spot_img
Tuesday, June 9, 2026
spot_img

ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತೋತ್ಸವ ಹಾಗೂ ಶಿಕ್ಷಕ ರಕ್ಷಕ ಸಭೆ

ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತೋತ್ಸವ ಹಾಗೂ ಶಿಕ್ಷಕ ರಕ್ಷಕ ಸಭೆ

ಕುಂದಾಪುರ, ಜೂ.8; ನಗರದ ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ ದೀಪ ಬೆಳಗುವುದರ ಮೂಲಕ ಸೈಂಟ್ ಮೇರಿಸ್ ಪ. ಪೂ. ಕಾಲೇಜಿನಲ್ಲಿ ಜೂ.7 ರಂದು 2026 ನೇ ಸಾಲಿನ ನೂತನ ವಿದ್ಯಾರ್ಥಿಗಳಿಗೆ ಸ್ವಾಗತೋತ್ಸವ ಹಾಗೂ ಶಿಕ್ಷಕ ರಕ್ಷಕ ಸಭೆಯ ಕಾರ್ಯಕ್ರಮವನ್ನು, ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಧರ್ಮಗುರು, ವಿದ್ಯಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಅ|ವಂ|ಪಾವ್ಲ್ ರೇಗೊ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಅವರು ‘ನಮ್ಮ ಕಾಲೇಜಿನಲ್ಲಿ ಬೇಕಾದ್ದು ಎಲ್ಲ ವ್ಯವಸ್ಥೆ ಇದೆ, ಅನುಭವವುಳ್ಳ ಪ್ರಾಧ್ಯಪಕರಿದ್ದಾರೆ, ಹಾಗಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ವರ್ಷವನ್ನು ಚೆನ್ನಾಗಿ ಆರಂಭಿಸಬೇಕು, ವಿದ್ಯಾರ್ಥಿಗಳು ಕಾಲೇಜು ಜೀವನ ಬರೆ ಮೋಜಿಗೆ ಅಲ್ಲವೆಂದು ತಿಳಿದುಕೊಳ್ಳಬೇಕು, ಈ ಸಮಯದಲ್ಲಿ ನಮ್ಮ ಶಿಕ್ಷಣಕ್ಕೆ ಮಹತ್ವ ನೀಡಬೇಕು, ಈ ಕಾಲೇಜಿನಲ್ಲಿ ಬರೆ ಶಿಕ್ಷಣ ಮಾತ್ರವಲ್ಲ ಸಂಸ್ಕಾರವನ್ನು ಕಲಿಸಿಕೊಡುತ್ತಾರೆ, ಹೆತ್ತವರು ತಮ್ಮ ಮಕ್ಕಳ ಬಗ್ಗೆ ಗಮನ ಇಡಬೇಕು, ಹೊಸ ವಿದ್ಯಾರ್ಥಿಗಳು ಇಂದು ಅತಿಥಿಗಳು ನೀಡಿದ ಹಿತನುಡಿಗಳನ್ನು ಪಾಲಿಸಬೇಕು’ ಎಂದು ನೂತನವಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.

ಈ ಸಂಧರ್ಭದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಹಳೆ ವಿದ್ಯಾರ್ಥಿ ಯುವ ವೈದ್ಯ ಡಾ.ವಿಕ್ಟರ್ ಡಿಕೋಸ್ತಾ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೋನ್ಸಾ ಮಾತನಾಡಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರ‍್ಯಾಂಕ್ ಪಡೆದ ಪ್ರಥ್ವಿರಾಜ್ ಆರ್. ಗಾಣಿಗ, 10 ನೇ ರ‍್ಯಾಂಕ್ ಪಡೆದ ವಿದ್ಯಾಶ್ರೀ, 13 ನೇ ರ‍್ಯಾಂಕ್ ಪಡೆದ ವೈಷ್ಣವಿ, ವಿಜ್ಞಾನ ವಿಭಾಗದಲ್ಲಿ ಕಾಲೇಜಿನಲ್ಲಿ ಅತ್ಯುತ್ತಮ ಅಂಕ ಪಡೆದ ಕನ್ನಿಕಾ ಇವರಿಗೆ ಫಲ ಪುಷ್ಪ, ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರಲ್ಲಿ ಪ್ರಥ್ವಿರಾಜ್ ಆರ್. ಗಾಣಿಗ, ಕ್ರಜ್ಞತೆಯನ್ನು ಸಲ್ಲಿಸಿದರು. ಇದೇ ಸಂಸ್ಥೆಯಲ್ಲಿ 5 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಅಧ್ಯಾಪಕಿ ರೇಶ್ಮಾ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು. ಅತ್ತ್ಯುತ್ತಮ ಶ್ರೇಣಿಯಲ್ಲಿ ತೆರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾಲೇಜಿನ ನೂತನ ಪ್ರಾಂಶುಪಾಲರಾದ ವಂ|ಧರ್ಮಗುರು ರೊಲ್ವಿನ್ ಫೆರ್ನಾಂಡಿಸ್ ಸ್ವಾಗತಿಸಿದರು. ಅಧ್ಯಾಪಕಿ ಶರ್ಮೀಳಾ ಮಿನೆಜೇಸ್ ಕಾರ್ಯಕ್ರಮದ ಸಂಯೋಜಕಿಯಾಗಿದ್ದು, ಹಿರಿಯ ಅಧ್ಯಾಪಕ ನಾಗರಾಜ್ ಮತ್ತು ಅಧ್ಯಾಪಕಿ ಬೀನು ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಧ್ಯಾಪಕಿ ಗೌರಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು, ಅಧ್ಯಾಪಕ ಯೋಗೇಶ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!