spot_img
Tuesday, June 9, 2026
spot_img

ಕುಂದಾಪುರ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

 

ದಿನಾಂಕ 5.6.2026 ಕುಂದಾಪುರ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೀಡುವುದರ ಮೂಲಕ ಆಚರಿಸಲಾಯಿತು. ಸಿಎಸ್ಸಿ ಕೃಪಾ ಚರ್ಚಿನ ಧರ್ಮಗುರುಗಳಾದ ಇಮಾನ್ಯುವೆಲ್ ಜೈಕರ್ ರವರು ಅತಿಥಿಗಳಾಗಿ ಆಗಮಿಸಿ ಪರಿಸರವನ್ನು ರಕ್ಷಿಸುವುದರಿಂದ ಇಡೀ ಮಾನವ ಸಂಕುಲದ ಉನ್ನತೀಕರಣ ಸಾಧ್ಯ ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಅನಿತಾ ಆಲಿಸ್ ಡಿಸೋಜಾ ರವರು ವಿದ್ಯಾರ್ಥಿಗಳಿಗೆ ಜೀವನದ ವಿಶೇಷ ಕ್ಷಣಗಳನ್ನು ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿ ಎಂದು ತಮ್ಮ ಸ್ವಾಗತ ಭಾಷಣದಲ್ಲಿ ತಿಳಿಸಿಕೊಟ್ಟರು. ಅಂತೆಯೇ ಸಿ ಎಸ್ ಐ ಕೃಪಾ ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸಿದರು. ಶಿಕ್ಷಕಿ ಶ್ರೀಮತಿ ಲತಾ ಸಾಲಿನ್ಸರವರು ಮಕ್ಕಳಿಗೆ ಗಿಡಗಳನ್ನು ಹಂಚುವುದರ ಮೂಲಕ ಪರಿಸರ ದಿನಾಚರಣೆಯ ಶುಭಾಶಯ ಕೋರಿದರು. ಮಕ್ಕಳೆಲ್ಲರೂ ಪರಿಸರ ದಿನಾಚರಣೆಯ ಚಿತ್ರಗಳನ್ನು ಬಿಡಿಸಿ ಸ್ಲೋಗನ್ ಗಳನ್ನು ಬಿತ್ತಿ ಪತ್ರದ ಮೇಲೆ ಬರೆದು ತಂದು ಪ್ರದರ್ಶಿಸಿದರು. ಸಹ ಶಿಕ್ಷಕಿ ಶ್ರೀಮತಿ ಪವಿತ್ರ ಕೊತ್ವಾಲ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!