spot_img
Sunday, October 18, 2026
spot_img

ಅ. 19: ಕುಂದಾಪುರದಲ್ಲಿ ಹುಲಿವೇಷ ನೃತ್ಯ ಪ್ರದರ್ಶನ

ಕುಂದಾಪುರ: ನವರಾತ್ರಿಯಲ್ಲಷ್ಟೇ ವಿಶೇಷವಾಗಿ ಬಣ್ಣ ಹಚ್ಚಿ ಹೆಜ್ಜೆ ಹಾಕುವ ಪಾರಂಪರಿಕ ಹುಲಿವೇಷ ನೃತ್ಯ ಕುಂದಾಪುರದ ವೈಶಿಷ್ಟö್ಯವಾಗಿದೆ. ವಾದ್ಯ, ತಾಸ್ಮಾರ ಡೋಲು ಮೌರಿಯ ನಾದಕ್ಕೆ ಗೊಂಡೆಯಾಡಿಸುತ್ತಾ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಹುಲಿಗಳ ನರ್ತನ, ಹುಲಿವೇಷ ಪ್ರೇಮಿಗಳ ಹೃನ್ಮನ ಸೆಳೆಯುತ್ತದೆ. ಕಲಾಕ್ಷೇತ್ರ-ಕುಂದಾಪುರ ಟ್ರಸ್ಟ್ ಹುಲಿವೇಷದಾರಿಗಳ ತಂಡದೊಂದಿಗೆ  ಬಹುವರ್ಷಗಳಿಂದ ಕೈಜೋಡಿಸಿ, ಸಾರ್ವಜನಿಕರನ್ನು ಒಂದೆಡೆ ಸೇರಿಸಿ ನೃತ್ಯ ಪ್ರದರ್ಶನವನ್ನು ಪ್ರತೀ ವರ್ಷವೂ ವಿಶೇಷ ವೇದಿಕೆ ಸಿದ್ದಪಡಿಸಿ ಬಿನ್ನವಾದ ಶೈಲಿಯಲ್ಲಿ ನೃತ್ಯ ಪ್ರದರ್ಶನವನ್ನು ಆಯೋಜಿಸುತ್ತಿದೆ.

ಈ ಬಾರಿ ಆಕ್ಟೋಬರ್ 19ರಂದು ಸೋಮವಾರ ಸಂಜೆ 7 ಕ್ಕೆ ಕುಂದಾಪುರದ ಬೋರ್ಡ್ ಹೈಸ್ಕೂಲಿನ ಬಯಲು ರಂಗ ವೇದಿಕೆಯಲ್ಲಿ ವಿದ್ಯುತ್ ದೀಪದ ಬೆಳಕಿನಲ್ಲಿ ಈ ಕಾರ್ಯಕ್ರಮ ವಿಜೃಂಬಿಸಲಿದೆ. ಕುಂದಾಪುರದ ಪಾರಂಪರಿಕ ಹುಲಿವೇಷದ ಜೊತೆಗೆ, ಪರಿಸರದ ವಿವಿಧ ಹುಲಿವೇಷಧಾರಿಗಳ ತಂಡ ಇಲ್ಲಿ ಭಾಗವಹಿಸಿ ಕಲಾಸಕ್ತರನ್ನು ರಂಜಿಸಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹುಲಿವೇಷದಾರಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಮುಂದಿನ ಅನೇಕ ತಲೆಮಾರುಗಳಿಗೆ ಈ ಕಲೆ ಉಳಿಯುವಂತೆ ಕಲಾವಿದರನ್ನು ಹುರಿದುಂಬಿಸಬೇಕೆಂದು ಸಂಸ್ಥೆಯ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!