spot_img
Friday, June 12, 2026
spot_img

ಕುಂಭಾಶಿ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ನ 32 ನೇ ವಾರ್ಷಿಕಾಧಿವೇಶನ

ಎಲ್ಲೆಡೆ ಈಗ ವಿದ್ಯಾರ್ಥಿಗಳಿಗೆ ಸೌಲಭ್ಯಗಳು ಜಾಸ್ತಿಯಾಗಿವೆ. ಮನೆಯವರು ಮಾತ್ರವಲ್ಲದೆ, ದಾನಿಗಳು ಸಂಘ – ಸಂಸ್ಥೆಗಳೂ ವಿದ್ಯಾಭ್ಯಾಸಕ್ಕೆ ನೆರವು ಒದಗಿಸುತ್ತಿವೆ. ಆದರೂ ವಿದ್ಯಾರ್ಥಿಗಳಲ್ಲಿ ಟೆಕ್ಷನ್ ಜಾಸ್ತಿಯಾಗುತ್ತಿದೆ. ಇದನ್ನು ಮೊದಲು ದೂರ ಮಾಡಬೇಕು ಎಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜಗದೀಶ ನಾವುಡ ಹೇಳಿದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಕುಂಭಾಶಿ ವಲಯದ 32 ನೇ ವಾರ್ಷಿಕಾಧಿವೇಶನದಲ್ಲಿ ಪಾಲ್ಗೊಂಡು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮೊದಲು ಸ್ಪಷ್ಟ ಗುರಿ ಹೊಂದಿ, ಪರಿಶ್ರಮಪಡಬೇಕು. ಆಗ ಬಯಸಿದ ಅಂಕಗಳು, ಉನ್ನತ ಸ್ಥಾನ ಗಳಿಸಬಹುದು. ಮಹಡಿ ಏರಲು ಮೆಟ್ಟಿಲು ಮತ್ತು ಲಿಫ್ಟ್ ಎರಡೂ ಇರುತ್ತವೆ. ಲಿಫ್ಟ್ ಕೈ ಕೊಡಬಹುದು, ಆದರೆ ಮೆಟ್ಟಿಲು ಎಂದೂ ವಿಫಲವಾಗುವುದಿಲ್ಲ. ಹಾಗೆಯೇ ವಿದ್ಯಾರ್ಥಿಗಳೂ ತಮ್ಮ ಗುರಿ ಸಾಧನೆಗೆ ಮೆಟ್ಟಿಲಿನಂತ ಪ್ರಾಮಾಣಿಕ ದಾರಿಯನ್ನು ಅವಲಂಬಿಸಿ, ಹಂತಹಂತವಾಗಿ ಯಶಸ್ಸು ಗಳಿಸಬೇಕು ಎಂದು ಅವರು ತಿಳಿಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಆಲೂರು ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದ ಸಂಸ್ಥಾಪಕ ಡಾ. ರಾಜೇಶ್ ಬಾಯಿರಿ, ಆಯುರ್ವೇದ ವೈದ್ಯ ಪದ್ದತಿಯನ್ನು ವೇದಕ್ಕೆ ಸಮನಾಗಿ ಪರಿಗಣಿಸಲಾಗಿದೆ. ಅದು ಕಾಯಿಲೆಗಳಿಗೆ ಚಿಕಿತ್ಸೆ ಸೂಚಿಸುವುದು ಮಾತ್ರವಲ್ಲದೆ, ಕಾಯಿಲೆಗಳೇ ಬಾರದ ರೀತಿಯ ಸ್ವಸ್ಥ ಜೀವನ ಕ್ರಮವನ್ನೂ ವಿವರಿಸುತ್ತದೆ. ಒಂದು ನಿಮಿಷದ ನಮ್ಮ ಕೋಪ- ತಾಪ, ಮತ್ಸರಗಳು ನಮಗೇ ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ. ಆದ್ದರಿಂದ ಸ್ವಸ್ಥ ಜೀವನ ಕ್ರಮವನ್ನು ಅಳವಡಿಡಿಕೊಳ್ಳುವುದು ಮುಖ್ಯ. ಮಾತ್ರೆ, ಟಾನಿಕ್ಕುಗಳನ್ನು ಅವಲಂಬಿಸುವುದಕ್ಕಿಂತ ಉತ್ತಮ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಿರುವುದು ಜಾಣತನ ಎಂದು ವಿವರಿಸಿದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ನಿಕಟಪೂರ್ವ ಅಧ್ಯಕ್ಷ ಡಾ. ಕೆ. ಎಸ್. ಕಾರಂತ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು.
ವಲಯ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ವಿಪ್ರ ವಿದ್ಯಾರ್ಥಿಗಳಿಗೆ ಸದಸ್ಯ ವಿ. ರಾಮಚಂದ್ರ ಹಂದೆ ಕೊಡಮಾಡಿದ ಪುಸ್ತಕ, ಲೇಖನ ಸಾಮಗ್ರಿ ಮತ್ತು ಕೊಡೆಗಳನ್ನು ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿಶೇಷ ಸಾಧಕರೂ, ವಲಯದ ಪೋಷಕರೂ ಆದ ಉದ್ಯಮಿ ಕೆ. ಶ್ರೀಧರ ಉಪಾಧ್ಯಾಯ ಮತ್ತು ಮೆಸ್ಕಾಂ ನ ನಿವೃತ್ತ ಇಂಜಿನಿಯರ್ ಕೊಮೆ ಸತ್ಯನಾರಾಯಣ ಹೆಬ್ಬಾರ್ ರವರನ್ನು ಸನ್ಮಾನಿಸಲಾಯಿತು. ಪಂಚಮಿ ವೈದ್ಯ ಮತ್ತು ಗಣೇಶ್ ಅವಬ್ರತ ಸನ್ಮಾನ ಪತ್ರ ವಾಚಿಸಿದರು. ಪ್ರಸನ್ನ ಹೆಬ್ಬಾರ್ ನಿರ್ವಹಿಸಿದರು. ಕಾರ್ಯದರ್ಶಿ ಪದ್ಮನಾಭ ಅಡಿಗ, ಡಾ. ಸಂಪತ್ ಕುಮಾರ್, ವಿ. ರಾಮಚಂದ್ರ ಹಂದೆ ಗಣ್ಯರನ್ನು ಪರಿಚಯಿಸಿದರು. ವಲಯಾಧ್ಯಕ್ಷ ಕೆ. ಜಗದೀಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಜಯಂತಿ ಉಪಾಧ್ಯಾಯ ಪ್ರಾರ್ಥಿಸಿದರು. ಗೌರವಾಧ್ಯಕ್ಷ ರಮೇಶ್ ಚಾತ್ರ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಪದ್ಮನಾಭ ಅಡಿಗ ವಾರ್ಷಿಕ ವರದಿ ಓದಿದರೆ, ಕೋಶಾಧಿಕಾರಿ ಗುರುರಾಜ ಹತ್ವಾರ್ ಆಯವ್ಯಯ ವಿವರ ನೀಡಿದರು.
ಕೆ. ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿ, ಪದ್ಮನಾಭ ಅಡಿಗ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!