spot_img
Saturday, July 25, 2026
spot_img

ತಲ್ಲೂರು ಚರ್ಚಿಗೆ ಉಡುಪಿ ಧರ್ಮಪ್ರಾಂತ್ಯದ ನೂತನ ಬಿಷಪ್‌ರ ನಿಯೋಜಿತ ಭೇಟಿ


ಕುಂದಾಪುರ, ತಲ್ಲೂರು ; ಎರಡು ದಿನಗಳ ನಿಯೋಜಿತ ಭೇಟಿಯ ಅಂಗವಾಗಿ ಉಡುಪಿ ಧರ್ಮಪ್ರಾಂತ್ಯದ ನೂತನ ಬಿಷಪ್ ಅತಿ ವಂ| ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ಜೂನ್ 27ರಂದು ಸಂಜೆ ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ಚರ್ಚಿಗೆ ಆಗಮಿಸಿದರು. ಚರ್ಚಿನ ಧರ್ಮಗುರು ವಂದನೀಯ ಫಾ. ಎಡ್ವಿನ್ ಡಿಸೋಜಾ, ಪಾಲನಾ ಮಂಡಳಿಯ ಸರ್ವ ಸದಸ್ಯರು ಹಾಗೂ ಭಕ್ತಾದಿಗಳು ಆರತಿ ಬೆಳಗಿಸಿ, ಹೂಮಾಲೆ ಮತ್ತು ಪುಷ್ಪಗುಚ್ಛ ನೀಡಿ ಗೌರವಪೂರ್ವಕವಾಗಿ ಅವರನ್ನು ಸ್ವಾಗತಿಸಿದರು.
ಬಳಿಕ ಸಂಪ್ರದಾಯದಂತೆ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿದ ಬಿಷಪ್ ಅವರು, ದೃಢೀಕರಣ ಸಂಸ್ಕಾರವನ್ನು ಸ್ವೀಕರಿಸಲಿದ್ದ ವಿದ್ಯಾರ್ಥಿಗಳು ಹಾಗೂ ಯುವಕ-ಯುವತಿಯರೊಂದಿಗೆ ಸಭೆ ನಡೆಸಿ ಆತ್ಮೀಯವಾಗಿ ವಿಚಾರ ವಿನಿಮಯ ಮಾಡಿಕೊಂಡರು. ಮರುದಿನ ಭಾನುವಾರ ಬೆಳಿಗ್ಗೆ ನಡೆದ ಸಂಭ್ರಮದ ದಿವ್ಯ ಬಲಿಪೂಜೆಯನ್ನು ಬಿಷಪ್ ಅವರು ನೆರವೇರಿಸಿ, ಚರ್ಚಿನ 27 ಮಕ್ಕಳಿಗೆ ದೃಢೀಕರಣ ಸಂಸ್ಕಾರವನ್ನು ನೀಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವರು ನಮ್ಮನ್ನು ಸೃಷ್ಟಿಸಿದ್ದಾನೆ, ರಕ್ಷಿಸಿದ್ದಾನೆ, ಪೋಷಿಸಿದ್ದಾನೆ ಹಾಗೂ ತನ್ನ ಪವಿತ್ರಾತ್ಮನ ದೇಣಿಗೆಗಳಿಂದ ನಮ್ಮನ್ನು ಸಮೃದ್ಧಗೊಳಿಸಿದ್ದಾನೆ. ಆದ್ದರಿಂದ ಆತನ ದೇಣಿಗೆಗಳನ್ನು ಕೃತಜ್ಞತೆಯಿಂದ ಸ್ವೀಕರಿಸಿ, ನಂಬಿಕೆಯಲ್ಲಿ ಬೆಳೆಯುತ್ತಾ, ಆತನ ಮಹಿಮೆಯನ್ನು ಸಾರುವ ಜೀವನವನ್ನು ನಡೆಸಬೇಕು” ಎಂದು ಸಂದೇಶ ನೀಡಿದರು.
ಚರ್ಚಿನ ಅಧೀನದಲ್ಲಿರುವ ದೇವಲಕುಂದ ಸಂತ ಅಂತೋನಿಯವರ ಚಾಪೆಲ್‌ಗೆ ಭೇಟಿ ನೀಡಿ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಅಲ್ಲದೆ ಇಬ್ಬರು ವಯೋವೃದ್ಧರ ಮನೆಗಳಿಗೆ ಭೇಟಿ ನೀಡಿ ಅವರನ್ನು ಆಶೀರ್ವದಿಸಿದರು. ಜಯರಾಣಿ ಕಾನ್ವೆಂಟ್‌ಗೆ ಭೇಟಿ ನೀಡಿ ಮಕ್ಕಳ ಕಿರು ಸಮುದಾಯ ಸಭೆಯಲ್ಲಿ ಭಾಗವಹಿಸಿ ತಮ್ಮ ನಿಯೋಜಿತ ಭೇಟಿಯನ್ನು ಸಮಾಪ್ತಿಗೊಳಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!