spot_img
Friday, September 11, 2026
spot_img

‘ಅರ್ಥಾಂಕುರ-25’ ತಲುಪಿದ್ದು ನಿಜಕ್ಕೂ ನಮಗೆ ಹೆಮ್ಮೆ ಎನಿಸಿದೆ: ಡಾ. ಜಗದೀಶ್ ಶೆಟ್ಟಿ

 

ಕೋಟೇಶ್ವರ: ಜುಲೈ, 26: ತಾಳಮದ್ದಳೆಯನ್ನು ನಿರಂತರವಾಗಿ ಸಂಯೋಜಿಸುವುದು ಬಹಳ ಕಷ್ಟದ ಸಂಗತಿ. ಆದರೂ ‘ಅರ್ಥಾಂಕುರ-25’ ತಲುಪಿದ್ದು ನಿಜಕ್ಕೂ ನಮಗೆ ಹೆಮ್ಮೆ ಎನಿಸಿದೆ. ಈಗಾಗಲೇ ಮೂರು ದೇಗುಲಗಳಲ್ಲಿ ಪ್ರತೀ ತಿಂಗಳಿಗೊಂದರಂತೆ ಆಯೋಜಿಸುತ್ತಿದ್ದು ಬೇಡಿಕೆ ಹೆಚ್ಚಿದೆ. ಹೊಸ ತಲೆಮಾರಿನ ಅರ್ಥದಾರಿಗಳನ್ನು ಬೆಳೆಸುವ ಕಾಯಕಕ್ಕೆ ಸರ್ವರ ಸಹಕಾರ ಲಭಿಸಿದ್ದು ನಮಗೆ ಸಂತಸ ತಂದಿದೆ ಎಂದು ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಇದರ ಅಧ್ಯಕ್ಷ ಡಾ. ಜಗದೀಶ ಶೆಟ್ಟಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನ್ನಾಡಿದರು.
ಕೋಟೇಶ್ವರ ಕೋಟಿಲಿಂಗೇಶ್ವರ ದೇಗುಲದಲ್ಲಿ ‘ಸರಣಿ ಕಾರ್ಯಕ್ರಮ-4’ ಜುಲೈ 26ರಂದು ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಸಹಯೋಗದಲ್ಲಿ ನಡೆಯಿತು. ಪ್ರಸಿದ್ಧ ಅರ್ಥದಾರಿ ಮಹೇಂದ್ರ ಆಚಾರ್ಯ ಹೇರಂಜೆ ಅವರನ್ನು ಅಭಿನಂದಿಸಿ ಡಾ. ಜಗದೀಶ್ ಶೆಟ್ಟಿ ಮಾತನ್ನಾಡಿದರು. ಕಾರ್ಯಕ್ರಮದಲ್ಲಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ಕೋಟೇಶ್ವರ, ಗುರುಪ್ರಸಾದ್ ಇಂಜಿನಿಯರ್, ಡಾ. ರಾಜೇಶ್, ಅಬ್ದುಲ್ ರವೂಫ್, ಪ್ರಶಾಂತ್ ಪಡುಕೆರೆ, ಶಂಕರನಾರಾಯಣ ಉಪಾಧ್ಯಾಯ, ವಾಗ್ವಿಲಾಸ ಭಟ್, ಅಭಿನಯ ತುಂಗ, ವೆಂಕಟೇಶ ವೈದ್ಯ ಇನ್ನಿತರರು ಉಪಸ್ಥಿತರಿದ್ದರು. ತಾಳಮದ್ದಳೆ ‘ಪಾದುಕಾ ಪ್ರಧಾನ’ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!