ್ತು ಬಿಎಸ್ಡಬ್ಲ್ಯು ಅಭ್ಯರ್ಥಿಗಳಿಗಾಗಿ 70ಕ್ಕೂ ಹೆಚ್ಚು ಮಾನವ ಸಂಪನ್ಮೂಲ ಹುದ್ದೆಗಳು ಲಭ್ಯವಿವೆ. ಉತ್ಪಾದನಾ ಕ್ಷೇತ್ರದಲ್ಲಿ 63 ಕಂಪೆನಿಗಳು ನೋಂದಾಯಿಸಿಕೊಂಡಿದ್ದು, ಬಿಇ/ಬಿಟೆಕ್ (ಮೆಕ್ಯಾನಿಕಲ್), ಐಟಿಐ, ಡಿಪ್ಲಮೋ ಹಾಗೂ ಇತರೆ ಪದವೀಧರರಿಗೆ ವ್ಯಾಪಕ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ.

ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸೊಲ್ಯೂಷÀನ್ಸ್ ಪ್ರೈವೇಟ್ ಲಿಮಿಟೆಡ್ (ಕೋಲಾರ) ಮಹಿಳಾ ಅಭ್ಯರ್ಥಿಗಳಿಗಾಗಿ ವಿಶೇಷ ನೇಮಕಾತಿ ಅಭಿಯಾನವನ್ನು ನಡೆಸುತ್ತಿದೆ. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವಾ ಕ್ಷೇತ್ರದಲ್ಲಿ 35 ಸಂಸ್ಥೆಗಳ ಮೂಲಕ 150ಕ್ಕೂ ಹೆಚ್ಚು ಕೋರ್ ಮಾಹಿತಿ ತಂತ್ರಜ್ಞಾನ ಹುದ್ದೆಗಳು ಹಾಗೂ 3,500ಕ್ಕೂ ಹೆಚ್ಚು ನಾನ್-ಐಟಿ ಹುದ್ದೆಗಳು ಲಭ್ಯವಿದ್ದು, ಯಾವುದೇ ಪದವೀಧರರು, ಬಿಇ/ಬಿಟೆಕ್, ಬಿಸಿಎ, ಎಂಸಿಎ ಮತ್ತು ಬಿಎಸ್ಸಿ (ಐಟಿ) ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶಗಳಿವೆ.

ಎಎನ್‍ಝಡ್, ಇಎಕ್ಸ್‍ಎಲ್, ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ ಸೇರಿದಂತೆ 23ಕ್ಕೂ ಹೆಚ್ಚು ಸಂಸ್ಥೆಗಳು ವಾಣಿಜ್ಯ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗಾಗಿ ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ಕ್ಷೇತ್ರದಲ್ಲಿ ಪ್ರಮುಖ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ.

ನಾರಾಯಣ ಹೃದಯಾಲಯ, ವೊಕ್ಹಾರ್ಟ್ ಆಸ್ಪತ್ರೆ ಮತ್ತು ಸಕ್ರಾ ವಲ್ರ್ಡ್ ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳು ಮುಂಬೈ ಕೇಂದ್ರಗಳಿಗೆ ಆರೋಗ್ಯ ಕ್ಷೇತ್ರದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿವೆ.

ಮಹೀಂದ್ರ ಫೈನಾನ್ಸ್ ಸಂಸ್ಥೆಯು ಪ್ರದೇಶೀಯ ವ್ಯವಹಾರ ವ್ಯವಸ್ಥಾಪಕ ಹುದ್ದೆಗೆ ವಾರ್ಷಿಕ 8 ಲಕ್ಷ ರೂಪಾಯಿವರೆಗಿನ ವೇತನದ ಪ್ಯಾಕೇಜ್‍ನ್ನು ನೀಡುತ್ತಿದೆ.

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ದೇಶೀಯ ಉತ್ಪನ್ನ ಅಭಿವೃದ್ಧಿಗೆ ಒತ್ತು ನೀಡಿರುವ ಸಂಸ್ಥೆಗಳು ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ವೇತನದ ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ. ಮಾರಾಟ ಕ್ಷೇತ್ರದಲ್ಲಿ ಕೋಡ್‍ಯಂಗ್ ಸಂಸ್ಥೆಯು ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ವಾರ್ಷಿಕ 8 ಲಕ್ಷ ರೂಪಾಯಿವರೆಗೆ ವೇತನದ ಪ್ಯಾಕೇಜ್ ಹೊಂದಿರುವ ಉದ್ಯೋಗಾವಕಾಶಗಳನ್ನು ನೀಡುತ್ತಿದೆ.

ವಿಶೇಷವಾಗಿ ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ, ಮ್ಯಾನೇಜ್ಮೆಂಟ್, ಬೇಸಿಕ್ ಸೈನ್ಸ್‍ಸ್, ನಸಿರ್ಂಗ್, ಐಟಿಐ, ಡಿಪೆÇ್ಲಮಾ ಸೇರಿದಂತೆ ವಿವಿಧ ವಿಭಾಗಗಳ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳು ಲಭ್ಯವಿವೆ. ಪಿಯುಸಿ, ಎಸ್‍ಎಸ್‍ಎಲ್‍ಸಿ ಹಾಗೂ ಇತರೆ ತಾಂತ್ರಿಕ ಮತ್ತು ಕೌಶಲ್ಯಾಧಾರಿತ ಅರ್ಹತೆಗಳನ್ನು ಹೊಂದಿರುವ ನಿಪುಣ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.

ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪೆÇ್ಲಮಾ, ನಸಿರ್ಂಗ್, ವೈದ್ಯಕೀಯ, ಪ್ಯಾರಾ ಮೆಡಿಕಲ್, ಬಿ.ಟೆಕ್ ಅಥವಾ ಯಾವುದೇ ಇತರೆ ಕೋರ್ಸ್‍ಗಳನ್ನು ಪೂರ್ಣಗೊಳಿಸಿರುವ ಅಥವಾ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಭಾಗವಹಿಸಬಹುದು.
ಆಳ್ವಾಸ್ ಪ್ರಗತಿ 2026ರ ಸಂದರ್ಶನವನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ತರಬೇತಿ ಮತ್ತು ಮಾರ್ಗದರ್ಶನವನ್ನು ಒದಗಿಸುವ ಉದ್ದೇಶದಿಂದ, ಆಳ್ವಾಸ್ ತಜ್ಞರ ತಂಡವು ಬೆಳ್ತಂಗಡಿ, ಬ್ರಹ್ಮಾವರ, ಬೈಂದೂರು, ಬಂಟ್ವಾಳ, ಮೂಡುಬಿದಿರೆ, ಕಾಪು, ಪುತ್ತೂರು ಹಾಗೂ ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಓರಿಯೆಂಟೇಶನ್ ಮತ್ತು ಸಂದರ್ಶನ ಸಿದ್ಧತಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.

2026ರ ಶೈಕ್ಷಣಿಕ ವರ್ಷದಲ್ಲಿ ಅಥವಾ ಅದಕ್ಕೂ ಮೊದಲು ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು (ಫ್ರೆಶರ್ಸ್) ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳು ಆಳ್ವಾಸ್ ಪ್ರಗತಿ 2026ರಲ್ಲಿ ಭಾಗವಹಿಸಲು ಅವಕಾಶವಿದೆ ಎಂದರು.

ಆಳ್ವಾಸ್ ಪ್ರಗತಿ 2026ರ ಸಂಪೂರ್ಣ ಮಾಹಿತಿಗಾಗಿ www.alvaspragati.com ವೆಬ್‍ಸೈಟ್‍ಗೆ ಭೇಟಿ ನೀಡಬಹುದು. ಹೊರ ಜಿಲ್ಲೆಗಳಿಂದ ಆಗಮಿಸುವ ಅಭ್ಯರ್ಥಿಗಳಿಗೆ ಆಗಸ್ಟ್ 6ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಐಟಿಐ ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ವ್ಯವಸ್ಥೆ ಒದಗಿಸಲಾಗುತ್ತದೆ ಎಂದರು.

ಎಲ್ಲಾ ಅಭ್ಯರ್ಥಿಗಳಿಗೆ ಆನ್‍ಲೈನ್ ನೋಂದಣಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9611750531 / 9741440490 / 9008907716 / 7975223865 ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪ್ರಗತಿ ಉತ್ಪಾದನಾ ವಲಯದ ಮುಖ್ಯಸ್ಥ ಡಾ.ಕುಮಾರಸ್ವಾಮಿ, ಆಳ್ವಾಸ್ ನುಡಿಸಿರಿ ಕುಂದಾಪುರ ಇದರ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು.

 

ಎಲ್ಲೆಲ್ಲಿ ಉದ್ಯೋಗವಕಾಶ?
ಉತ್ಪಾದನ ವಲಯದಲ್ಲಿ ಒಟ್ಟು 63ಕ್ಕೂ ಹೆಚ್ಚಿನ ಕಂಪೆನಿಗಳು ನೋಂದಾಯಿಸಿಕೊಂಡಿವೆ. ಈ ವಲಯದ 26 ಕಂಪೆನಿಗಳು ಮ್ಯಾಕನಿಕಲ್ ಇಂಜಿನಿಯರಿಂಗ್ ಅಭ್ಯರ್ಥಿಗಳಿಗಾಗಿ ಸುಮಾರು 200 ಉದ್ಯೋಗಾವಕಾಶಗಳನ್ನು ನೀಡುತ್ತಿವೆ. 17 ಕಂಪೆನಿಗಳು ವಾಣಿಜ್ಯ ಪದವೀಧರರಿಗಾಗಿ ಸುಮಾರು 60 ಉದ್ಯೋಗವನ್ನು ನೀಡುತ್ತಿವೆ.

10 ಕಂಪೆನಿಗಳು ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಅಭ್ಯರ್ಥಿಗಳಿಗಾಗಿ ಸುಮಾರು 60 ಉದ್ಯೋಗಾವಕಾಶಗಳನ್ನು ಪ್ರಕಟಿಸಿವೆ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ (ಕೋಲಾರ) ಮಹಿಳಾ ಅಭ್ಯರ್ಥಿಗಳಿಗಾಗಿ ವಿಶೇ?À ನೇಮಕಾತಿ ಅಭಿಯಾನವನ್ನು ಹಮ್ಮಿಕೊಂಡಿದೆ.ಉತ್ಪಾದನಾ ಕ್ಷೇತ್ರದ ಸಂಸ್ಥೆಗಳು ಐಟಿಐ ಮತ್ತು ಡಿಪ್ಲಮೋ ಅಭ್ಯರ್ಥಿಗಳಿಗಾಗಿ ಸುಮಾರು 1,000 ಉದ್ಯೋಗಾವಕಾಶಗಳನ್ನು ಪ್ರಕಟಿಸಿವೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್, ಬುಹ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸನ್ಸೆರಾ ಇಂಜಿನಿಯರಿಂಗ್, ಟೊಯೋಟಾ ಕಿರ್ಲೋಸ್ಕರ್ ಆಟೋ ಪಾಟ್ರ್ಸ್ ಪ್ರೈವೇಟ್ ಲಿಮಿಟೆಡ್, ಏಸ್ ಡಿಸೈನರ್ಸ್ ಲಿಮಿಟೆಡ್, ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ಟೈಲ್ ಮೆಷಿನರಿ ಪ್ರೈವೇಟ್ ಲಿಮಿಟೆಡ್, ಅಜಾಕ್ಸ್ ಇಂಜಿನಿಯರಿಂಗ್ ಲಿಮಿಟೆಡ್, ಕೆನ್ನಮೆಟಲ್ ಮತ್ತು ಸಾಸ್ಮೋಸ್ ಹೆಟ್ ಟೆಕ್ನಾಲಜೀಸ್ ಸಂಸ್ಥೆಗಳು ಆಳ್ವಾಸ್ ಪ್ರಗತಿ 2026ರಲ್ಲಿ ಭಾಗವಹಿಸುತ್ತಿರುವ ಪ್ರಮುಖ ಉತ್ಪಾದನಾ ಕ್ಷೇತ್ರದ ಕಂಪೆನಿಗಳು

ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವಾ ವಲಯ ಒಟ್ಟು 35ಕ್ಕೂ ಹೆಚ್ಚು ಕಂಪೆನಿಗಳು ನೋಂದಾಯಿಸಿಕೊಂಡಿವೆ. ಇನ್ಫೋಸಿಸ್ ಬಿಪಿಎಂ, ಟೆಕ್ ಮಹೀಂದ್ರ ಬಿಪಿಒ ಲಿಮಿಟೆಡ್, ವಿನ್‍ಮ್ಯಾನ್ ಸಾಫ್ಟ್‍ವೇರ್, ಯುನಿಫೈ ಸಿಎಕ್ಸ್, ಗುಂಬಿ ಸಾಫ್ಟ್‍ವೇರ್, ಟಾಸ್ಕ್‍ಮಾಂಕ್ ಟೆಕ್ನಾಲಜೀಸ್, ಅವಿಷ್ಕಾರ್ ಎಐ, ಇನ್‍ವೆಂಜರ್ ಟೆಕ್ನಾಲಜೀಸ್, ಕಾನ್ಸೆಂಟ್ರಿಕ್ಸ್, ಟೆಲಿಪರ್ಫಾರ್ಮೆನ್ಸ್ ಸೇರಿದಂತೆ ಅನೇಕ ಪ್ರಮುಖ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ.

150ಕ್ಕೂ ಹೆಚ್ಚು ಕೋರ್ ಐಟಿ ಕ್ಷೇತ್ರದ ಹುದ್ದೆಗಳು (ಪೈಥಾನ್, ಫ್ಲಟರ್, ಸಾಫ್ಟ್‍ವೇರ್ ಡೆವಲಪರ್ಸ್) ಹಾಗೂ 3,500ಕ್ಕೂ ಹೆಚ್ಚು ನಾನ್-ಕೋರ್ ಹುದ್ದೆಗಳು (ಕಸ್ಟಮರ್ ಸಪೋರ್ಟ- ವೈಸ್ ಹಾಗೂ ನಾನ್ ವೈಸ್) ಲಭ್ಯವಿವೆ.
ಟೆಕ್ ಮಹೀಂದ್ರ ಬಿಪಿಒ ಲಿಮಿಟೆಡ್, ಯುನಿಫೈ ಸಿಎಕ್ಸ್, ಡೇಟಾಕ್ಯೂ ಸಿಸ್ಟಮ್ಸ್, ಅಕೋಲೇಡ್ ಟೆಕ್ ಸೊಲ್ಯೂ?Àನ್ಸ್ ಮತ್ತು ವುಡ್‍ರಾಕ್ ಇನ್ಫೋಟೆಕ್ ಸಂಸ್ಥೆಗಳು ಬಿಎಸ್ಡಬ್ಲ್ಯು, ಬಿಎಚ್‍ಆರ್‍ಡಿ, ಎಂಎಸ್‍ಡಬ್ಲ್ಯು, ಎಂಎಚ್‍ಆರ್‍ಡಿ ಮತ್ತು ಎಂಬಿಎ ಅಭ್ಯರ್ಥಿಗಳಿಗಾಗಿ 30ಕ್ಕೂ ಹೆಚ್ಚು ಹೆಚ್‍ಆರ್ ಹುದ್ದೆಗಳನ್ನು ನೀಡುತ್ತಿವೆ.

ವಿನ್‍ಮ್ಯಾನ್ ಸಾಫ್ಟ್‍ವೇರ್, ಡೇಟಾವೆಕ್ಸ್ ಎಐ ಪ್ರೈವೇಟ್ ಲಿಮಿಟೆಡ್, ಗುಂಬಿ ಸಾಫ್ಟ್‍ವೇರ್, ಡೇಟಾಕ್ಯೂ ಸಿಸ್ಟಮ್ಸ್, ತನಿಯಾ ಟೆಕ್ನಾಲಜೀಸ್ ಮತ್ತು ಅಕೋಲೇಡ್ ಟೆಕ್ ಸೊಲ್ಯೂಷÀನ್ಸ್ ಸಂಸ್ಥೆಗಳು ಬಿಇ/ಬಿಟೆಕ್, ಬಿಎಸ್ಸಿ (ಮಾಹಿತಿ ತಂತ್ರಜ್ಞಾನ), ಬಿಸಿಎ ಮತ್ತು ಎಂಸಿಎ ಅಭ್ಯರ್ಥಿಗಳಿಗಾಗಿ 100ಕ್ಕೂ ಹೆಚ್ಚು ಕೋರ್ ಐಟಿ ಹುದ್ದೆಗಳನ್ನು ಪ್ರಕಟಿಸಿವೆ.

ಕಾಕುಂಜೆ ಸಾಫ್ಟ್‍ವೇರ್ಸ್ ಹಾಗೂ ಡಿಸ್ಕವರ್ ಡಾಲರ್ಸ್ ಐಟಿ ಪದವೀಧದರರನ್ನು ನೇಮಕಾತಿ ಮಾಡಿಕೊಳ್ಳಲಿದೆ.
ಬ್ಯಾಂಕಿಂಗ್, ಹಣಕಾಸು ಮತ್ತು ವಿಮಾ ವಲಯದಲ್ಲಿ 23 ಕಂಪೆನಿಗಳು 1,900ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಿವೆ. ಎಎನ್‍ಝಡ್, ಇಎಕ್ಸ್‍ಎಲ್, ಭಾರತ್ ಫೈನಾನ್ಷಿಯಲ್ ಇನ್‍ಕ್ಲೂಷನ್ ಲಿಮಿಟೆಡ್, ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್, ಮಹೀಂದ್ರ ಫೈನಾನ್ಸ್, ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಸೇರಿದಂತೆ ಹಲವು ಸಂಸ್ಥೆಗಳು ಬಿಬಿಎಮ್, ಬಿ.ಕಾಂ, ಎಂಬಿಎ ಮತ್ತು ಎಂ.ಕಾಂ ಪದವೀಧರರನ್ನು ಆಪರೇಷನಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಸಂಸ್ಥೆಯು ಎಂಬಿಎ ಪೈನಾನ್ಸ್ ಅಭ್ಯರ್ಥಿಗಳಿಗಾಗಿ ‘ಕ್ರೆಡಿಟ್ ಆಪರೇಷನ್ ಎಕ್ಸಿಕ್ಯೂಟಿವ್’ ಹುದ್ದೆಗೆ 20 ಉದ್ಯೋಗಾವಕಾಶಗಳನ್ನು ಪ್ರಕಟಿಸಿದೆ. ಮುತ್ತೂಟ್ ಫೈನಾನ್ಸ್, ಮುತ್ತೂಟ್ ಮೈಕ್ರೋಫಿನ್ ಲಿಮಿಟೆಡ್, ಭಾರತ್ ಫೈನಾನ್ಷಿಯಲ್ ಇನ್‍ಕ್ಲೂನ್ ಸೇರಿದಂತೆ ಇತರೆ ಭಾಗವಹಿಸುವ ಸಂಸ್ಥೆಗಳು ಮಾನವ ಸಂಪನ್ಮೂಲ ವಿಭಾಗಕ್ಕೆ ಸಂಬಂಧಿಸಿದ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಹುಡುಕುತ್ತಿವೆ. ಈ ವಲಯದಲ್ಲಿ ಎಂಬಿಎ (ಹೆಚ್‍ಆರ್), ಎಂಎಸ್‍ಡಬ್ಲ್ಯು ಹಾಗೂ ಸಮಾನ ಅರ್ಹತೆಯ ಅಭ್ಯರ್ಥಿಗಳಿಗಾಗಿ 16 ಹೆಚ್‍ಆರ್ ಹುದ್ದೆಗಳು ಲಭ್ಯವಿವೆ.

ಆರೋಗ್ಯ ವಲಯದಲ್ಲಿ 25ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳು ನೋಂದಾಯಿಸಿಕೊಂಡಿದ್ದು, ವಿವಿಧ ಆರೋಗ್ಯ ಸೇವಾ ವಿಭಾಗಗಳಲ್ಲಿ 1,700ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಿವೆ. ಈ ಉದ್ಯೂಗ ಮೇಳದಲ್ಲಿ 750ಕ್ಕೂ ಹೆಚ್ಚು ನಸಿರ್ಂಗ್ ಹುದ್ದೆಗಳು, 100ಕ್ಕೂ ಹೆಚ್ಚು ವೈದ್ಯರ ಹುದ್ದೆಗಳು, 500ಕ್ಕೂ ಹೆಚ್ಚು ಸಹಾಯಕ ಆರೋಗ್ಯ ವಿಜ್ಞಾನ ವೃತ್ತಿಪರರ ಹುದ್ದೆಗಳು ಲಭ್ಯವಿವೆ. ಇದಲ್ಲದೆ ಫಿಸಿಯೋಥೆರಪಿ, ವೈದ್ಯಕೀಯ ಪ್ರಯೋಗಾಲಯ ಹಾಗೂ ಇತರೆ ಆರೋಗ್ಯ ಸಂಬಂಧಿತ ಪದವೀಧರರು ಮತ್ತು ಹಾಸ್ಪಿಟಲ್ ಆಡ್ಮಿಸ್ಟ್ರೇಷನ್ ವಿಭಾಗಗಳ ಅಭ್ಯರ್ಥಿಗಳಿಗೆ ತಲಾ 50ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಈ ಉದ್ಯೋಗ ಮೇಳದಲ್ಲಿ ವೊಕ್ಹಾರ್ಟ್ ಆಸ್ಪತ್ರೆ (ಮುಂಬೈ), ಸಕ್ರಾ ವಲ್ರ್ಡ್ ಆಸ್ಪತ್ರೆ (ಜಪಾನ್ ಸಹಯೋಗದ ಸಂಸ್ಥೆ), ಅಪೆÇೀಲೋ ಆಸ್ಪತ್ರೆಗಳು ಸೇರಿದಂತೆ ಅನೇಕ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳು ಭಾಗವಹಿಸುತ್ತಿವೆ.

ಔಷಧ ಕ್ಷೇತ್ರದಲ್ಲಿ 6 ಪ್ರಮುಖ ಔಷÀಧ ತಯಾರಿಕ ಕಂಪನಿಗಳಿಂದ 180ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಎಂ.ಎಸ್‍ಸಿ ರಸಾಯನಶಾಸ್ತ್ರ ಮತ್ತು ಎಂ.ಫಾರ್ಮಾ ಅಭ್ಯರ್ಥಿಗಳಿಗಾಗಿ 50ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿವೆ. ಬಿ.ಎಸ್‍ಸಿ ಪದವೀಧರರಿಗೆ 60ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಆರ್ ಎಲ್ ಫೈನ್-ಕೆಮ್, ಮೆಡಾರ್ಗಾನಿಕ್ಸ್, ಯೂರೋಫಿನ್ಸ್, ವಸುಧಾ ಫಾರ್ಮ ಹಾಗೂ ಸೋಲರಾ ಆಕ್ಟಿವ್ ಫಾರ್ಮಾ ಮುಂತಾದ ಕಂಪೆನಿಗಳು ಭಾಗವಹಿಸಲಿವೆ.

ಮಾಧ್ಯಮ ವಲಯದಲ್ಲಿ 8ಕ್ಕೂ ಅಧಿಕ ಪ್ರಮುಖ ಮಾಧ್ಯಮ ಸಂಸ್ಥೆಗಳು ಭಾಗವಹಿಸುತ್ತಿದ್ದು, 300ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುತ್ತಿವೆ.ದಿ ಮೈಸೂರು ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್, ಮೆಟ್ರೋಪಾಲಿಟನ್ ಮೀಡಿಯಾ ಕಂಪನಿ (ಟೈಮ್ಸ್ ಆಫ್ ಇಂಡಿಯಾ, ವಿಜಯ ಕರ್ನಾಟಕ), ಮಣಿಪಾಲ್ ಮೀಡಿಯಾ ನೆಟ್‍ವರ್ಕ್ (ಉದಯವಾಣಿ, ತರಂಗ, ರೂಪತಾರ), ಹೊಸದಿಗಂತ, ಪವರ್ ಟಿವಿ ಸೇರಿದಂತೆ ಹಲವು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿವೆ.

ಮುದ್ರಣ ಮಾಧ್ಯಮ, ದೂರದರ್ಶನ, ಮನರಂಜನಾ ಮಾಧ್ಯಮ, ಡಿಜಿಟಲ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವ್ಯಾಪಕ ಉದ್ಯೋಗಾವಕಾಶಗಳು ಲಭ್ಯವಿವೆ. ವರದಿಗಾರರು, ಗ್ರಾಫಿಕ್ ಡಿಸೈನರ್ಸ್, ಮಾರುಕಟ್ಟೆ ಪ್ರತಿನಿಧಿ, ಜಾಹೀರಾತು ವಿಭಾಗದ ಸಿಬ್ಬಂದಿ, ವೀಡಿಯೊ ಎಡಿಟರ್, ಅನುವಾದಕರು, ಕಂಟೆಂಟ್ ಕ್ರಿಯೇಟರ್, ಸಾಮಾಜಿಕ ಜಾಲತಾಣ ನಿರ್ವಹಣಾಕಾರ, ಪುಟ ವಿನ್ಯಾಸಕರ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಮಾರಾಟ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ 60ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುತ್ತಿದ್ದು, 4,500ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ.
ಕೋಡ್‍ಯಂಗ್, ಟಿವಿಎಸ್ ಸಪ್ಲಾಯ್ ಚೈನ್ ಮ್ಯಾನಜ್ಮೇಂಟ್, ಟಾಟಾ ಕ್ಲಾಸ್‍ಎಡ್ಜ್, ಅಕ್ಷಯಕಲ್ಪ ಫಾಮ್ರ್ಸ್ ಅಂಡ್ ಫುಡ್ಸ್, ಬ್ಲಿಂಕಿಟ್, ಬಿಗ್‍ಬಾಸ್ಕೆಟ್, ಜಸ್ಟ್‍ಡಯಲ್ ಸೇರಿದಂತೆ ಅನೇಕ ಪ್ರಮುಖ ಸಂಸ್ಥೆಗಳು ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸಲಿವೆ.
ಚಿಲ್ಲರೆ ವ್ಯಾಪಾರ, ಇ-ವಾಣಿಜ್ಯ, ವಾಹನೋದ್ಯಮ, ಗ್ರಾಹಕ ಎಲೆಕ್ಟ್ರಾನಿಕ್ಸ್, ಆಭರಣ ವ್ಯಾಪಾರ, ಹೈಪರ್‍ಮಾರ್ಕೆಟ್‍ಗಳು, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇವೆಗಳ ಕ್ಷೇತ್ರಗಳಲ್ಲಿ ವ್ಯಾಪಕ ಉದ್ಯೋಗಾವಕಾಶಗಳು ಲಭ್ಯವಿವೆ.

ನಿರ್ಮಾಣ ವಲಯದಲ್ಲಿ ಒಟ್ಟು 13 ನಿರ್ಮಾಣ ಕ್ಷೇತ್ರದ ಸಂಸ್ಥೆಗಳು ಭಾಗವಹಿಸಲು ನೋಂದಾಯಿಸಿಕೊಂಡಿದ್ದು, 300ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಘೋಷಿಸಿವೆ. ರಾಮ್ಕೋ ಸಿಮೆಂಟ್ಸ್, ಸೋಭಾ ಲಿಮಿಟೆಡ್, ಎಕ್ಸ್‍ಪರ್ಟೀಸ್ ಕಂಪನಿ, ರೋಹನ್ ಕಾಪೆರ್Çರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸ್ಟ್ರೇಕಾನ್, ಅಮರ್ ಇನ್ಫ್ರಾ ಪ್ರಾಜೆಕ್ಟ್ಸ್, ಅಗ್ರಿಮಾ ರೂಫ್ ಅಂಡ್ ಫಸಾಡ್ ಸಿಸ್ಟಮ್ಸ್ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಈ ಕ್ಷೇತ್ರದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವೀಧರರಿಗೆ 50ಕ್ಕೂ ಹೆಚ್ಚು ಉದ್ಯೋಗಾವಕಾಶಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಿಗೆ 30ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಹಾಗೂ ಬಿ.ಕಾಂ ಅಭ್ಯರ್ಥಿಗಳಿಗೆ 35 ಉದ್ಯೋಗಾವಕಾಶಗಳು ಲಭ್ಯವಿವೆ. ರಾಮ್ಕೋ ಸಂಸ್ಥೆಯು ಒಂದು ವಷರ್Àದ ಅನುಭವ ಹೊಂದಿರುವ ಬಿ.ಎಸ್‍ಸಿ ಪದವೀಧರರಿಗೆ 10 ಉದ್ಯೋಗಾವಕಾಶಗಳನ್ನು ನೀಡುತ್ತಿದೆ

16ನೇ ಆವೃತ್ತಿಯ ಆಳ್ವಾಸ್ ಪ್ರಗತಿಯಲ್ಲಿ 17 ಪ್ರಮುಖ ಆತಿಥ್ಯವಲಯದ ಸಂಸ್ಥೆಗಳು ನೋಂದಾಯಿಸಿಕೊಂಡಿವೆ. ಲೆಮನ್ ಟ್ರೀ ಹೊಟೇಲ್ಸ್, ಗೋಕುಲಂ ಗ್ರೂಪ್ ಆಫ್ ಹೊಟೇಲ್ಸ್, ಪೆನಿನ್ಸುಲಾ ಡೆಲ್ಮಾರ್, ಪಿವಿಆರ್ ಐನಾಕ್ಸ್, ತಾಜ್ ಸ್ಯಾಟ್ಸ್, ತಮಾರಾ ಕೂರ್ಗ್ ಸೇರಿದಂತೆ ಹಲವು ಪ್ರತಿಷ್ಠಿತ ಆತಿಥ್ಯ ಸಂಸ್ಥೆಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿವೆ. ಹೋಟೆಲ್ ನಿರ್ವಹಣಾ ಪದವೀಧರರು ಹಾಗೂ ಬಿ.ಕಾಂ, ಬಿಸಿಎ, ಬಿಎ, ಬಿಎಸ್ಸಿ ಮತ್ತು ಎಂ.ಕಾಂ ಪದವೀಧರರಿಗಾಗಿ 240ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ.
ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ 8 ಪ್ರಮುಖ ಸಂಸ್ಥೆಗಳು ಒಟ್ಟು 119 ಉದ್ಯೋಗಾವಕಾಶಗಳನ್ನು ಘೋಷಿಸಿವೆ. ದೇಶೀಯ ಉತ್ಪಾದನೆ ಮತ್ತು ಉತ್ಪನ್ನ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿವೆ.

ಬ್ಲ್ಯಾಕ್‍ಫ್ರಾಗ್ ಟೆಕ್ನಾಲಜೀಸ್, ಅನ್ಮಯ ಟೆಕ್ನಾಲಜೀಸ್, ಎಕ್ಸಿಕಾಂ ಟೆಕ್ನಾಲಜೀಸ್, ಬ್ರೆವೆರಾ ಟೆಕ್ನಾಲಜೀಸ್, ಅಡ್ವಾನ್ಸ್ಡ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಸೇರಿದಂತೆ ಪ್ರಮುಖ ಸಂಸ್ಥೆಗಳು ಸಂಶೋಧನೆ ಮತ್ತು ಅಭಿವೃದ್ಧಿ, ಎಂಬೆಡೆಡ್ ವ್ಯವಸ್ಥೆಗಳು, ವಿಎಲ್‍ಎಸ್‍ಐ, ಎಫ್‍ಪಿಜಿಎ, ಐಒಟಿ, ಮುದ್ರಿತ ವಲಯ ಫಲಕ ವಿನ್ಯಾಸ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಿಭಾಗಗಳಿಗೆ ನೇಮಕಾತಿ ನಡೆಸುತ್ತಿವೆ.

ಬಿಇ/ಬಿಟೆಕ್ ಇನ್ ಇಸಿಇ/ಇಇಇ, ಮ್ಯಾಕ್ಯಾನಿಕಲ್, ಬಯೋಮೆಡಿಕಲ್ ಪದವೀಧರರು ಹಾಗೂ ಡಿಪ್ಲಮೋ  ಇನ್ ಇಸಿಇ, ಇಇಇ ಹಾಗೂ ಮ್ಯಾಕ್ಯನಿಕಲ್ ಅಭ್ಯರ್ಥಿಗಳು, ಐಟಿಐ ಇನ್ ಮ್ಯಾಕನಿಕ/ ಇಲೆಕ್ಟ್ರಿಷಿಯನ್ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಿವೆ.
ದೂರಸಂಪರ್ಕ ಕ್ಷೇತ್ರದಲ್ಲಿ 7 ಪ್ರಮುಖ ಸಂಸ್ಥೆಗಳು ನೋಂದಾಯಿಸಿಕೊಂಡಿದ್ದು, 300ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಘೋಷಿಸಿವೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಕಂಪ್ಯೂಟರ್ ವಿಜ್ಞಾನ ವಿಭಾಗದ ಡಿಪ್ಲಮೋ ಹಾಗೂ ಯಾವುದೇ ಪದವಿ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಲಭ್ಯವಿವೆ.
ಏರ್‍ಟೆಲ್, ಆರ್‍ವಿ ಇನ್ಫೋಟೈನ್‍ಮೆಂಟ್, ಜಿಯೋ ಸೇರಿದಂತೆ ಪ್ರಮುಖ ದೂರಸಂಪರ್ಕ ಸಂಸ್ಥೆಗಳು ನೇಮಕಾತಿ ನಡೆಸುತ್ತಿವೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!