spot_img
Monday, April 20, 2026
spot_img

ಮದರ್ ತೆರೆಸಾ ಪಿಯು ಕಾಲೇಜು, ಶಂಕರನಾರಾಯಣ: ವಾಣಿಜ್ಯ ವಿಭಾಗದ (EBACs/ EBAS) ಅತ್ಯಮೋಘ ಸಾಧನೆ: ಪ್ರವೇಶಾತಿ ಪ್ರಾರಂಭ

ಶಂಕರನಾರಾಯಣ: ಮದರ್ ತೆರೆಸಾ ಪಿಯು ಕಾಲೇಜು, ಶಂಕರನಾರಾಯಣವು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಅಂಕಗಳ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಸಮಾನ ಆದ್ಯತೆ ನೀಡುತ್ತಾ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರಾಗಿ ರೂಪಿಸುತ್ತಾ ಬರುತ್ತಿದೆ. ಹೊರಗಿನ ಹೋಲಿಕೆಗಳಿಗಿಂತ, ತನ್ನದೇ ಹಿಂದಿನ ಸಾಧನೆಗಳನ್ನು ಮೀರಿಸುವುದೇ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಹಾಗೂ ಪ್ರವೇಶಾತಿ ಸಮಯದಲ್ಲಿ ಅಂಕಗಳ ಮಿತಿ ಇಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದ್ದು, ಕಡಿಮೆ ಅಂಕ ಗಳಿಸಿ ಬಂದವರೂ ಕೂಡ ಇಲ್ಲಿ ಉನ್ನತ ಸಾಧನೆ ಮಾಡುವಂತಹ ವಾತಾವರಣವನ್ನು ಕಲ್ಪಿಸಲಾಗುತ್ತದೆ.

ಇಲ್ಲಿನ ವಾಣಿಜ್ಯ ವಿಭಾಗದಲ್ಲಿ EBACS ಹಾಗೂ EBAS ಸಂಯೋಜನೆಗಳು ಲಭ್ಯವಿದ್ದು, ವಿಭಾಗದ ಮುಖ್ಯಸ್ಥರು ಹಾಗೂ ಕಾಲೇಜಿನ ಉಪಪ್ರಾಂಶುಪಾಲರಾದ ಗೀತಾ ಇವರ ನೇತೃತ್ವದಲ್ಲಿ ನುರಿತ ಶಿಕ್ಷಕವೃಂದವನ್ನು ವಿಭಾಗವು ಹೊಂದಿಕೊಂಡಿದೆ. ಈ ಅನುಭವಿ ಉಪನ್ಯಾಸಕರ ಮಾರ್ಗದರ್ಶನದ ಮೂಲಕ ಸಂಸ್ಥೆಯು ವಿದ್ಯಾರ್ಥಿಗಳಲ್ಲಿನ ಸಾಮರ್ಥ್ಯವನ್ನು ಹೊರತೆಗೆದು, ಅವರನ್ನು ರಾಜ್ಯಮಟ್ಟದ ಸಾಧನೆ ಮಾಡುವ ದಿಕ್ಕಿನೆಡೆಗೆ ಪ್ರೇರೇಪಿಸುತ್ತಿದೆ.

ಈ ವರ್ಷದ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದ 65 ವಿದ್ಯಾರ್ಥಿಗಳಲ್ಲಿ 64 ಮಂದಿ ತಮ್ಮ ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಮೀರಿಸಿದ್ದು ವಿಶೇಷವಾಗಿದೆ. ಎಸ್‌ಎಸ್‌ಎಲ್‌ಸಿಯಲ್ಲಿ 46% ಪಡೆದ ವಿದ್ಯಾರ್ಥಿಗಳೂ ಪಿಯುಸಿಯಲ್ಲಿ 76% ಮಟ್ಟ ತಲುಪಿರುವುದು ಗಮನಾರ್ಹ.

ಒಟ್ಟು 36 ಮಂದಿ ಡಿಸ್ಟಿಂಕ್ಷನ್ (85% ಕ್ಕಿಂತ ಹೆಚ್ಚು) ಪಡೆದಿದ್ದು, ಉಳಿದ ಎಲ್ಲಾ ವಿದ್ಯಾರ್ಥಿಗಳು70% ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉನ್ನತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 14 ಮಂದಿ 95% ಕ್ಕಿಂತ ಹೆಚ್ಚು, 14 ಮಂದಿ 90-95%, 21 ಮಂದಿ 80-90% ಹಾಗೂ ಉಳಿದವರು 70-80% ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿನಿ ಅಮೂಲ್ಯಾ 595 ಅಂಕಗಳೊಂದಿಗೆ ರಾಜ್ಯದಲ್ಲಿ 6ನೇ, ಜಿಲ್ಲೆಗೆ 4ನೇ ಹಾಗೂ ತಾಲೂಕಿಗೆ 3ನೇ Rank ಗಳಿಸಿದ್ದು, ಪ್ರಗತಿ ಮತ್ತು ರಿಷಿತಾ ತಲಾ 591 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ Rank ಪಡೆದಿದ್ದಾರೆ. ಅಮೂಲ್ಯಾ ಮತ್ತು ಕ್ಷಮಾ 590 ಅಂಕಗಳೊಂದಿಗೆ ರಾಜ್ಯಕ್ಕೆ 11ನೇ Rank ಪಡೆದರೆ, ಅಭಿನಯಾ ಮತ್ತು ರಾಶಿ ತಲಾ 589 ಅಂಕಗಳೊಂದಿಗೆ ರಾಜ್ಯಕ್ಕೆ 12ನೇ Rank ಗಳಿಸಿದ್ದಾರೆ.

ಪಠ್ಯಕ್ರಮದ ಜೊತೆಗೆ ಸಿ‌ಎ, ಸಿ‌ಎಸ್, ಸಿ‌ಎಮ್‌ಎ ಫೌಂಡೇಶನ್ ತರಬೇತಿ ನೀಡಲಾಗುತ್ತಿದ್ದು, ಕಳೆದ ವರ್ಷ ಫೌಂಡೇಶನ್ ಪರೀಕ್ಷೆಯಲ್ಲಿ ಸಂಸ್ಥೆಯ 9 ವಿದ್ಯಾರ್ಥಿಗಳಲ್ಲಿ 7 ಮಂದಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿ ಉತ್ತಮ ಫಲಿತಾಂಶ ಸಾಧಿಸಿದ್ದಾರೆ. ಸಾಂಸ್ಕೃತಿಕ, ಕ್ರೀಡೆ ಹಾಗೂ ಅಂತರ್‌ಕಾಲೇಜು ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳ ಸಮಗ್ರ ವಿಕಸನಕ್ಕೂ ಉತ್ತೇಜನ ನೀಡಲಾಗುತ್ತಿದೆ.

ಕುಂದಾಪುರ ತಾಲೂಕಿನಲ್ಲಿ ಮಿತವಾದ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿ ಈ ಕಾಲೇಜು ಪೋಷಕರಲ್ಲಿ ವಿಶ್ವಾಸ ಗಳಿಸಿದೆ. ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಈ ಸಂಸ್ಥೆಯ ಬೋಧನಾ ವಿಧಾನ ಮತ್ತು ಮಾರ್ಗದರ್ಶನ ಪರಿಣಾಮಕಾರಿಯಾಗಿದೆ ಎಂಬ ಅಭಿಪ್ರಾಯವನ್ನು ಅನೇಕ ಪೋಷಕರು ವ್ಯಕ್ತಪಡಿಸುತ್ತಿದ್ದಾರೆ

ಇದೀಗ 2026-27ನೇ ಸಾಲಿನ ಪ್ರವೇಶ ಪ್ರಾರಂಭವಾಗಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾಲೇಜಿಗೆ ಭೇಟಿ ನೀಡಿ ಪ್ರವೇಶಾತಿ ಪಡೆಯಲು ಆಹ್ವಾನಿಸಲಾಗಿದೆ.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!