spot_img
Tuesday, October 20, 2026
spot_img

ಅ.25ರಿಂದ ಅ.31: ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಕಾಳಗೋತ್ಸವ

ಸಾಲಿಗ್ರಾಮ: ಕಳೆದ ನಾಲ್ಕು ವರ್ಷಗಳಿಂದ ಯಕ್ಷಗಾನ ಸಪ್ತಾಹವನ್ನು ಆಯೋಜಿಸುತ್ತಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರು ಗೀತಾನಂದ ಫೌಂಡೇಶನ್ ಮಣೂರು ಇವರ ಸಹಕಾರದೊಂದಿಗೆ ದಿನಾಂಕ 25 ರಿಂದ ದಿನಾಂಕ ೩೧ ರ ತನಕ ಕಾಳಗೋತ್ಸ ಎಂಬ ಶೀರ್ಷಿಕೆಯಡಿಯಲ್ಲಿ ಯಕ್ಷಗಾನ ಸಪ್ತಾಹವನ್ನು ಹಮ್ಮಿಕೊಂಡಿರುತ್ತೇದೆ. ಪ್ರತಿ ದಿವಸ ಸಂಜೆ ೫-೦೦ಕ್ಕೆ ಪರಿಸರದ ಉದಯೋನ್ಮುಖ ಕಲಾವಿದರ ಸಾಂಸ್ಕೃತಿಕ ವೈಭವದಿಂದ ಪ್ರಾರಂಭವಾಗುವ ಕಾರ್ಯಕ್ರಮದ ನಂತರ ಗಂಟೆ ೫-೪೫ ರಿಂದ ೬-೩೦ ರ ತನಕ ನಡೆಯುತ್ತದೆ. ದಿನಾಂಕ 25 ರಂದು ಆನಂದ ಸಿ ಕುಂದರ್ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲ್ಲಿದ್ದು ಪರಮ ಪೂಜ್ಯ ಶ್ರೀಮದ್ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರ ದಿವ್ಯ ಹಸ್ತದಿಂದ ಯಕ್ಷಗಾನ ಸಪ್ತಾಹ ಉದ್ಘಾಟಿಸಲ್ಪಡುತ್ತದೆ.

ಪ್ರತೀ ನಿತ್ಯವೂ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದ್ದು ಅಪರೂಪದ ಪ್ರಸಂಗಗಳಾದ ಘಟೋತ್ಕಚನ ಕಾಳಗ, ಅಂಧಕಾಸುರ ಕಾಳಗ, ಗರುಡ ಕಾಳಗ, ಶೂರಪದ್ಮಾಸುರ ಕಾಳಗ, ಕಿರಾತಾರ್ಜುನ ಕಾಳU, ಭೌಮಾಸುರ ಕಾಳಗ, ಅತಿಕಾಯ ಕಾಳಗವನ್ನು ಪ್ರದರ್ಶಿಸಲಾಗುತ್ತದೆ. ಸದಾನಂದ ಸಂಸ್ಮರಣೆ, ನಾರ್ಣಪ್ಪ ಉಪ್ಪೂರರ ಸಂಸ್ಮರಣೆ, ಕಾಳಿಂಗ ಸಂಸ್ಮರಣೆ, ಧಾರೇಶ್ವರ ಸಂಸ್ಮರಣೆಯೊಂದಿಗೆ, ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಳೆದ ನಾಲ್ಕು ವರ್ಷಗಳಿಂದ ಯಕ್ಷಗಾ ಪ್ರದರ್ಶನಗಳಲ್ಲಿ ಬಡಗು ತಿಟ್ಟಿನಲ್ಲಿ ಬಹು ಅಪರೂಪವಾಗಿರುವ ಪೌರಾಣಿಕ ಪ್ರಸಂಗಗಳನ್ನು ಪರಿಚಯಿಸುತ್ತಿರುವ ಸಂಸ್ಥೆಯು ಈ ವರ್ಷವೂ ಅದೇ ಉದ್ದೇಶದಿಂದ ಪ್ರಸಂಗಗಳನ್ನು ಆಯ್ಕೆ ಮಡಲಾಗಿದೆ ಎಂದು ಕಲಾ ಕೇಂzದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!