spot_img
Tuesday, June 9, 2026
spot_img

ಪ್ರಿಮ್ ರೋಸ್ ಫೌಂಡೇಶನ್ ಶಾಲೆ ಕೋಟೇಶ್ವರದಲ್ಲಿ ವಾರ್ಷಿಕ ಪೋಷಕ – ಶಿಕ್ಷಕ ಸಭೆ

ಚಿರಂತನ ಎಜುಕೇಷನಲ್ ಇನ್ಸ್ಟಿಟ್ಯೂಟ್ (ರಿ) ಸಂಸ್ಥೆಯ ಆಡಳಿತಕ್ಕೊಳಪಟ್ಟ ಪ್ರಿಮ್ ರೋಸ್ ಫೌಂಡೇಶನ್ ಶಾಲೆಯಲ್ಲಿ ಜೂನ್ 6, 2026ರಂದು ಶಾಲಾ ವರ್ಷದ ಪ್ರಥಮ ಪೋಷಕ- ಶಿಕ್ಷಕರ ಸಭೆ ಜರುಗಿತು.
ಪ್ರಾಂಶುಪಾಲೆ ಶ್ರೀಮತಿ ವಿನುತಾ ಬಿ. ಶೆಟ್ಟಿ ಅವರು ಪೋಷಕರನ್ನು ಸ್ವಾಗತಿಸಿ, ಶಾಲೆಯ ಹಿನ್ನೆಲೆ, ಉದ್ದೇಶ ಹಾಗೂ ಶೈಕ್ಷಣಿಕ ದೃಷ್ಟಿಕೋನದ ಪರಿಚಯ ನೀಡಿದರು. ಶೈಕ್ಷಣಿಕ ಮುಖ್ಯಸ್ಥೆ ಶ್ರೀಮತಿ ವಿಲ್ಮಾ ಡಿಸಿಲ್ವಾ ಅವರು ಪ್ರಸಕ್ತ ಸಾಲಿನ ವಾರ್ಷಿಕ ಶೈಕ್ಷಣಿಕ ಯೋಜನೆ ಮತ್ತು ಚಟುವಟಿಕೆಗಳ ರೂಪುರೇಷೆಗಳನ್ನು ಮಂಡಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಡಾ. ಚಿಂತನಾ ರಾಜೇಶ್ ಅವರು ‘ಪೋಷಕತ್ವ ಮತ್ತು ಮಕ್ಕಳ ಪಾಲನೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ, ಇಂದಿನ ದಿನಗಳಲ್ಲಿ ಮಕ್ಕಳನ್ನು ಮಾನಸಿಕ ಹಾಗೂ ಸಾಮಾಜಿಕವಾಗಿ ಹೇಗೆ ಸದೃಢರಾಗಿ ಬೆಳೆಸಬೇಕು ಎನ್ನುವ ಕುರಿತು ಪೋಷಕರಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು.
ಶ್ರೀಮತಿ ಮಂಜುಳಾ ಅವರು ಪ್ರಾರ್ಥಿಸಿ, ನಿರೂಪಿಸಿದರು. ಪ್ರಶಾಂತ್ ಹಾಗೂ ಶ್ರೀಮತಿ ರೇಷ್ಮಾ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!