spot_img
Tuesday, June 9, 2026
spot_img

ಕೆಸಿ‌ಇಟಿ ಫಲಿತಾಂಶದಲ್ಲಿ ಹೆಮ್ಮಾಡಿ ಜನತಾ ಪಿಯು ಕಾಲೇಜಿಗೆ ರಾಜ್ಯ ಮಟ್ಟದ 52ನೇ Rank | ಶ್ರೇಯಸ್ ಪಿ ಗಾಣಿಗ ಇಂಜಿನಿಯರಿಂಗ್ ವಿಭಾಗದಲ್ಲಿ 769 ರ್‍ಯಾಂಕ್| ಒಂದು ಸಾವಿರದ ಒಳಗೆ 10 ರ್‍ಯಾಂಕ್

ಹೆಮ್ಮಾಡಿ: ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್ ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಗ್ರಾಮೀಣ ಭಾಗದ ಪ್ರತಿಷ್ಟಿತ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಶ್ರಾವ್ಯ ದೇವಾಡಿಗ ರಾಜ್ಯ ಮಟ್ಟದಲ್ಲಿ 52ನೇ Rank ಪಡೆದು ಗ್ರಾಮೀಣ ಭಾಗದಲ್ಲೇ ಹೊಸ ಸಂಚಲನ ಮೂಡಿಸಿದ್ದಾರೆ. ಈಕೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲೂ ರಾಜ್ಯ ಮಟ್ಟದ ಮೂರನೇ Rank ಪಡೆದಿದ್ದಾರೆ. ಕಾಲೇಜಿನ 10 ವಿದ್ಯಾರ್ಥಿಗಳು ಸಾವಿರದ ಒಳಗೆ Rank ಪಡೆದು ಅಮೋಘ ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳಾದ ದೀಕ್ಷಾ 98ನೇ Rank, ಶ್ರೇಯಸ್ ಪಿ ಗಾಣಿಗ 137, ಮರಿಯಾ ವಿಯೋಲಾ 392 ನೇ Rank, ಗಗನ್ 415ನೇ Rank , ಸ್ಮೃತಿಕಾ 741ನೇ Rank, ಶ್ರದ್ದಾ ಎಸ್ ಮೊಗವೀರ 774 ನೇ ರ್ಯಾಂಕ್, ಸಹನ್ಯ 776 ನೇ ರ್ಯಾಂಕ್, ಸಾಕ್ಷಿ ಎಸ್ ಪೂಜಾರಿ 858 ನೇ Rank, ಇಂಚರಾ ಅಶೋಕ್ 952 ನೇ Rank, ಅಕ್ಷತಾ ವೀರಣ್ಣ 1144 Rank, ಹೇಮಂತ್ ಗಣೇಶ್ ಸಿ. ವಿ, 1203 Rank, ಪ್ರೀತಿಕಾ 1505 Rank, ಆಯುಷ್ 2903ನೇ Rank, ಮಾನ್ಯ ಪೂಜಾರಿ 4508ನೇ Rank, ಪ್ರಸಾದ್ ಪೂಜಾರಿ 5262ನೇ ರ್ಯಾಂಕ್, ದೀಕ್ಷಾ 5592 Rank ಪಡೆದಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಶ್ರೇಯಸ್ ಪಿ ಗಾಣಿಗ 769 ನೇ Rank, ಅಕ್ಷತಾ ವೀರಣ್ಣ 1144 Rank, ಹೇಮಂತ್ ಗಾಣಿಗ 1203 Rank, ಪಡೆಯುದರ ಮೂಲಕ ಅದ್ವಿತೀಯ ಸಾಧನೆ ಮಾಡಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಪಡೆಯಲು ಅರ್ಹರಾಗಿದ್ದಾರೆ.
ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜನತಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮರೀತಿಯಲ್ಲಿ ತರಬೇತುಗೊಳಿಸಿ  ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!