spot_img
Tuesday, July 28, 2026
spot_img

ರಂಗವು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ: ಲಂಬೋದರ ಹೆಗಡೆ ನಿಟ್ಟೂರು

 

ತೆಕ್ಕಟ್ಟೆ: ಜುಲೈ, 27: ಕಲಿಕೆಯ ಹಂತದಲ್ಲಿರುವ ಕಲಾವಿದರಿಗೆ ಆಗಾಗ ವೇದಿಕೆಯು ಸಿಕ್ಕಾಗ ಮಾತ್ರ ಕಲಿಕೆಯ ಹಾದಿ ಸುಗಮವಾಗುತ್ತದೆ. ರಂಗವು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರಿಂದಲೇ ಇನ್ನಷ್ಟು ಕಲಿಯುವ ತವಕ ವೃದ್ಧಿಸುತ್ತದೆ. ಗುರುಮುಖೇನ ಕಲಿತ ವಿದ್ಯೆ ನಿರರ್ತಕವಾಗಬಾರದು. ತಪ್ಪು ಒಪ್ಪುಗಳನ್ನು ಬದಿಗಿರಿಸಿ ನಮ್ಮೊಳಗಿನ ಚಿಕ್ಕ ವೇದಿಕೆಯಲ್ಲಿ ಪ್ರತಿಭೆ ತೋರಿಸಿ ಬೆಳೆದರೆ ಮತ್ತಷ್ಟು ಆತ್ಮ ಸ್ಥೈರ್ಯ ಬರುವುದಕ್ಕೆ ಸಾಧ್ಯ ಎಂದು ಕಾರ್ಯಕ್ರಮವನ್ನು ಉದ್ಧೇಶಿಸಿ ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು ಮಾತನ್ನಾಡಿದರು.
ತೆಕ್ಕಟ್ಟೆಯ ಹಯಗ್ರೀವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಉಡುಪಿ ಜಿಲ್ಲೆ ಧನ ಸಹಾಯ ಯೋಜನೆಯಡಿಯಲ್ಲಿ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಯೋಜಿಸಿದ ‘ಪ್ರಸಂಗ ಪದ್ಯ ಕಥಾ ಸಾರ’ ಕಾರ್ಯಕ್ರಮದಲ್ಲಿ ಲಂಬೋದರ ಹೆಗಡೆ ಮಾತನ್ನಾಡಿದರು. ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಆ್ಯಂಡ್ರು ಡಿಸಿಲ್ವ, ಸುಧಾ ಮಣೂರು, ಡಾ. ಗಣೇಶ್ ಉಳ್ತೂರು, ಡಾ. ರಾಜೇಶ್, ಆದಿತ್ಯ ಹೆಗಡೆ, ಗಣಪತಿ ಭಟ್, ಭಾಗ್ಯಲಕ್ಷ್ಮಿ ವೈದ್ಯ, ಪಾರ್ವತಿ ಮೈಯ್ಯ, ಆದಿತ್ಯ ಕೋಣಿ ಉಪಸ್ಥಿತರಿದ್ದರು. ಬಳಿಕ ‘ಪ್ರಸಂಗ ಪದ್ಯ ಕಥಾ ಸಾರ’ ಕೃಷ್ಣ ಸಂಧಾನದ ಕಥಾನಕ ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!