Thursday, March 28, 2024

ಸತತ 5ನೇ ಬಾರಿ ಗೆಲುವು ಸಾಧಿಸಿದ ರಾಧಾದಾಸ್


ಕುಂದಾಪುರ: ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ, ಮಹಿಳಾ ಪರ ಹೋರಾಟಗಾರ್ತಿ ರಾಧಾದಾಸ್ ಕುಂಭಾಶಿ ಅವರು ಕುಂಭಾಶಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸತತ 5ನೇ ಬಾರಿಗೆ ಆಯ್ಕೆಯಾಗುವ ಮೂಲಕ ಗಮನ ಸಳೆದಿದ್ದಾರೆ.


ಅವರು ಈ ಬಾರಿ ಕುಂಭಾಶಿ ಗ್ರಾಮ ಪಂಚಾಯತಿಯ ಎರಡೂ ವಾರ್ಡ್‌ಗಳಲ್ಲಿ ಸ್ಪರ್ಧಿಸಿ ಎರಡೂ ಕಡೆಗಳಲ್ಲಿ ಜಯಭೇರಿ ಭಾರಿಸಿದ್ದಾರೆ.


ಕುಂಭಾಶಿಯ ಒಂದನೇ ಹಾಗೂ ಮೂರನೇ ವಾರ್ಡಿನಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಅವರು ಜಯ ಸಾಧಿಸಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಡಿದ ಜನಪರ ಕಾರ್ಯಗಳು, ಸಾಮಾಜಿಕ ಸೇವೆಗಳನ್ನು ಬೆಂಬಲಿಸಿ ಮತದಾರರು ಆಯ್ಕೆ ಮಾಡಿದ್ದಾರೆ. ಆಯ್ಕೆ ಮಾಡಿರುವ ಎಲ್ಲ ಮತದಾರರಿಗೂ ಕೃತಜ್ಞತೆ ತಿಳಿಸಿರುವುದಾಗಿ ರಾಧಾದಾಸ್ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!