spot_img
Friday, October 23, 2026
spot_img

ಅ.25ರಿಂದ ಕುಂದಾಪುರ ಗಾಂಧಿ ಮೈದಾನದಲ್ಲಿ ಭಾರತದ ಬಲಿಷ್ಠ 6 ತಂಡಗಳ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಕುಂದಾಪುರ, ಅ.23: ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಇವರ ಸಹಯೋಗದಲ್ಲಿ ಭಾರತದ ಬಲಿಷ್ಠ 6 ತಂಡಗಳ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಕೆ.ಎಫ್.ಕೆ ಟ್ರೋಫಿ-2026 ಅಕ್ಟೋಬರ್ 25ರಿಂದ ಅ.27ರ ತನಕ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಕೆ.ಎಫ್.ಕೆ ಟ್ರೋಪಿ ವಾಲಿಬಾಲ್ ಪಂದ್ಯಾಟದ ಸ್ವಾಗತ ಸಮಿತಿ ಅಧ್ಯಕ್ಷರಾದ ದಿನೇಶ ಹೆಗ್ಡೆ ಮೊಳಹಳ್ಳಿ ತಿಳಿಸಿದರು.

ಅವರು ಕುಂದಾಪುರದ ವಾಲಿಬಾಲ್ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಪೂರ್ವಸಿದ್ಧತೆ, ಪಂದ್ಯಾಟದ ಬಗ್ಗೆ ಮಾಹಿತಿ ನೀಡಿದರು.

ಈ ಪಂದ್ಯಾಟದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಸಿದ್ದ ಆಟಗಾರರನ್ನೊಳಗೊಂಡ ಬಲಿಷ್ಠ 6 ತಂಡಗಳು ಭಾಗವಹಿಸಲಿವೆ. ಐ.ಓ.ಬಿ (ಇಂಡಿಯನ್ ಓವರ್ ಸೀಸ್ ಬ್ಯಾಂಕ್) ತಂಡ, ಕೆ.ಎಸ್.ಇ.ಬಿ (ಕೇರಳ ಸ್ಟೇಟ್ ಎಲೆಕ್ಟ್ರೀಸಿಟಿ ಬೋರ್ಡ್), ಟೀಮ್ ಕರ್ನಾಟಕ, ಚೆನ್ನೈ ಸಿಕ್ಸ್, ಇಂಡಿಯನ್ ನೇವಿ, ಕೆ.ಪಿ (ಕೇರಳ ಪೊಲೀಸ್) ತಂಡಗಳು ಭಾಗವಹಿಸಲಿವೆ ಎಂದರು.

ಪಂದ್ಯಾಟದ ವಿಜೇತ ಪ್ರಥಮ ಸ್ಥಾನಿಯ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ರೂ.ನಾಲ್ಕು ಲಕ್ಷ, ದ್ವಿತೀಯ ಸ್ಥಾನಿಯ ತಂಡಕ್ಕೆ ಟ್ರೋಪಿಯೊಂದಿಗೆ ಮೂರು ಲಕ್ಷ ರೂಪಾಯಿ, ತೃತೀಯ ಸ್ಥಾನಿ ತಂಡಕ್ಕೆ ಟ್ರೋಪಿಯೊಂದಿಗೆ ರೂ.ಎರಡು ಲಕ್ಷ, ಚತುರ್ಥ ತಂಡಕ್ಕೆ ಟ್ರೋಪಿಯೊಂದಿಗೆ ರೂ.ಒಂದು ಲಕ್ಷ ಮತ್ತು ವೈಯಕ್ತಿಕ ವಿಭಾಗದ 6 ಶ್ರೇಷ್ಠ ಪ್ರದರ್ಶನಕ್ಕೆ ಟ್ರೋಪಿಯೊಂದಿಗೆ ರೂ.೨೫,೦೦೦ ನಗದು ಬಹುಮಾನ ನೀಡಲಾಗುವುದು ಎಂದರು.

ಅ.೨೫ ಭಾನುವಾರ ಸಂಜೆ ಗಾಂಧಿ ಮೈದಾನದಲ್ಲಿ ಪಂದ್ಯಾಟದ ಉದ್ಘಾಟನೆ ನಡೆಯಲಿದ್ದು, ಅದಕ್ಕೆ ಮೊದಲು ಸಂಜೆ ೫ ಗಂಟೆಗೆ ಪೂರ್ವಭಾವಿಯಾಗಿ ಕುಂದೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು ವಿದುಷಿ ಶ್ರೀಮತಿ ಪ್ರವಿತಾ ಅಶೋಕ ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲಕು ವಾಲಿಬಾಲ್ ಅಸೋಸಿಯೇಶನ್ ಗೌರವಾಧ್ಯಕ್ಷರಾದ ಯು.ರಾಜೇಶ ಕಾರಂತ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಶೆಟ್ಟಿ ಗಂಟಿಹೊಳೆ, ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮೊದಲಾದವರು ಭಾಗವಹಿಸಲಿದ್ದಾರೆ. ಅ.27 ಮಂಗಳವಾರ ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಾಲಿಬಾಲ್ ಆಟಗಾರರನ್ನು ಗುರುತಿಸಿ ಗೌರವಿಸಲಾಗುವುದು, ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಪ್ರಸಿದ್ಧ ಪೊಳಲಿ ಹುಲಿವೇಷ ತಂಡದ ಹುಲಿವೇಷ ಕುಣಿತ ಪ್ರದರ್ಶನ ಇರುತ್ತದೆ ಎಂದರು.

ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಅಡ್ಯಂತಾಯ ಮಾತನಾಡಿ, ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ವಾಹನ ನಿಲುಗಡೆಗಾಗಿ ಕೋಟೇಶ್ವರ, ಕೋಟ, ಬ್ರಹ್ಮಾವರ, ಉಡುಪಿ ಕಡೆಯಿಂದ ಬರುವ ಕ್ರೀಡಾಭಿಮಾನಿಗಳಿಗೆ ನೆಹರು ಮೈದಾನ, ವ್ಯಾಸರಾಜ ಮಠ ಹಾಗೂ ವಿ‌ಆರ್‌ಎಲ್ ಕಛೇರಿ ಬಳಿ, ಭಟ್ಕಳ, ಬೈಂದೂರು ಭಾಗದಿಂದ ಬರುವವರಿಗಾಗಿ ಎಪಿ‌ಎಂಸಿ ವರಾಂಡ, ಜ್ಯೂನಿಯರ್ ಕಾಲೇಜು ಮತ್ತು ಆರ್.ಎನ್ ಶೆಟ್ಟಿ (ಬಂಟರ ಭವನ) ಹಾಲ್ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಈಗಾಗಲೇ ಸ್ವಾಗತ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಕುಂದಾಪುರ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಅಧ್ಯಕ್ಷರಾಗಿ ಜಯರತ್ನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ದಿನೇಶ ಹೆಗ್ಡೆ ಮೊಳಹಳ್ಳಿ, ಉಪಾಧ್ಯಕ್ಷರಾಗಿ ಉದ್ಯಮಿ ಬಾಲಚಂದ್ರ ಶೆಟ್ಟಿ ಕಾವ್ರಾಡಿ, ಟಾರ್ಪೋಡೋಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಗೌತಮ್ ಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಜೀವನ್ ಕುಮಾರ್ ಶೆಟ್ಟಿ, ಪತ್ರಕರ್ತ ಕೆ.ಸಿ ರಾಜೇಶ್, ಹಿರಿಯ ವಾಲಿಬಾಲ್ ಆಟಗಾರ ರತನ್ ಬಿ., ಉದ್ಯಮಿ ರಾಧಾಕೃಷ್ಣ ನಾಯ್ಕ್, ಗೋಪಾಲ ವಿ.ಪೂಜಾರಿ ಬಾಳೆಹಿತ್ಲು, ಮನೋಜ್ ನಾಯರ್ ಕುಂದಾಪುರ, ಸುಧೀರ್ ಕೆ.ಎಸ್ ಕುಂದಾಪುರ, ಕಾರ್ಯದರ್ಶಿಯಾಗಿ ಭಾಸ್ಕರ ವಿಠಲವಾಡಿ, ಜೊತೆಕಾರ್ಯದರ್ಶಿಯಾಗಿ ವಿಕಾಸ್ ಹೆಗ್ಡೆ, ಉಮೇಶ ಶೆಟ್ಟಿ ಕಲ್ಗದ್ದೆ, ಸುರೇಶ ಶೆಟ್ಟಿ ಬೀಜಾಡಿ, ಜೋಯ್ ಜೆ.ಕರ್ವೇಲ್ಲೋ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಗೌರವಾಧ್ಯಕ್ಷರಾದ ಯು.ರಾಜೇಶ ಕಾರಂತ, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಅಧ್ಯಕ್ಷರಾದ ರಮಾನಂದ ಕೆ., ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಗೌರವಾಧ್ಯಕ್ಷರಾದ ರಾಜೇಶ ಕಾವೇರಿ, ಹಿರಿಯ ವಾಲಿಬಾಲ್ ಆಟಗಾರ ದಾಮೋದರ ಶೆಟ್ಟಿ, ಸ್ವಾಗತ ಸಮಿತಿಯ ವಿಕಾಸ ಹೆಗ್ಡೆ, ಸುಧೀರ್ ಕೆ.ಎಸ್., ಗೋಪಾಲ, ರತನ್ ಬಿಜೂರು, ಗೌತಮ್ ಹೆಗ್ಡೆ, ಜೋಯ್ ಜೆ.ಕರ್ವೇಲ್ಲೋ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!