spot_img
Tuesday, April 21, 2026
spot_img

ಗೋಳಿಹೊಳೆಯಲ್ಲಿ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ 48 ದಿನಗಳ ಚಾತುರ್ಮಾಸ್ಯ ಮಹೋತ್ಸವಕ್ಕೆ ಸಿದ್ಧತೆ

ಬೈಂದೂರು: ಬೈಂದೂರು ಕ್ಷೇತ್ರದ ಗೋಳಿಹೊಳೆಯಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 48 ದಿನಗಳ ಚಾತುರ್ಮಾಸ್ಯ ವ್ರತಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜುಲೈ 28 ರಿಂದ ಆರಂಭವಾಗಲಿರುವ ಈ ಅನುಷ್ಠಾನವು ಬೈಂದೂರಿನ ಪಾಲಿಗೆ ಆಧ್ಯಾತ್ಮಿಕ ಕುಂಭಮೇಳದಂತಹ ಭವ್ಯ ಅನುಭವವನ್ನು ನೀಡಲಿದೆ.

ಮಹೋನ್ನತ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಗೋಳಿಹೊಳೆಯಲ್ಲಿ ನಡೆಯಿತು. ಸಚಿವರಾದ ಮಾಂಕಾಳ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸರ್ವ ಜನರ ಹಿತೈಷಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಲಾಯಿತು.

ಸಭೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜು ಪೂಜಾರಿ, ಕೆ.ಆರ್ ನಾಯ್ಕ್, ಬೈಂದೂರು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಶೇಖರ್ ಪೂಜಾರಿ, ಚಾತುರ್ಮಾಸ್ಯ ಸಂಚಾಲಕ ಶಿವರಾಜ್ ಪೂಜಾರಿ, ಅಶೋಕ್ ಪೂಜಾರಿ ಬೀಜಾಡಿ, ನರಸಿಂಹ ಪೂಜಾರಿ ಪಡುಕೋಣೆ, ಗಣೇಶ್ ಪೂಜಾರಿ ಕೆಂಚನೂರು, ಸಂತೋಷ್ ಪೂಜಾರಿ ಕರ್ಕುಂಜೆ, ಗೋವಿಂದ್ ಪೂಜಾರಿ, ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು, ಮತ್ತಿತರರು ಉಪಸ್ಥಿತರಿದ್ದರು.

೪೮ ದಿನಗಳ ಕಾಲ ಗೋಳಿಹೊಳೆಯ ಮಣ್ಣು ದೈವಿಕ ಕಂಪನದಿಂದ ಕೂಡಿರಲಿದೆ. ಇದು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಲ್ಲ, ಜಿಲ್ಲೆಯ ಸಮಸ್ತ ಜನರ ಒಳಿತಿಗಾಗಿ ನಡೆಯುತ್ತಿರುವ ಶಕ್ತಿ ಯಜ್ಞ. ಪ್ರತಿದಿನ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆಗಳು ನೆರವೇರಲಿವೆ. ಜಿಲ್ಲೆಯ ಕಲೆಗಳಾದ ಯಕ್ಷಗಾನ, ವೈವಿಧ್ಯಮಯ ಭಜನಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಸಭೆಗಳು ಮೇಳೈಸಲಿವೆ.

ಈ ಚಾತುರ್ಮಾಸ್ಯವು ಬೈಂದೂರು ಕ್ಷೇತ್ರದ ಏಳಿಗೆಯ ಪಥದಲ್ಲಿ ಒಂದು ಮೈಲಿಗಲ್ಲಾಗಲಿದೆ ಎಂದು ಬ್ರಹ್ಮಾಂನಂದ ಸರಸ್ವತಿ ಸ್ವಾಮೀಜಿಯವರು ಈ ಸಂದರ್ಭದಲ್ಲಿ ತಿಳಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!