spot_img
Tuesday, June 9, 2026
spot_img

ರಾಷ್ಟ್ರಮಟ್ಟದಲ್ಲಿ ಮಿಂಚಿದ ಪುತ್ತೂರು ಟೌನ್ ಬ್ಯಾಂಕ್: ದಾಖಲೆಯ 5 ರಾಷ್ಟ್ರೀಯ ಪ್ರಶಸ್ತಿಗಳ ಐತಿಹಾಸಿಕ ಗರಿ

ಪುತ್ತೂರು: ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಪ್ರತಿಷ್ಠಿತ ರಾಷ್ಟ್ರೀಯ ಮಹಾಸಮ್ಮೇಳನದಲ್ಲಿ (National Conference of Urban Co-operative Banks) ಕರ್ನಾಟಕದ ಹೆಮ್ಮೆಯ ಬ್ಯಾಂಕಿಂಗ್ ಸಂಸ್ಥೆಯಾದ ದಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್’ ಬರೊಬ್ಬರಿ ಐದು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ದೇಶದ ಸಹಕಾರಿ ರಂಗದಲ್ಲಿ ಸುವರ್ಣ ಅಕ್ಷರಗಳ ಹೊಸ ದಾಖಲೆ ಬರೆದಿದೆ.

ದೇಶದ ಎಲ್ಲಾ ರಾಜ್ಯಗಳ ನೂರಾರು ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಭಾಗವಹಿಸಿದ್ದ ಈ ಉನ್ನತ ಮಟ್ಟದ ರಾಷ್ಟ್ರೀಯ ಸಮ್ಮೇಳನದಲ್ಲಿ, ಅತ್ಯಧಿಕ ೫ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ದೇಶದ ಏಕೈಕ ಬ್ಯಾಂಕ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಪಾತ್ರವಾಗಿದೆ. ಈ ಅಪೂರ್ವ ಸಾಧನೆಯ ಮೂಲಕ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಇಡೀ ದೇಶದ ಗಮನ ಸೆಳೆದಿದೆ.

ಬ್ಯಾಂಕ್ ಮುಡಿಗೇರಿಸಿಕೊಂಡ ಪಂಚ ರತ್ನ ಪ್ರಶಸ್ತಿಗಳ ವಿವರ:
ಅತ್ಯುತ್ತಮ ಅಧ್ಯಕ್ಷ: ಎನ್. ಕಿಶೋರ್ ಕೊಳತಾಯ, ಅತ್ಯುತ್ತಮ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ :ಬಿ. ಶೇಖರ್ ಶೆಟ್ಟಿ, ಅತ್ಯುತ್ತಮ ನಿರ್ದೇಶಕ: ಚಂದ್ರಶೇಖರ್ ರಾವ್ ಬಪ್ಪಳಿಗೆ, ಅತ್ಯುತ್ತಮ ಮೊಬೈಲ್ ಬ್ಯಾಂಕಿಂಗ್ ಉಪಕ್ರಮ, ಅತ್ಯುತ್ತಮ ಸಿಬಿ‌ಎಸ್ ಅನುಷ್ಠಾನ.
ಈ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳನ್ನು (ಭಾರತ್ ರತ್ನ ಸಹಕಾರಿತ್ ಸಮ್ಮಾನ) ಅಸ್ಸಾಂ ರಾಜ್ಯದ ಶಾಸಕ ಹಾಗೂ ಅಸ್ಸಾಮ್ ರಾಜ್ಯದ ಅಪೇಕ್ಷ ಬ್ಯಾಂಕ್ ಅಧ್ಯಕ್ಷ ಬಿಶ್ವಜಿತ್ ಫುಕಾನ್ ವಿತರಿಸಿದರು. ಭಾರತ್ ಸಮ್ಮಾನ್ ಸಮಿತಿಯ ಮುಖ್ಯಸ್ಥರಾದ ಡಾ|| ಅನೂಪ್ ಗುಪ್ತ ಮತ್ತು ಅಭಿಷೇಕ ಶರ್ಮ ಉಪಸ್ಥಿತರಿದ್ದರು.

ಲಕ್ನೋದಲ್ಲಿ ನಡೆದ ಪ್ರಶಸ್ತಿ ವಿತರಣೆಯ ಸಮ್ಮೇಳನದಲ್ಲಿ ಪ್ರಸಸ್ತಿ ಪುರಸ್ಕೃತರಾದ ಬ್ಯಾಂಕಿನ ಅಧ್ಯಕ್ಷ ಎನ್. ಕಿಶೋರ್ ಕೊಳತಾಯ, ಮುಖ್ಯ ಕಾರ್ಯ ನಿರ್ವಣಾಧಿಕಾರಿ- ಬಿ. ಶೇಖರ್ ಶೆಟ್ಟಿ, ನಿರ್ದೇಶಕ – ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರೊಂದಿಗೆ ಬ್ಯಾಂಕಿನ ಉಪಾಧ್ಯಕ್ಷರಾದ ಕೆ. ಶ್ರೀಧರ್ ಗೌಡ ಹಾಗೂ ನಿರ್ದೇಶಕರುಗಳಾದ ರಾಜು ಶೆಟ್ಟಿ, ಶ್ರೀಧರ್ ಪಟ್ಲ, ಮಲ್ಲೇಶ್ ಕುಮಾರ್, ಹರೀಶ್ ಬಿಜತ್ರೆ, ಗಣೇಶ್ ಕೌಕ್ರಾಡಿ ಮತ್ತು ಕೆ. ವಿಶ್ವಾಸ್ ಶೆಣೈ ಅವರು ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಿದರು.

ಆಡಳಿತ ಮಂಡಳಿ, ಶಾಖಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಸಂತಸ:
ಬ್ಯಾಂಕಿನ ಈ ದಿಗ್ವಿಜಯಕ್ಕೆ ನಿರ್ದೇಶಕರುಗಳಾದ ಕಿರಣ್ ಕುಮಾರ ರೈ, ರಾಮಚಂದ್ರ ಕಾಮತ್, ಸುಜೀಂದ್ರ ಪ್ರಭು, ಸೀಮಾ ನಾಗರಾಜ್, ವೀಣಾ ಹಾಗೂ ಬ್ಯಾಂಕಿನ ಪುತ್ತೂರು ಶಾಖಾಧಿಕಾರಿ ಚಿದಂಬರ, ವಿಟ್ಲ ಶಾಖಾಧಿಕಾರಿ ಜ್ಯೋತಿ ಎನ್. ಎಸ್. ಮತ್ತು ಬ್ಯಾಂಕಿನ ಸಮಸ್ತ ಸಿಬ್ಬಂದಿ ವರ್ಗದವರು ತೀವ್ರ ಹರ್ಷ ವ್ಯಕ್ತಪಡಿಸಿದ್ದು, ಬ್ಯಾಂಕಿನ ಈ ಮಹತ್ ಸಾಧನೆಗೆ ಕಾರಣರಾದ ಬ್ಯಾಂಕಿನ ಸರ್ವ ಸದಸ್ಯರು ಹಾಗೂ ಗ್ರಾಹಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ

“ಬ್ಯಾಂಕು ಕಳೆದ ಮೂರು ವರ್ಷಗಳಿಂದ ವ್ಯವಹಾರದಲ್ಲಿ ದಾಖಲೆಯ ಪ್ರಗತಿ ಸಾಧಿಸಿದ್ದಲ್ಲದೇ, ತಂತ್ರಜ್ಞಾನ ಅಳವಡಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವುದೇ ಈ ಅದ್ವಿತೀಯ ರಾಷ್ಟ್ರೀಯ ಪ್ರಶಸ್ತಿಗೆ ಕಾರಣ. ಬ್ಯಾಂಕಿನ ಗೌರವಾನ್ವಿತ ಸದಸ್ಯರು ಮತ್ತು ಗ್ರಾಹಕರು ನೀಡಿದ ನಿರಂತರ ಸಹಕಾರ, ಪ್ರೋತ್ಸಾಹ ಹಾಗೂ ಸಿಬ್ಬಂದಿ ವರ್ಗದ ಅಹರ್ನಿಶಿ ಶ್ರಮವೇ ಈ ಸಾಧನೆಯ ಹಿಂದಿನ ಶಕ್ತಿ ಎಂದು ಬ್ಯಾಂಕಿನ ಅಧ್ಯಕ್ಷ ಎನ್. ಕಿಶೋರ್ ಕೊಳತಾಯ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ್ ಶೆಟ್ಟಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!