spot_img
Sunday, May 31, 2026
spot_img

ಮಂಗಳೂರು ಸೈಂಟ್ ಆಗ್ನೆಸ್ ಕಾಲೇಜಿನ   ನಿವೃತ್ತ ಪ್ರಾಧ್ಯಾಪಕಿ ಡಾ. ಸರಸ್ವತಿ ಎಸ್ ರಾವ್ ನಿಧನ

ಕುಂದಾಪುರ, ಮೇ 31: ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ  37 ವರ್ಷಗಳ ಕಾಲ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿಯೂ ವಿಭಾಗ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿ 2015ರಲ್ಲಿ ನಿವೃತ್ತರಾಗಿದ್ದ ಡಾ.ಸರಸ್ವತಿ ಎಸ್.ರಾವ್ ( ಲೇಖಕಿ ಪಾರ್ವತಿ ಜಿ.ಐತಾಳ್ ಅವರ ಸಹೋದರಿ) ಅಲ್ಪಕಾಲದ ಅಸ್ವಾಸ್ಥ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಅಪಾರ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು ಸದಾ ನಗುಮೊಗದ ವ್ಯಕ್ತಿತ್ವವುಳ್ಳವರಾಗಿದ್ದರು. ಅತೀವ ಕುಟುಂಬ ಪ್ರೇಮವುಳ್ಳವರಾಗಿದ್ದು, ಬಂಧು ಬಾಂಧವರ ಪ್ರೀತಿ ಅಭಿಮಾನ ಗೌರವಕ್ಕೆ ಪಾತ್ರರಾದ ಡಾ. ಸರಸ್ವತಿ ರಾವ್ ನ್ಯಾನೋ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಿ ಮಂಗಳೂರು ವಿ.ವಿ.ಯಿಂದ  ಡಾಕ್ಟರೇಟ್ ಪಡೆದಿದ್ದರು. ಅಲ್ಲದೆ ‘ನ್ಯಾನೋ ತಂತ್ರಜ್ಞಾನ’, ‘ ಪ್ರಾಚೀನ ಕಾಲದ ಭಾರತೀಯ ವಿಜ್ಞಾನಿಗಳು’  ಎಂಬ ಪುಸ್ತಕಗಳನ್ನು ಕನ್ನಡದಲ್ಲಿ ಬರೆದಿದ್ದರು. ಅಜಿಮ್ ಪ್ರೇಮ್ ಜಿ ಯುನಿವರ್ಸಿಟಿಗೋಸ್ಕರ ಪಠ್ಯ ಪುಸ್ತಕಗಳನ್ನೂ ಬರೆದಿದ್ದರು. ಮಾತ್ರವಲ್ಲದೆ ‘ವಿಷ್ಣು ಸಹಸ್ರನಾಮ’ ಸ್ತೋತ್ರದ ವ್ಯಾಖ್ಯಾನವನ್ನೂ ಪುಸ್ತಕರೂಪದಲ್ಲಿ ಪ್ರಕಟಿಸಿದ್ದರು.

ಡಾ. ಸರಸ್ವತಿಯವರು ಪತಿ  ಡಾ.ಚ.ನ.ಶಂಕರ ರಾವ್ (ಸಮಾಜಶಾಸ್ತ್ರ ಪಠ್ಯ ಪುಸ್ತಕಗಳ ಪ್ರಸಿದ್ಧ ಲೇಖಕರು) ಮಕ್ಕಳಾದ ಡಾ. ಶ್ರುತಿ , ಸ್ವಾತಿ ಮತ್ತು ದೀಪ್ತಿ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗದವರನ್ನೂ  ಅನೇಕ ಅಭಿಮಾನಿಗಳನ್ನೂ ಬಿಟ್ಟು ಅಗಲಿದ್ದಾರೆ..

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!