spot_img
Monday, April 20, 2026
spot_img

ಮೂರಾನೆಮರ ಶ್ರೀ ಬೊಬ್ಬರ್ಯ ಹಾಗೂ ನಾಗದೇವರ ಸನ್ನಿಧಿ: ಎ.21ರಿಂದ 25ರ ತನಕ ಜೀರ್ಣೋದ್ಧಾರ ಪುನರ್ ಪ್ರತಿಷ್ಠಾ ಮಹೋತ್ಸವ

ಕುಂದಾಪುರ: ಬಳ್ಕೂರಿನ ಸಪರಿವಾರ ನಾಗಬನ ಹಾಗೂ ಮೂರಾನೆಮರ ಬೊಬ್ಬರ್ಯ ದೈವಗಳ ಜೀರ್ಣೋದ್ಧಾರ ನೂತನ ಶಿಲಾಮಯ ಗುಡಿ ಲೋಕಾರ್ಪಣೆ, ಪುನರ್ ಪ್ರತಿಷ್ಠೆ, ಆಶ್ಲೇಷಾ ಬಲಿ, ಬ್ರಹ್ಮ ಕುಂಭಾಭಿಷೇಕ ಹಾಗೂ ಮಹಾ ಅನ್ನಸಂತರ್ಪಣೆ ಎಪ್ರಿಲ್ 22 ಬುಧವಾರ ನಡೆಯಲಿದೆ.

ಎಪ್ರಿಲ್ 21 ಮಂಗಳವಾರ ಸಂಜೆ 5.30ಕ್ಕೆ ನಾಗ ಮತ್ತು ಬೊಬ್ಬರ್ಯ ಸನ್ನಿಧಿಯಲ್ಲಿ ಸ್ಥಾನಶುದ್ಧಿ, ವಾಸ್ತು ಪೂಜಾ, ರಾಕ್ಷೋಘ್ನ ಹೋಮ, ದಿಗ್ಬಲಿ, ದಾನ, ದಿಶಾಹೋಮ, ಬಿಂಬಶುದ್ಧಿ ಪೂಜಾ, ಸಪ್ತಾಧಿವಾಸ ಪೂಜಾ, ಪ್ರತಿಷ್ಠಾದಿವಾಸ ಹೋಮ, ಶಯ್ಯಾ ಕಲ್ಪಾರಾಧನೆ ನಡೆಯಲಿದೆ.

ಎಪ್ರಿಲ್ 22 ಬುಧವಾರ ಬೆಳಿಗ್ಗೆ ಗುರುಗಣೇಶ ಪೂಜೆ, ಸ್ವಸ್ತಿ ಪುಣ್ಯಾಹ ವಾಚನಾ, ದೇವನಾಂದಿ, ಋತಿಗ್ವರಣೆ, ಮಧುಪರ್ಕ ಪೂಜಾ, ಸುಮುಹೂರ್ತದಲ್ಲಿ ರತ್ನನ್ಯಾಸಪೂರ್ವಕ ಶ್ರೀ ನಾಗ ಮತ್ತು ಸಪರಿವಾರ ಬೊಬ್ಬರ್ಯ ದೇವರ ಪುನಃ ಪ್ರತಿಷ್ಠಾ, ಜೀವಕುಂಭಾಭಿಷೇಕ, ಸರ್ವ ಪ್ರಾಯಶ್ಚಿತ, ಆಶ್ಲೇಷಾಬಲಿ, ನಾಗ ಸನ್ನಿಧಿಯಲ್ಲಿ 24 ಪರಿಕಲಶ ಸಹಿತ ಪ್ರಧಾನ ಬ್ರಹ್ಮಕುಂಭಾಭಿಷೇಕ, ಕಲಾತತ್ವ ಹೋಮ ಪೂರ್ವಕ ಪ್ರಧಾನ ಅಧಿವಾಸ ಹೋಮ, ಮಹಾಪೂಜಾ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 5.30ರಿಂದ ಶ್ರೀ ಬೊಬ್ಬರ್ಯ ಸನ್ನಿಧಿಯಲ್ಲಿ 300 ಪರಿಕಲಶ ಸಹಿತ ಪ್ರಧಾನ ಬ್ರಹ್ಮ ಕುಂಭ ಸ್ಥಾಪನಾ, ಕಲಾತತ್ವ ಹೋಮ, ಪ್ರಧಾನ ಅಧಿವಾಸ ಹೋಮ, ಬ್ರಹ್ಮ ಕುಂಭಾಭಿಷೇಕ ಮಹಾಪೂಜೆ ನಡೆಯಲಿದೆ.

ಪ್ರಧಾನ ಪುರೋಹಿತರಾಗಿ ಶೃಂಗೇರಿ ಆಸ್ಥಾನ ಪಂಚಾಂಗಕರ್ತರಾದ ಜ್ಯೋತಿಷ ವಿದ್ವಾನ್ ಹಾಲಾಡಿ ವಾಸುದೇವ ಜೋಯಸರು, ಅರ್ಚಕರಾಗಿ ಗಣೇಶ ಅಡಿಗರು ಬಳ್ಕೂರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿಕೊಡಲಿದ್ದಾರೆ.

ಎ.23ರಂದು ಗುರುವಾರ ಮಧ್ಯಾಹ್ನ 12-30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7 ಗಂಟೆಗೆ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ದೇವಸ್ಥಾನ ಜೀರ್ಣೋದ್ದಾರಕ್ಕೆ ರೂ.25,000 ಹಾಗೂ ಮೇಲ್ಪಟ್ಟು ಧನಸಹಾಯ ನೀಡಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು.

ಸಭಾ ಕಾರ್ಯಕ್ರಮದಲ್ಲಿ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನದ ಕಂದಾವರ ಇಲ್ಲಿನ ಆಡಳಿತ ಮೊಕ್ತೇಸರರಾದ ಡಾ.ಬಿ.ವೆಂಕಟರಮಣ ಉಡುಪ, ಬಳ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇ.ಮೂ.ಶ್ರೀಧರ ಉಡುಪ, ತಾ.ಪಂ.ಮಾಜಿ ಸದಸ್ಯ ರಾಮ್ ಕಿಶನ್ ಹೆಗ್ಡೆ, ಬೆಂಗಳೂರು ಹೋಟೆಲ್ ಉದ್ಯಮಿ ಹರ್ಷ ಕುಂದರ್ ಬಳ್ಕೂರು, ಮೂರಾನೆಮರ ಶ್ರೀ ಬೊಬ್ಬರ್ಯ ಹಾಗೂ ನಾಗದೇವರ ಸನ್ನಿಧಿ ಟ್ರಸ್ಟ್ ರಿ., ಬಳ್ಕೂರು ಇದರ ಅಧ್ಯಕ್ಷರಾದ ರಾಜೀವ ಎಮ್.ಪುತ್ರನ್ ಭಾಗವಹಿಸಲಿದ್ದಾರೆ.

ಎ.24 ಶುಕ್ರವಾರ ಸಂಜೆ 7 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಶ್ರೀ ನಂದಿಕೇಶ್ವರ ಭಜನಾ ಮಂಡಳಿ ಬಳ್ಕೂರು, ಶ್ರೀ ಭ್ರಮರಿ ಬೊಬ್ಬರ್ಯ ಮಹಿಳಾ ಭಜನಾ ಮಂಡಳೀ ಬಳ್ಕೂರು ಹಾಗೂ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಎ.25 ಶನಿವಾರ ಸಂಜೆ 5 ಗಂಟೆಯಿಂದ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ, ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಶೃಂಗೇರಿ ಆಸ್ಥಾನ ಪಂಚಾಂಗಕರ್ತರಾದ ಜ್ಯೋತಿಷ ವಿದ್ವಾನ್ ಹಾಲಾಡಿ ವಾಸುದೇವ ಜೋಯಸರು, ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಆನಂದ್ ಸಿ.ಕುಂದರ್, ತಾ.ಪಂ.ಮಾಜಿ ಸದಸ್ಯ ರಾಮ್ ಕಿಶನ್ ಹೆಗ್ಡೆ, ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಕುವೆಂಪು ಯುನಿರ್ವಸಿಟಿ ಶಿವಮೊಗ್ಗ ಇಲ್ಲಿನ ಡಾ.ಶುಭ ಮರವಂತೆ, ಉದ್ಯಮಿ ನರಸಿಂಹ ಪೂಜಾರಿ ಬಳ್ಕೂರು, ಮೂರಾನೆಮರ ಶ್ರೀ ಬೊಬ್ಬರ್ಯ ಹಾಗೂ ನಾಗದೇವರ ಸನ್ನಿಧಿ ಟ್ರಸ್ಟ್ ರಿ., ಬಳ್ಕೂರು ಇದರ ಅಧ್ಯಕ್ಷರಾದ ರಾಜೀವ ಎಮ್.ಪುತ್ರನ್ ಭಾಗವಹಿಸಲಿದ್ದಾರೆ. ಎನ್.ಆರ್.ದಾಮೋದರ ಶರ್ಮ ಬಾರಕೂರು ಹಾಗೂ ಪ್ರಣುತ್ ಆರ್.ಗಾಣಿಗ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಲಿದ್ದಾರೆ.

ರಾತ್ರಿ 9 ಗಂಟೆಯಿಂದ ರವಿ ಬಸ್ರೂರು ಸಾರಥ್ಯದಲ್ಲಿ ದಕ್ಷಿಣ ಭಾರತ ಖ್ಯಾತ ಚಲನಚಿತ್ರ ಗಾಯಕಿ ಮಂಗ್ಲಿ ಮತ್ತು ತಂಡದವರಿಂದ ಸಂಗೀತ ಸಂಭ್ರಮ ‘ಬಳ್ಕೂರು ಸಂಗೀತೋತ್ಸವ ಸಂಭ್ರಮ’ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!