spot_img
Tuesday, June 2, 2026
spot_img

ರಾಜೇಂದ್ರ ಪೂಜಾರಿ ತ್ರಾಸಿ ಇವರಿಗೆ ಡಾ.ಆರ್.ಎಂ. ಹಡಪದ್ ರಾಷ್ಟ್ರೀಯ ಪುರಸ್ಕಾರ

ಕುಂದಾಪುರ: ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ರಿ., ಬಾಗಲಕೋಟೆ ಇವರು ಆಯೋಜಿಸಿದ, ರಾಷ್ಟ್ರೀಯ ಚಿತ್ರಕಲಾ ಸಮ್ಮೇಳನ ಬೆಂಗಳೂರು 2026 ರ ಅಂಗವಾಗಿ ಡಾ ಆರ್.ಎಂ ಹಡಪದ್ ರಾಷ್ಟ್ರೀಯ ಪ್ರಶಸ್ತಿ ಕುಂದಾಪುರ ತಾಲೂಕಿನ, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಸಿದ್ದಾಪುರ, ಇಲ್ಲಿನ ಚಿತ್ರಕಲಾ ಶಿಕ್ಷಕ ರಾಜೇಂದ್ರ ಪೂಜಾರಿ, ತ್ರಾಸಿಯವರಿಗೆ ಲಭಿಸಿದೆ.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಕನ್ನಡ ವಿಶ್ವ ವಿದ್ಯಾಲಯದ ದೃಶ್ಯಕಲಾ ವಿಭಾಗದ ಮುಖ್ಯಸ್ಥರಾದ ಡಾ.ಮೋಹನ್ ರಾವ್ ಪಾಂಚಾಲ, ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಸ್. ಸಿ ಪಾಟೀಲ್ , ಹಾಗೂ ವಿಶ್ರಾಂತ ವಿಶೇಷಾಧಿಕಾರಿಗಳು ಕರ್ನಾಟಕ ಲಲಿತ ಕಲಾ ವಿಶ್ವವಿದ್ಯಾಲಯ ಬಾದಾಮಿ, ಇಳಕಲ್ ವಿಜಯ್ ಮಹಾಂತೇಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಸವರಾಜ್ ಗವಿ ಮಠ ಹಾಗೂ ರಮೇಶ್ ಕಮತಗಿ ಮೇಘ ಮೈತ್ರಿ ಕನ್ನಡ ಸಾಹಿತ್ಯ ಸಂಘ ರಿ., ಬಾಗಲಕೋಟೆ, ಸಾಹಿತಿ ಎಂ ವಿ ಷಡಕ್ಷರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಮಾಡಿದರು.

ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಒಟ್ಟು 19 ಮಂದಿ ಸಾಧಕರನ್ನು ಈ ವೇದಿಕೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!