spot_img
Friday, May 29, 2026
spot_img

ಸಿದ್ದಾಪುರ ಏತ ನೀರಾವರಿ ಯೋಜನೆ: 890×4 ಹೆಚ್.ಪಿ ಪಂಪ್‍ನಿಂದ ನದಿಯಿಂದಲೇ ನೀರೆತ್ತುವಂತೆ ಆಗ್ರಹಿಸಿ ಸಂಸದರಿಗೆ ಮನವಿ

ಕುಂದಾಪುರ: ಸಿದ್ದಾಪುರ ಏತ ನೀರಾವರಿ ಯೋಜನೆ: 890×4 ಹೆಚ್.ಪಿ ಪಂಪ್ ನಿಂದ ನದಿಯಿಂದಲೇ ನೀರೆತ್ತುವಂತೆ ಆಗ್ರಹಿಸಿ ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಗುರುರಾಜ ಗಂಟಿಹೊಳೆ ಅವರಿಗೆ ಹೆಮ್ಮಾಡಿಯಲ್ಲಿ ಮನವಿ ಸಲ್ಲಿಸಲಾಯಿತು.

ಸುಮಾರು 160 ಕೋಟಿಗೂ ಮಿಕ್ಕಿದ ಸಿದ್ದಾಪುರ ಏತ ನೀರಾವರಿಯ ಕಾಮಗಾರಿ ಕೆಲಸ ಪ್ರಾರಂಭವಾಗಿದ್ದು, 890×4 (2670 ಹೆಚ್.ಪಿ) ಅಶ್ವಶಕ್ತಿಯ ಮೋಟಾರನ್ನು ಹೊಳೆಶಂಕರನಾರಾಯಣ ಜಲಾಶಯದ ತುಂಬಿದ ನೀರಿಗೆ ಅಳವಡಿಸಿ ದಿನದ 24×7 ಗಂಟೆ ನೀರು ಹಾಯಿಸಿದರೆ ಜಲಾಶಯದ ಕೆಳಭಾಗದ ಉದ್ಭವ ಶಿವಲಿಂಗ ಹಾಗೂ ಕೆಳಗಿನ ಗ್ರಾಮಗಳಾದ ಸಿದ್ದಾಪುರ, ಉಳ್ಳೂರು-74, ಅಮಾಸೆಬೈಲು, ಮಚ್ಚಟ್ಟು, ರಟ್ಟಾಡಿ, ಹಾಲಾಡಿ-28, ಹಾಲಾಡಿ-76, ಕುಳಂಜೆ, ಹಾರ್ದಳ್ಳಿ-ಮಂಡಳ್ಳಿ, ಶಂಕರನಾರಾಯಣ, ಮೊಳಹಳ್ಳಿ, ಜಪ್ತಿ, ಅಂಪಾರು, ಹಳ್ನಾಡು, ಕಾವ್ರಾಡಿ, ಬಸ್ರೂರು, ಬಳ್ಕೂರು, ಆನಗಳ್ಳಿ ಗ್ರಾಮಗಳ ನದಿ ಪಾತ್ರದ ಇಕ್ಕೆಲಗಳ ರೈತರಿಗೆ ತೊಂದರೆಯಾಗಲಿದೆ. ಅಣೆಕಟ್ಟಿಗೆ ಹೊಂದಿಕೊಂಡು ಜಾಕ್‍ವೆಲ್ ಪಾಯಿಂಟ್ ಮಾಡುವುದರಿಂದ ಈಗ ಇರುವ ಅಣೆಕಟ್ಟ್ಟೆಗೆ ತೊಂದರೆಯಾಗಲಿದ್ದು, ಭವಿಷ್ಯದಲ್ಲಿ ಅಣೆಕಟ್ಟಿನ ಕೆಳಭಾಗದ ಈ ಎಲ್ಲಾ ಗ್ರಾಮಗಳು ತೊಂದರೆ ಅನುಭವಿಸಬೇಕಾಗುತ್ತದೆ.

ಹಾಗೆಯೇ, ಹೊಳೆಶಂಕರನಾರಾಯಣ ಜಲಾಶಯದಿಂದ ಹೊರಹೋಗುವ ಎಡದಂಡೆ, ಬಲದಂಡೆ ಕಾಲುವೆ, ಅವುಗಳ ಉಪಕಾಲುವೆಯಲ್ಲೂ ನೀರು ಕಡಿಮೆಯಾಗಿ, ಕರಾವಳಿ ಭಾಗದ ಹೆಚ್ಚಿನ ಗ್ರಾಮಗಳು ಸಂಕಷ್ಟಕ್ಕೆ ಈಡಾಗಲಿದೆ. ಜೊತೆಗೆ ಉಡುಪಿ ನಗರ, ಕುಂದಾಪುರ ನಗರ ಸಹಿತ ಮೂಲ ನದಿಯ ಹಲವಾರು ಯೋಜನೆಗಳಿಗೆ ಮುಂದೆ ತೊಂದರೆಯಾಗಿ ಮೂಲ ನದಿ (ವಾರಾಹಿ) ಬರಿದಾಗಲಿದೆ. ಆದ್ದರಿಂದ, 890ಥ4 (2670 ಹೆಚ್.ಪಿ) ಅಶ್ವಶಕ್ತಿಯ ಏತ ನೀರಾವರಿ ವಿದ್ಯುತ್ ಮೋಟಾರನ್ನು ಹೊಳೆಶಂಕರನಾರಾಯಣ ದೇಗುಲದ ಕೆಳಗಡೆ ಮೂಲ ನದಿಗೆ ಅಳವಡಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಶ್ಚಿಮ ವಾಹಿನಿ ನೀರಾವರಿ ಅಚ್ಚಕಟ್ಟು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಿಟ್ಟೆ ರಾಜಗೋಪಾಲ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಗಣಪತಿ ಟಿ.ಶ್ರೀಯಾನ್, ಸದಾನಂದ ಬಳ್ಕೂರು, ರಾಘವೇಂದ್ರ ನೆಂಪು, ಮಹೇಶ ಮೆಂಡನ್, ಚಂದ್ರಶೇಖರ ಶೆಟ್ಟಿ, ನರಸಿಂಹ ಮೊಗವೀರ, ಆನಂದ ಮೊಗವೀರ, ಬಸವರಾಜ, ಶಂಕರ, ಸತೀಶ, ರವಿ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!