spot_img
Tuesday, June 2, 2026
spot_img

ಬಸ್ರೂರು: ಸಂತ ಫಿಲಿಪ್ ನೇರಿ ಐ.ಸಿ.ಎಸ್.ಇ ಸೆಂಟ್ರಲ್ ಶಾಲೆ ಪ್ರಾರಂಭೋತ್ಸವ 

ಬಸ್ರೂರು: ಬಸ್ರೂರಿನ ಸಂತ ಫಿಲಿಪ್ ನೇರಿ ಐ.ಸಿ.ಎಸ್.ಇ ಸೆಂಟ್ರಲ್ ಶಾಲೆಯಲ್ಲಿ ನೂತನ ಶೈಕ್ಷಣಿಕ ವರ್ಷದ ಪುನರಾರಂಭ ನಡೆಯಿತು.
ಶಾಲಾ ಜಂಟಿ ಕಾರ್ಯದರ್ಶಿ ವಂದನೀಯ ಧರ್ಮಗುರುಗಳಾದ ರಾಯ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲರಾದ ಧರ್ಮಗುರು ಡ್ಯಾನ್ಸಿ ಸುನೀಲ್ ಮಾರ್ಟಿಸ್, ಶಾಲಾ ಸಂಯೋಜಕಿ ಸಿಸ್ಟರ್ ಶಾಂತಿ ಪ್ರಮೀಳ ಡಿಸೋಜಾ ಹಾಗೂ ಶ್ರೀಮತಿ ಸುಜಾತ ಹಾಗೂ ಸಹ ಶಿಕ್ಷಕಿಯರಿಂದ ಶಾಲಾ ಪುನಾರಾರಂಭಕ್ಕೆ ಜ್ಞಾನದ ಸಂಕೇತವಾದ ಪುಸ್ತಕದೊಂದಿಗೆ ಜ್ಯೋತಿಯನ್ನು ಬೆಳಗುವುದರ ಮೂಲಕ ಚಾಲನೆ ನೀಡಲಾಯಿತು.

ಪ್ರತಿಯೊಬ್ಬರಿಗೂ ಹೊಸ ಆರಂಭ ಉತ್ತಮ ಭವಿಷ್ಯದತ್ತ ಸಾಗುವ ಅವಕಾಶವಿದೆ ಮತ್ತು ಎಲ್ಲರೂ ಚೈತನ್ಯದಿಂದ ಅಧ್ಯಯನದಲ್ಲಿ ತೊಡಗಿಸಿಕೊಂಡು ತಮ್ಮ ಗುರಿಯನ್ನು ಸಾಧಿಸಬೇಕು ಎಂದು ಮಕ್ಕಳಿಗೆ ಹರಸುತ್ತ ಜ್ಯೋತಿಯನ್ನು ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಎಲ್ಲಾ ಶಿಕ್ಷಕರು, ಮಕ್ಕಳು ಶಾಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!