spot_img
Sunday, August 2, 2026
spot_img

ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ(ನಿ)ದ ಸರ್ವಸದಸ್ಯರ ಸಾಮಾನ್ಯ ಸಭೆ

ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ(ನಿ)ತ್ರಾಸಿ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಇದರ 10ನೇ ವಾರ್ಷಿಕ ಸರ್ವಸದಸ್ಯರ ಸಾಮಾನ್ಯ ಸಭೆಯು ದಿನಾಂಕ 30-05-2026ರ ಶನಿವಾರ ಮದ್ಯಾಹ್ನ 2-30ಕ್ಕೆ ಅಣ್ಣಪ್ಪಯ್ಯ ಸಭಾಭವನ ತ್ರಾಸಿ ಇಲ್ಲಿ ಜರುಗಿತು.
ಸಂಘವು 86,ಕೋಟಿ ವಾರ್ಷಿಕ ವ್ಯವಹಾರ ನೆಡೆಸಿ 30,62,360.00 ಪಾಲುಬಂಡವಾಳ ರೂ.21,45,52,675.52 ಠೇವಣಿ ಹೊಂದಿದ್ದು, 16,53,84,785.00 ಸಾಲ ನೀಡಿ ಬೇರೆ ಬ್ಯಾಂಕು ಮತ್ತು ಸಹಕಾರ ಸಂಸ್ಥೆಗಳಲ್ಲಿ 9,21,12,376.00 ಕೋಟಿ ವಿನಿಯೋಗ ಮಾಡಿದ್ದು, ಸಂಘದ ಕಾಯ್ದಿರಿಸಿದ ನಿಧಿ 5,12,14,688.66 ರೂ, ಒಟ್ಟು ದುಡಿಯುವ ಬಂಡವಾಳ 26,87,31,923.00 ಕೋಟಿ ಯಂತೆ ವರದಿಯಲ್ಲಿ ಮುಖ್ಯಕಾರ್ಯನಿರ್ವಾಹಕರು ಮಂಡಿಸಿದರು. ಸಂಘವು ಆರಂಭದಿAದಲೂ ಲಾಭದಿಂದ ಮುನ್ನೆಡೆಯುತ್ತಿದ್ದು, 2025-26ರಲ್ಲಿ 21,09,066.00ರೂ ಲಾಭ ಬಂದಿರುತ್ತದೆ.ಶೇಕಡ-9.50% ರಷ್ಟು ಡಿವಿಡೆಂಡ ಘೋಷಿಸಲಾಯಿತು. ಇಂದಿನ ಸಭೆಯನ್ನು ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಯವರು ಸಭೆಯನ್ನು ಉದ್ಘಾಟನೆ ಮಾಡಿ, ಈ ಸಂಸ್ಥೆ ವಿನೂತನ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡುತ್ತೀರುವ ಒಂದು ಯಶಸ್ವಿ ಸಹಕಾರಿ ಸಂಸ್ಥೆ ಎಂದು ಬಣ್ಣಿಸಿದರು. ನಿವೃತ್ತ ಸಹಾಯಕ ನಿಬಂಧಕರಾದ ಎಸ್.ವಿ ಅರುಣ್‌ಕುಮಾರ್ ಸದಸ್ಯರ ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ವಿಶೇಷ ಸಹಕಾರಿ ಸಂಘ ಎಂದು ಬಣ್ಣಿಸಿದರು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್ ಮಧನ್ ಕುಮಾರ್.ಅಧ್ಯಕ್ಷ ಸ್ಥಾನ ವಹಿಸಿದ್ದು ಸದಸ್ಯರಿಗೆ ತುರ್ತು ಸ್ಪಂದಿಸುವ ಆಪತ್ಕಾಲದ ಸಹಕಾರಿ ಎಂದರು ಮುಖ್ಯಾ ಅತಿಥಿ ವೆಂಕಟೇಶ ಪೂಜಾರಿ ಶಾಖಾ ಪ್ರಭಂಧಕರು ದ.ಕ.ಜಿ.ಕೇ.ಬ್ಯಾ ತ್ರಾಸಿಶಾಖೆ ಉಪಸ್ಥಿತರಿದ್ದು, ಶುಭ ಕೋರಿದರು. ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಆಡಳಿತ ಮಂಡಳಿಸದಸ್ಯರು ಉಪಸ್ಥಿತರಿದ್ದು ಯಶ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ(ನಿ)ತ್ರಾಸಿ ಹಾಗೂ ಶ್ರೀ ಸಾಯಿ ಗ್ರಾಮೀಣಾಭಿವೃದ್ದಿ ಟ್ರಸ್ಟ (ರಿ) ತ್ರಾಸಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಾಯಿ ಸ್ವ ಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಎಸ್‌ಎಸ್‌ಎಲ್‌ಸಿಯಲ್ಲಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಶೇ.85 ಕ್ಕಿಂತ ಅಧಿಕ ಅಂಕ ಗಳಿಸಿದ 24 ಮಕ್ಕಳನ್ನು ಗೌರವ ಶಿಕ್ಷಣ ಪ್ರೋತ್ಸಾಹಧನದೊಂದಿಗೆ ಹೂ ಗಿಡ ನೀಡಿ ಅಭಿನಂದಿಸಲಾಯಿತು. ಶ್ರೀ ಸಾಯಿ ಸ್ವ ಸಹಾಯ ಸಂಘದ ಸದಸ್ಯರ 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ನೋಟ್ಸ್ ಪುಸ್ತಕ ವಿತರಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಕ ಭಾಸ್ಕರ ಬಿಲ್ಲವರವರು ವರದಿ ಮಂಡಿಸಿ, ಸಂಘದ ಮಹಾಸಭೆಯ ಕಾರ್ಯಕಲಾಪ ನೆಡೆಸಿದರು, ಸಂಘದ ಬೆಳವಣಿಗೆಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಗ್ರಾಹಕರಿಗೆ ಹಿತೈಷಿಗಳಿಗೆ ಸಹಕಾರಿ ಇಲಾಖೆಯ ಅಧಿಕಾರಿಗಳಿಗೆ ಇತರ ಸಹಕಾರಿಗಳಿಗೆ ಹಾಗೂ ಸಭೆಯಲ್ಲಿ ಉಪಸ್ಥಿತರಿರುವ ಅತಿಥಿಗಳು ಮತ್ತು ಸರ್ವಸದಸ್ಯರಿಗೆ ಸಂಘದ ಪರವಾಗಿ ಸಂಘದ ವಂದನೆ ಸಲ್ಲಿಸಲಾಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!