spot_img
Friday, April 10, 2026
spot_img

ಎಕ್ಸಲೆಂಟ್ ಪಿಯು ಕಾಲೇಜು: ದ್ವಿತೀಯ ಪಿಯುಸಿಯಲ್ಲಿ ರಾಜ್ಯ ಮಟ್ಟದ 9 Rank ನೊಂದಿಗೆ ಮಹತ್ತರ ಸಾಧನೆ

ಕುಂದಾಪುರ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸುಣ್ಣಾರಿಯ ಎಕ್ಸಲೆಂಟ್ ವಿದ್ಯಾಸಂಸ್ಥೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಡುವ ಸಾಧನೆ ಮಾಡಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಮನೋಭಿಲಾಷೆಯನ್ನು ದೇಶದಾದ್ಯಂತ ಪಸರಿಸುವ ಸಲುವಾಗಿ ಗ್ರಾಮಾಂತರ ಭಾಗದ ಸುಣ್ಣಾರಿಯಲ್ಲಿ 2012ರಲ್ಲಿ ಕೇವಲ 40 ವಿದ್ಯಾರ್ಥಿಗಳಿಂದ ಆರಂಭವಾದ ವಿದ್ಯಾಸಂಸ್ಥೆ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಉತ್ತುಂಗಕ್ಕೇರಿ ತನ್ನದೇ ಚಾಪನ್ನು ಮೂಡಿಸಿದ ರಾಜ್ಯದ ಅಗ್ರಗಣ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಎಂ.ಮಹೇಶ ಹೆಗ್ಡೆ ಹೇಳಿದರು.

ಅವರು ಸುಣ್ಣಾರಿಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನಮ್ಮ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಾನ್ಯ 600ಕ್ಕೆ 597, ಅನುಪ್ ಶೇಖರ್ ನಾಯ್ಕ 600ಕ್ಕೆ 595 ಅಂಕಗಳೊಂದಿಗೆ ರಾಜ್ಯದಲ್ಲಿಯೇ ಅತ್ಯುತ್ತಮ Rank ನ್ನು ಗಳಿಸಿ ಎಕ್ಸಲೆಂಟ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಬಾಲಗೌಡ ಬಸವರಾಜ್ ಮಂಗೋಜಿ (592), ಆಯುಷ್ ಶೆಣೈ(592), ಕಿಶನ್‍ ಕುಮಾರ್ ಗಿರೀಶ್ ಹೆಗ್ಡೆ (592), ಸನ್ಸಿತಾ.ಎಸ್.ಎನ್ (592), ಸಾನ್ವಿಶೆಟಿ ್ಟ(591), ತನ್ವಿ ಶೆಟ್ಟಿ (590), ತ್ರಿಶಾ(590) ಒಟ್ಟು 9 Rank ಗಳೊಂದಿಗೆ ರಾಜ್ಯದಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಯನ್ನು ಮಾಡಿದ್ದಾರೆ ಎಂದರು.

ಒಟ್ಟು 314 ವಿದ್ಯಾರ್ಥಿಗಳಲ್ಲಿ 232 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 81 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಕೇವಲ 1 ವಿದ್ಯಾರ್ಥಿಯು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಷ್ಟೇ, ಅಲ್ಲದೆ ಎಸ್.ಎಸ್ ಎಲ್ ಸಿ ಯ ಅಂಕಕ್ಕಿಂತ ದ್ವಿತೀಯ ಪಿಯುಸಿ ಅಂಕದಲ್ಲಿ ಶೇಕಡ 20ಕ್ಕಿಂತ ಹೆಚ್ಚು ಅಂಕ ಗಳಿಸಿದ ಒಟ್ಟು 252 ವಿದ್ಯಾರ್ಥಿಗಳು ಬಂದಿರುವುದು ನಮ್ಮ ಎಕ್ಸಲೆಂಟ್ ಅದ್ಭುತ ಶೈಕ್ಷಣಿಕ ಸಾಧನೆಯಾಗಿದೆ. ಈ ಸಾಧನೆಗೈಯಲು ಹಗಲು ರಾತ್ರಿ ಎನ್ನದೆ ಅವಿರತವಾಗಿ ಶ್ರಮಿಸಿದ ನಮ್ಮೆಲ್ಲ ಪ್ರೀತಿಯ ವಿದ್ಯಾರ್ಥಿಗಳಿಗೆ ಹಾಗೂ ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗದ ಎಲ್ಲಾ ಉಪನ್ಯಾಸಕ ವೃಂದದವರ ನಿರಂತರ ಬೋಧನೆ, ಇವತ್ತಿನ ಕಾಲಘಟ್ಟಕ ಅನುಗುಣವಾದ ಮಾಹಿತಿ ಸಂಗ್ರಹ ಮಾಡಿ ವಿದ್ಯಾರ್ಥಿಗಳ ಅಭಿಲಾಷೆಗೆ ತಕ್ಕಂತ ಜ್ಞಾನ ನೀಡಿದ ನಮ್ಮ ಎಕ್ಸಲೆಂಟ್ ಕುಟುಂಬದ ಉಪನ್ಯಾಸಕರಿಗೂ ಹಾಗೂ ಕಲಿಕೆಗೆ ಬೇಕಾದ ಸಂಪೂರ್ಣ ಸಹಕಾರವನ್ನು ನೀಡಿದ ಆಡಳಿತ ಮಂಡಳಿಗೂ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರ ಪರವಾಗಿ, ಈ ಸುಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಇದರ ಜೊತೆಗೆ ಜೆಇಇ ಯಲ್ಲಿಯೂ ಕೂಡ 98 ಪರ್ಸೆಂಟೈಲ್ ನಿಂದ 90 ಪರ್ಸೆಂಟೈಲ್ ನ್ನು 21 ವಿದ್ಯಾರ್ಥಿಗಳು ಪಡೆದಿರುವುದು, ವಾಣಿಜ್ಯ ವಿಭಾಗದ ಅS ಫೌಂಡೇಶನ್ ಬರೆದ ಒಟ್ಟು 24 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಒಂದು ಶ್ರೇಷ್ಠ ಸಾಧನೆಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ, ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!