spot_img
Monday, April 20, 2026
spot_img

ಕೊಳನಕೋಡು ಶ್ರೀ ಮಹಾಗಣಪತಿ ಉಮಾಮಹೇಶ್ವರಿ ಪಾರ್ವತಿ ದೇವಸ್ಥಾನ: ಜೀರ್ಣೋದ್ಧಾರದ ನೀಲ ನಕ್ಷೆ ಅನಾವರಣ

kundapura: ಕಂದಾವರ ಗ್ರಾಮದ ಕೊಳನಕೋಡು ಎಂಬಲ್ಲಿ ಇರುವ 11ನೇ ಶತಮಾನದ ದೇವಾಲಯವಾದ ಶ್ರೀ ಮಹಾಗಣಪತಿ ಉಮಾಮಹೇಶ್ವರಿ ಪಾರ್ವತಿ ದೇವಸ್ಥಾನದ ಜೀರ್ಣೋದ್ಧಾರದ ನೀಲ ನಕಾಶೆ ಅನಾವರಣ ಸಮಾರಂಭವು  ದೇವಸ್ಥಾನದ ಧರ್ಮದರ್ಶಿಯಾದ ಬಿ ಎಸ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಉಳ್ಳೂರು ಸ್ವಾಮಿ ಕಾರ್ತಿಕೇಯ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಬಿ ವೆಂಕಟರಮಣ ಉಡುಪ ನಮ್ಮ ತಲೆಮಾರಿನಲ್ಲಿ ಹಲವಾರು ದೇವಸ್ಥಾನಗಳು ಜೀರ್ಣೋದ್ಧಾರ ಗೊಂಡಿದ್ದು ಅದರಂತೆ ಈ ದೇವಸ್ಥಾನವು ಅತಿ ಶೀಘ್ರವಾಗಿ ನಿರ್ಮಾಣಗೊಳ್ಳಲಿದೆ ಎಂಬ ಅಭಿಪ್ರಾಯ ಪಟ್ಟರು.

ಸುಮಾರು 10 ಕೋಟಿ   ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ದೇವಾಲಯದ ನೀಲ ನಕ್ಷೆ ಯನ್ನು ಬೆಂಗಳೂರಿನ ಪವಿತ್ರ ಹೋಟೆಲಿನ ಮಾಲೀಕರಾದ ಬಿ ಎ ನರಸಿಂಹಮೂರ್ತಿ ಅನಾವರಣಗೊಳಿಸಿದರು.

ವಿದ್ವಾನ್ ಮಾಧವ ಅಡಿಗರು ಧಾರ್ಮಿಕ ಪ್ರವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಕೃಷ್ಣ ಕೃಪ ಕ್ಯಾಶ್ಯೂ ಇಂಡಸ್ಟ್ರಿನ ಮಾಲೀಕರಾದ ಜಯಪ್ರಕಾಶ್ ಶೆಟ್ಟಿ, ವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ  ಶ್ರೀಧರ್ ಉಡುಪ ‘ತಾಯಿಸನ್ನಿಧಿ’ ಕಾಡಿನಕೊಂಡದ ಯೋಗೀಶ್ ಪುರಾಣಿಕ , ಸಟ್ವಾಡಿ ಸುಂದರ್ ಶೆಟ್ಟಿ ಪ್ರಾವಿಜನ್  ಸ್ಟೋರ್ ಮಾಲಕರಾದ ವಿಜಯ್ ಶೆಟ್ಟಿ    ಸಟ್ವಾಡಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಉದಯ್ ಬಳ್ಕೂರ್,  ದೇವಸ್ಥಾನದ ಪ್ರಮುಖರಾದ ಜಯಂತಿ ರೈ,  ಕ್ಷೇತ್ರದ ಅರ್ಚಕರಾದ ಶಂಕರ್ ನಾರಾಯಣ ಉಡುಪ  ಉಪಸ್ಥಿತರಿದ್ದರು.

ಬಿಎಸ್ ಧನಂಜಯ್ ಸ್ವಾಗತಿಸಿ, ಮಣಿಕಂಠ ಶೆಟ್ಟಿ ನಿರ್ವಹಿಸಿ, ರವೀಂದ್ರ ದೇವಾಡಿಗ ವಂದಿಸಿದರು. ದಿನೇಶ್ ದೇವಾಡಿಗ ಮಹಾಲಿಂಗ ಮೊಗವೀರ್ ಕರುಣಾಕರ ದೇವಾಡಿಗ ಸಹಕರಿಸಿದರು

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!