spot_img
Saturday, July 25, 2026
spot_img

ಗಂಗೊಳ್ಳಿಯ ಮಲ್ಯರಮಠ: ಪುಣ್ಯತಿಥಿ ಆರಾಧನೆ

ಕುಂದಾಪುರ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ವಡೇರ ಸ್ವಾಮೀಜಿಯವರ 5ನೇ ಪುಣ್ಯತಿಥಿ ಆರಾಧನೆ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ನಡೆಯಿತು. ಮಧ್ಯಾಹ್ನ ಶ್ರೀದೇವರಿಗೆ ವಿಶೇಷ ಪೂಜೆ, ಗುರು ಗುಣಗಾನ, ಗುರುಪೂಜೆ, ಮಹಾ ಸಂತರ್ಪಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇವಳದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ಗುರು ಗುಣಗಾನ ಮಾಡಿದರು. ಊರಿನ ಹತ್ತು ಸಮಸ್ತರ ಪರವಾಗಿ ಸೇವೆಯನ್ನು ದೇವಳದ ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್ ಮತ್ತು ದಿ. ಜಿ.ಕೃಷ್ಣಾನಂದ ಆಚಾರ್ಯ ಸ್ಮರಣಾರ್ಥ ಮಕ್ಕಳು ಮಹಾ ಸಂತರ್ಪಣೆ ಸೇವೆಯನ್ನು ಸಮರ್ಪಿಸಿದರು.
ದೇವಳದ ಆಡಳಿತ ಮಂಡಳಿ ಸದಸ್ಯ ಜಿ.ವೇದವ್ಯಾಸ ಕೆ.ಆಚಾರ್ಯ, ಜಿ.ಶಂಕರ ಆಚಾರ್ಯ, ಡಾ.ಕಾಶೀನಾಥ ಪೈ, ಪುರೋಹಿತರು, ಅರ್ಚಕರು, ಸೇವಾದಾರ ಕುಟುಂಬಸ್ಥರು, ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!