spot_img
Saturday, April 11, 2026
spot_img

ವಾರಾಹಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ: ವಲ್ಲರಿ-2026: ಎಸ್.ಡಿ.ಎಂ.ಸಿ.ಅಧ್ಯಕ್ಷರಿಗೆ ಸಮ್ಮಾನ; 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಸಿದ್ದಾಪುರ, ಎ. 10: ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಖೇದಕರ ವಿಷಯವಾಗಿದೆ. ಇದರ ಬಗ್ಗೆ ಸರಕಾರ ಹಾಗೂ ಪೋಷಕರು, ಹಳೆ ವಿದ್ಯಾರ್ಥಿಗಳು ಗಂಭೀರಾಗಿ ಚಿಂತನೆ ಮಾಡಬೇಕು. ಪ್ರಸ್ತುತ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿ ಶಿಕ್ಷಣ ಕಲಿಸುತ್ತಿದ್ದಾರೆ. ಪೋಷಕರು ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳ್ಳಿಸಿ ಎಂದು ವಾರಾಹಿ ವಿದ್ಯಾವಿನಾಯಕ ಶಿಕ್ಷಣ ಪ್ರೋತ್ಸಾಹ ಸಮಿತಿ ಅಧ್ಯಕ್ಷ ಬಿ. ರತ್ನಾಕರ ಶೆಟ್ಟಿ ಮಧುರಬಾಳು ಹೇಳಿದರು.
ಅವರು ಉಳ್ಳೂರು-74 ಗ್ರಾಮದ ವಾರಾಹಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸರಸ್ವತಿ ಪೂಜೆ, ಎಸ್.ಡಿ.ಎಂ.ಸಿ. ಅಧ್ಯಕ್ಷರಿಗೆ ಅಭಿನಂದನ ಕಾರ್ಯಕ್ರಮ ಹಾಗೂ ಗೌರವ ಶಿಕ್ಷಕಿಯರಿಗೆ ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ವಲ್ಲರಿ-2026 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉಳ್ಳೂರು-ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಳ್ಳೂರು-74 ಗ್ರಾಮದಲ್ಲಿ ವಾರಾಹಿ ಶಾಲೆಯು ಅತ್ಯುತ್ತಮ ಸರಕಾರಿ ಶಾಲೆಯಾಗಿದೆ. ಇಲ್ಲಿಯ ಎಸ್.ಡಿ.ಎಂ.ಸಿ., ಪೋಷಕರು, ಸ್ಥಳೀಯರು ಈ ಶಾಲೆಯ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಈ ಶಾಲೆಯ ಬೆನ್ನೆಲುಬಾಗಿ ವಿದ್ಯಾವಿನಾಯಕ ಶಿಕ್ಷಣ ಪ್ರೋತ್ಸಾಹ ಸಮಿತಿ ನಿಂತಿದೆ. ಸರಕಾರಿ ಶಾಲೆಗಳನ್ನು ಉಳಿಸುವುದರ ಬಗ್ಗೆ ಎಲ್ಲ್ಲರೂ ಒಗ್ಗಟ್ಟಿನ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ರತ್ನಾಕರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಅತಿಥಿಗಳಾಗಿ ಉಳ್ಳೂರು-ಮಚ್ಚಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಭಾಕರ ಆಚಾರ್ಯ ಅಂಸಾಡಿ, ವಿದ್ಯಾವಿನಾಯಕ ಶಿಕ್ಷಣ ಪ್ರೋತ್ಸಾಹ ಸಮಿತಿ ಕಾರ್ಯದರ್ಶಿ ಸುರೇಶ ಶೆಟ್ಟಿ ಕಾಸ್ಗದ್ದೆ, ಸದಸ್ಯರಾದ ಸತ್ಯನಾರಾಯಣ ಶೆಟ್ಟಿ ಸುರ್ಗೇಡಿ, ಅಶೋಕ ಶೆಟ್ಟಿ ನೂಜಿನಬೈಲು, ಜಿ.ಪಂ. ಮಾಜಿ ಸದಸ್ಯ ರೋಹಿತ್ ಶೆಟ್ಟಿ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಸೇವಾ ಪ್ರತಿನಿಧಿ ನವರತ್ನ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಅಶ್ವಿನಿ ಕುಲಾಲ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ರತ್ನಾಕರ ಆಚಾರ್ಯ ಮತ್ತು ಶಶಿಕಲಾ ದಂಪತಿಯನ್ನು ಸಮ್ಮಾನಿಸಿ, ಗೌರವಿಸಿದರು. ಗೌರವ ಶಿಕ್ಷಕಿಯರಾದ ಪ್ರಜ್ಞಾ ಶೆಟ್ಟಿ ಮತ್ತು ವಿನಯ ಅವರನ್ನು ಗೌರವಿಸಿದರು. 5ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ದೂರದ ಕೊಪ್ಪಳದಿಂದ ಶಾಲೆಗೆ ಬಂದು ಶಾಲೆಯ ಗೋಡೆಗಳಿಗೆ ಪೂರ್ತಿಯಾಗಿ ವರ್ಲಿ ಆರ್ಟ್ನ್ ನ್ನು ಉಚಿತವಾಗಿ ಚಿತ್ರಿಸಿದ ಕಳಕೇಶ ಪಂಥರ್ ಅವರನ್ನು ಅಭಿನಂದಿಸಿದರು. ವಲ್ಲರಿ-2026 ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಮುಖ್ಯ ಶಿಕ್ಷಕ ಉಮೇಶ ಪೂಜಾರಿ ಸ್ವಾಗತಿಸಿ, ವರದಿ ವಾಚಿಸಿದರು. ಸಹ ಶಿಕ್ಷಕ ಸಂತೋಷ್ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!