spot_img
Friday, April 3, 2026
spot_img

ರೈಲು ವಿಳಂಬ: ಪಂಚಗಂಗಾ ಎಕ್ಸ್ ಪ್ರೆಸ್ ರೈಲನ್ನು ಕಾರಣವಾಗಿಸಿ ಹೇಳಿಕೆಗೆ ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿ ತೀವ್ರ ಖಂಡನೆ

ಕುಂದಾಪುರ: ಬೆಂಗಳೂರು ಮಂಗಳೂರು ರೈಲು ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಬಹುತೇಕ ಬಾರಿ ಸರಿಯಾದ ಸಮಯಕ್ಕೆ ಬಂದರೂ ಕೂಡ ಮಂಗಳೂರಿನ ಮತ್ತೊಂದು ನಿಲ್ದಾಣ ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಬರುವಾಗ ವಿಳಂಭಕ್ಕೆ ಕೇರಳ ಪರ ಲಾಭಿಗಳು ಬೆಂಗಳೂರು ಕಾರವಾರ ಜನರ ಜೀವನಾಡಿ ಪಂಚಗಂಗಾ ಎಕ್ಸ್ ಪ್ರೆಸ್ ರೈಲನ್ನು ಕಾರಣವಾಗಿಸಿ ಹೇಳಿಕೆ ಕೊಡುತ್ತಿರುವುದನ್ನು ಕುಂದಾಪುರ ರೈಲ್ವೇ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿದೆ.

ಮಂಗಳೂರು ಬೆಂಗಳೂರು ರೈಲಿನ ಕಾರಣದಿಂದಲೇ ಪಂಚಗಂಗಾ ಎಕ್ಸ್ ಪ್ರೆಸ್ ಅತ್ಯಂತ ಕ್ಲಿಷ್ಟಕರ ಸಮಯವಾದ ಸಂಜೆ 6.50 ಕ್ಕೆ ಬೆಂಗಳೂರಿನಿಂದ ಹೊರಡುತಿದ್ದು ಇಲ್ಲವಾದಲ್ಲಿ ಸಂಜೆ 7.30ಕ್ಕೆ ಹೊರಡಬಹುದಾಗಿತ್ತು ಅಷ್ಟು ಮಾತ್ರವಲ್ಲದೇ ಬೆಳಿಗ್ಗೆಯೂ ಬೆಂಗಳೂರಿಗೆ ಆರು ಗಂಟೆಗೆಲ್ಲ ತಲುಪ ಬಹುದಾಗಿದ್ದ ಪಂಚಗಂಗಾ ರೈಲಿಗೆ ಮಂಗಳೂರು ಬೆಂಗಳೂರು ರೈಲಿನ ಕಾರಣದಿಂದ ಏಳು ಗಂಟೆ ಸುಮಾರಿಗೆ ತಲುಪ ಬೇಕಾಗ ಸಮಯಪಟ್ಟಿ ಸಿಕ್ಕಿದ್ದು ಅಷ್ಟಾಗಿಯೂ ಮತ್ತೂ ಮಂಗಳೂರು ರೈಲುಗಳ ವಿಳಂಭಕ್ಕೆ ಪಂಚಗಂಗಾ ರೈಲನ್ನೇ ಕಾರಣವಾಗಿಸುವುದು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ ಎಂದು ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ತಿಳಿಸಿದೆ.
ಬಹುತೇಕ ದಿನ ಮಂಗಳೂರು ಜಂಕ್ಷನ್ ನಿಲ್ಕಾಣಕ್ಕೆ ಬೆಳಿಗ್ಗೆ 6.50 ರ ಬದಲು 7 ಗಂಟೆ ಸುಮಾರಿಗೆ ಬರುವ ರೈಲಿನ ಹತ್ತು ನಿಮಿಷ ವಿಳಂಭವನ್ನು ದೂರುವುದು ಹಾಸ್ಯಾಸ್ಪದವಾಗಿದ್ದು, ಈ ಹಿಂದೆ ಸುಬ್ರಮಣ್ಯ ನಿಲ್ದಾಣಕ್ಕೆ ಐದು ಹತ್ತಕ್ಕೆ ಬರುತಿದ್ದ ಬೆಂಗಳೂರು ಮಂಗಳೂರು ರೈಲನ್ನು ಅನಗತ್ಯ ಒತ್ತಡ ಹೇರಿ ನಾಲ್ಕೂ ಐವತ್ತಕ್ಕೆ ಬರುವಂತೆ ಇಲಾಖೆಯಿಂದ ಸಮಯಪಟ್ಚಿ ಬದಲಾಯಿಸಿ ಈಗ ರೈಲು ಹತ್ತು ನಿಮಿಷ ವಿಳಂಭವಾಗುತ್ತದೆ ಎಂಬುದು ಸರಿಯಲ್ಲ ಎಂದು ಸಮಿತಿ ತಿಳಿಸಿದೆ.

ಬೆಂಗಳೂರು ಮಂಗಳೂರು ರೈಲುಗಳ ಸಮಯಪಟ್ಚಿ ಬೇಕಾದರೆ ಬದಲಾಯಿಸುವ ಅವಕಾಶಗಳನ್ನು ಗಮನಿಸ ಬೇಕೇ ಹೊರತೂ ಬೆಂಗಳೂರು ಉಡುಪಿ ಕಾರವಾರದ ಜೀವನಾಡಿ ಪಂಚಗಂಗಾ ರೈಲಿನ ಕ್ರಾಸಿಂಗ್ ಬಗ್ಗೆ ಮಾತಾಡುವುದು ಸರಿಯಲ್ಲ ಎಂದು ಸಮಿತಿಯ ಅದ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!