spot_img
Monday, June 1, 2026
spot_img

ಕುಂದಾಪುರದ’ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಪ್ರಾಯೋಜಿಸುವ ‘ಕರಾವಳಿ ಮಹಿಳಾ ಕಥಾ ಸ್ಪರ್ಧೆ’

ಕುಂದಾಪುರ : ಕುಂದಾಪುರದ ‘ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆಯವರು ‘ಕರಾವಳಿಯ ನಾಲ್ಕು ಜಿಲ್ಲೆ(ಉಡುಪಿ-ದಕ್ಷಿಣ ಕನ್ನಡ, ಉತ್ತರ ಕನ್ನಡ-ಕಾಸರಗೋಡು)ಗಳ ಮಹಿಳೆಯರಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ.
ಸ್ಪರ್ಧೆಯ ನಿಬಂಧನೆಗಳು: 1. ಕಥೆಯು 1000 ಶಬ್ದಗಳ ಮಿತಿಯಲ್ಲಿರಲಿ 2. ವೇದಿಕೆಯ ಸದಸ್ಯರನ್ನು ಬಿಟ್ಟು ಹೇಳಿದ ಜಿಲ್ಲೆಗಳಲ್ಲಿ ಹುಟ್ಟಿ ಪ್ರಸ್ತುತ ಬೇರೆಡೆ ನೆಲೆಯಾದವರೂ ಬೇರೆಡೆ ಹುಟ್ಟಿ ಈಗ ಈ ಜಿಲ್ಲೆಗಳಲ್ಲಿ ನೆಲೆಯಾದವರೂ ಭಾಗವಹಿಸಬಹುದು.
3. ವಸ್ತುವಿನ ಆಯ್ಕೆ ನಿಮ್ಮದು. ಆದರೆ ಅದರಲ್ಲಿ ಮಹಿಳಾಪರ ಚಿಂತನೆಯಿರಬೇಕು. ಕಥೆ ಸ್ವತಂತ್ರವಾಗಿರಬೇಕು. ಇದುವರೆಗೆ ಬೇರೆಲ್ಲಿಯೂ ಪ್ರಕಟವಾಗಿರಬಾರದು.
4. ಪ್ರಥಮ ಬಹುಮಾನ ರೂ.4000. ದ್ವಿತೀಯ ರೂ.3000 ಮತ್ತು ತೃತೀಯ ರೂ.2000 ನೀಡಲಾಗುವುದು.
5. ಕಥೆಯನ್ನು ಟೈಪ್ ಮಾಡಿ ನಿಮ್ಮ ಆಧಾರ ಕಾರ್ಡ್ ಪ್ರತಿಯೊಂದಿಗೆ ಜುಲೈ 7 ರಂದು ಸಂಜೆಯೊಳಗೆ suragangaksmv@ gmail.com ಗೆ ಮೆಯಿಲ್ ಮಾಡಬೇಕು. ಅನಂತರ ಬಂದ ಕಥೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
6. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!