spot_img
Saturday, April 11, 2026
spot_img

ವಂಡ್ಸೆ ಶಾಲೆಯ ಸಾಧನೆ ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಆರ್ಹ-ಕೃಷ್ಣಮೂರ್ತಿ ಮಂಜರು| ವಂಡ್ಸೆ ಶಾಲೆಯಲ್ಲಿ ರಾಜ್ಯದಲ್ಲಿ ಪ್ರಥಮ ಎ.ಐ ಐರೀಸ್ ರೋಬೊ ಟೀಚರ್ ಹಾಗೂ ಕಿಂಡರ್ ಗಾರ್ಟನ್ ಉದ್ಘಾಟನೆ

ಕುಂದಾಪುರ: ವಿಜ್ಞಾನ ತಂತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ತಿಳಿಸುವ, ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಂಡ್ಸೆ ಶಾಲೆ ವಿಶೇಷ ಪ್ರಯತ್ನ ಮಾಡಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ವಿಜ್ಞಾನದ ಸಾಧಕಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ವಂಡ್ಸೆ ಶಾಲೆಯ ಸಾಧನೆಗೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಬರುವಂತಾಗಲಿ ಎಂದು ಹೈದರಬಾದ್ ಉದ್ಯಮಿ, ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಹೇಳಿದರು.
ಅವರು ಶನಿವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಅನುಷ್ಟಾನಿಸಿದ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ‘ಐರಿಸ್’  ರೋಬೊ ಟೀಚರ್ ಉದ್ಘಾಟಿಸಿ ಮಾತನಾಡಿದರು.

ಇದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಸುದಿನ. ಸರಕಾರಿ ಶಾಲೆ ಈ ಮಟ್ಟಿಗೆ ಬೆಳೆಯುತ್ತಿರುವುದರ ಹಿಂದೆ ಎಲ್ಲರ ಸಹಕಾರವಿದೆ. ಇನ್ನೂ ಕೂಡಾ ಕಲಿಕೆಗೆ ಅನುಗುಣವಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಶ್ರಮಿಸುತ್ತೇನೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಶಾಲೆಗೆ ಬರಲಿ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲು ಇಲ್ಲಿ ಶಿಕ್ಷಕವೃಂದ ಸಿದ್ಧವಿದೆ. ಈಗ ಎ.ಐ ಶಿಕ್ಷಕಿಯನ್ನು ಸರಕಾರಿ ಶಾಲೆಯಲ್ಲಿ ಪ್ರಥಮವಾಗಿ ಪರಿಚಯ ಮಾಡಲಾಗುತ್ತಿದೆ. ವಿಜ್ಞಾನದ ಬೆರಗುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ರೈನ್ ಬೋ 7 ಶೈಕ್ಷಣಿಕ ವಿಷಯಗಳ ಮಾದರಿಗಳ ಪ್ರದರ್ಶನವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಜೇಶ ಕಾರಂತ ಉದ್ಘಾಟಿಸಿದರು. ನೂತನವಾಗಿ ನಿರ್ಮಿಸಲಾದ ಕಿಂಡರ್ ಗಾರ್ಟನ್ (ಬಾಲವನ)ವನ್ನು ಕೃಷ್ಣಮೂರ್ತಿ ಮಂಜರು ಉದ್ಢಾಟಿಸಿದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷೆ ಡಾ.ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ವಂಡಬಳ್ಳಿ ಜಯರಾಮ ಶೆಟ್ಟಿ, ಮೂಕಾಂಬಿಕಾ ಚಾರಿಟೆಬಲ್ ಟ್ರಸ್ಟ್ ಸದಸ್ಯರು, ಉದ್ಯಮಿಗಳಾದ ಕುಸುಮಾಕರ ಶೆಟ್ಟಿ ಅಡಿಕೆಕೊಡ್ಲು, ಶಿಕ್ಷಣ ಸಂಯೋಜಕರಾದ ವೆಂಕಪ್ಪ ಉಪ್ಪಾರ್, ಕರ್ಕುಂಜೆ ಸಿ.ಆರ್.ಪಿ ರವಿಚಂದ್ರ, ರಾಜ್ಯ ಸರಕಾರಿ ನೌಕರರ ಸಂಘದ ಪ್ರತಿನಿಧಿ ಪ್ರತಾಪಕುಮಾರ್ ಶೆಟ್ಟಿ, ಅರಿಫಾ ಅಬೂಬಕರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಂಡ್ಸೆ ಶಾಲೆಯಲ್ಲಿ ಹಿರಿಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಶಂಕರ್ ಅವರನ್ನು ಸನ್ಮಾನಿಸಿ ಬಿಳ್ಕೋಡಲಾಯಿತು. `ಐರಿಸ್’ ಎ.ಐ ರೋಬೊ ಅಳವಡಿಸಲು ಆರ್ಥಿಕ ನೆರವು ನೀಡಿದವರನ್ನು ಗೌರವಿಸಲಾಯಿತು.

ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, 112 ವರ್ಷಗಳನ್ನು ಪೂರೈಸಿರುವ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು 2016 ರಿಂದ ಬದಲಾದ ಕಾಲಘಟ್ಟಕ್ಕನುಗುಣವಾಗಿ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಸಾರಥ್ಯದಲ್ಲಿ ಎಸ್.ಡಿ.ಎಂ.ಸಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯಲ್ಲಿ ಒಂದು ಪ್ರತಿಷ್ಠಿತ ಶಾಲೆಯಾಗಿ ಮೂಡಿ ಬಂದಿದೆ. 2015ರಲ್ಲಿ 89 ಇದ್ದ ಮಕ್ಕಳ ಸಂಖ್ಯೆ ಇಂದು 334 ಕ್ಕೆ ಬಂದು ತಲುಪಿದೆ. ಸಾಕಷ್ಟು ಮೂಲಭೂತ ಸೌಕರ್ಯಗಳೊಂದಿಗೆ ತಂತ್ರಜ್ಞಾನ ಆಧಾರಿತ ಗುಣಮಟ್ಟದ ಶಿಕ್ಷಣವನ್ನು ಉತ್ತಮ ಕಂಪ್ಯೂಟರ್ ಲ್ಯಾಬ್, ಹೆಚ್ಚಿನ ತರಗತಿಯಲ್ಲಿ ಪೆÇ್ರಜೆಕ್ಟರ್, ಸ್ಮಾರ್ಟ್ ಇಂಟರ್ಯ್ಯಾಕ್ಟೀವ್ ಬೋರ್ಡ್ ಮೂಲಕ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಲವು ಬದಲಾವಣೆಗಳನ್ನು ತರುತ್ತಿದ್ದು ನಮ್ಮ ವಿದ್ಯಾರ್ಥಿಗಳನ್ನು ಅದಕ್ಕೆ ಅಣಿಗೊಳಿಸುವುದು ನಮ್ಮ ಜವಾಬ್ದಾರಿಯಾಗಿದ್ದು, ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸರಕಾರಿ ಶಾಲೆಯಲ್ಲಿ ಪರಿಚಯಿಸಲಾಗುತ್ತಿದೆ. ಇದಕ್ಕೆ ರೂ 3.50 ಲಕ್ಷ ಹಣ ತಗಲುತ್ತಿದ್ದು ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಮೂಲಕ ಒಟ್ಟುಗೂಡಿಸಲಾಗಿದೆ ಎಂದರು.

ಪ್ರಭಾರ ಮುಖ್ಯೋಪಾಧ್ಯಾಯರಾದ ಸೋಮರಾಯ ಜನ್ನು ಸ್ವಾಗತಿಸಿದರು. ಶಿಕ್ಷಕರಾದ ಸುಧಾಕರ ಸನ್ಮಾನಿತರ ಪರಿಚಯ ನೀಡಿದರು.  ಶಿಕ್ಷಕಿ ವಾಣಿಶ್ರೀ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕ ಸದಾಶಿವ ಕೆಂಚನೂರು ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಜು ಎನ್ ಹಾಗೂ ಶಿಕ್ಷಕಿ ಉಷಾ ಐ.ಎಸ್ ಕಾರ್ಯಕ್ರಮ ನಿರ್ವಹಿಸಿದರು.

ಕಿಂಡರ್ ಗಾರ್ಟನ್ ಉದ್ಘಾಟನೆ:
ವಂಡ್ಸೆ ಶಾಲೆಗೆ ಬಹು ಮಹತ್ವಕಾಂಕ್ಷೆಯ ಬಾಲವನದ ಬೇಡಿಕೆ ಈಡೇರಿದೆ. ಪೂರ್ವಪ್ರಾಥಮಿಕ ತರಗತಿಗೆ ಪೂರಕವಾಗಿ ಬಾಲವನ ನಿರ್ಮಿಸಬೇಕು ಎನ್ನುವ ಚಿಂತನೆ ಟ್ರಸ್ಟಿಗಿತ್ತು. ಅದು ಈ ವರ್ಷ ಈಡೇರಿದೆ. ಸುಂದರವಾದ ಬಾಲವನ ನಿರ್ಮಾಣಗೊಂಡಿದೆ. ಪುಟಾಣಿಗಳಿಗೆ ಅತ್ಯಾಕರ್ಷಣಿಯವಾದ ಕಿಂಡರ್ ಗಾರ್ಟನ್ ಶಾಲೆಯ ಮೆರುಗು ಹೆಚ್ಚಿಸಿದೆ. ಕಿಂಡರ್ ಗಾರ್ಟನ್ ಲೋಕಾರ್ಪಣೆ ಆಗುತ್ತಿದ್ದಂತೆ ಶಾಲಾ ವಿದ್ಯಾರ್ಥಿಗಳು ಸಂಭ್ರಮದಿಂದ ಕುಣಿದಾಡಿದರು.

ರೈನ್ ಬೋ ಎಜ್ಯುಕೇಶನಲ್ ಫೆಸ್ಟ್:
ಕಳೆದ ಮೂರು ವರ್ಷದಿಂದ ಸಯನ್ಸ್ ಫೆಸ್ಟ್ ನೆಡಸಲಾಗುತ್ತಿತ್ತು. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಥಮವಾಗಿ ವಿಜ್ಞಾನ ಮೇಳ ನಡೆಸಿದ ಖ್ಯಾತಿ ವಂಡ್ಸೆ ಶಾಲೆಗೆ ಇತ್ತು. ಈ ಬಾರಿ ವಿಶಿಷ್ಟವಾಗಿ ಏಳು ವಿಷಯಗಳ ಕುರಿತು ವೈವಿಧ್ಯಮಯವಾಗಿ ನಡೆಸಲಾಯಿತು. ವಿಜ್ಞಾನ, ಕಲೆ, ಚಿತ್ರಕಲೆ, ಕರಕುಶಲ, ಗಣಿತ ಸೇರಿದಂತೆ ಪಠ್ಯ ಹಾಗೂ ಪಠ್ಯೇತರಕ್ಕೆ ಸಂಬಂಧಿಸಿದ ವಿಷಯಗಳ ಮಕ್ಕಳು ತಯಾರಿಸಿ, ಸಿದ್ಧಪಡಿಸಿದ ಮಾದರಿಗಳನ್ನು ಪ್ರದರ್ಶನ ಮಾಡಿದರು. ಶಿಕ್ಷಕರ ಸಹಕಾರ ಮಾರ್ಗದರ್ಶನದಿಂದ ರೈನ್ ಬೋ ಎಜ್ಯುಕೇಶನ್ ಫೇಸ್ಟ್ ಅದ್ಬುತ ಯಶಸ್ಸು ಕಂಡಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!