spot_img
Thursday, October 1, 2026
spot_img

ಅ.2: ಬೆಂಗಳೂರಿನಲ್ಲಿ ಪೌರಾಣಿಕ ಯಕ್ಷಹಬ್ಬ ‘ಮಯಾ ಬಜಾರ್, ಮಾನಿಷಾದ’

ಬೆಂಗಳೂರು: ಬೆಂಗಳೂರಿನ ಸಮಸ್ತ ಯಕ್ಷ ಸಂಘಟಕರ ಆಯೋಜನೆಯಲ್ಲಿ ಯಶಸ್ವಿ ಯಕ್ಷಗಾನ ಸಂಘಟಕ ಜಯರಾಮ ಶೆಟ್ಟಿ ಹೊಸೂರು ಇವರ ನೆರವಿಗಾಗಿ ಅಕ್ಟೋಬರ್ 2 ಶುಕ್ರವಾರ ರಾತ್ರಿ 10 ಗಂಟೆಗೆ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷ ಹಬ್ಬ ನಡೆಯಲಿದೆ.
ವಿಶೇಷವಾಗಿ ಪ್ರಸನ್ನ ಭಟ್ ಬಾಳ್ಕಲ್ ಭಾಗವತಿಕೆಯಲ್ಲಿ ಹಾಸ್ಯಗಾರರಿಂದ ‘ಮಾಯಾ ಬಜಾರ್’  ಎನ್ನುವ ಪೌರಾಣಿಕ ಪ್ರಸಂಗದ ಪ್ರದರ್ಶನ ನಡೆಯಲಿದೆ. ಬಳಿಕ ರಾಘವೇಂದ್ರ ಆಚಾರ್ಯ ಜನ್ಸಾಲೆ ಭಾಗವತಿಕೆಯಲ್ಲಿ ಕಲಾಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಮಾನಿಷಾದ’ ಪ್ರಸಂಗದ ಪ್ರದರ್ಶನ ನಡೆಯಲಿದೆ.
ಇದೊಂದು ರಾಜಧಾನಿಯ ಯಕ್ಷಗಾನ ಆಸಕ್ತ ಹಬ್ಬವಾಗಿ ಪರಿಣಮಿಸಲಿದೆ. ಹಾಸ್ಯ ಹಾಗೂ ಅದ್ಭುತ ಪೌರಾಣಿಕ ಪ್ರಸಂಗ ಮಾನಿಷಾದ ವಿಶಿಷ್ಟ ಸಂಯೋಜನೆಯಲ್ಲಿ ಪ್ರದರ್ಶನಗೊಳ್ಳಲಿದೆ.
ವಿಶೇಷವಾಗಿ ಇದು ಯಕ್ಷ ಸಂಘಟಕ ಜಯರಾಮ ಶೆಟ್ಟಿ ಹೊಸೂರು ಅವರ ನೆರವಿಗಾಗಿ ಆಯೋಜಿಸಿದ ಕಾರ್ಯಕ್ರಮವಾಗಿದೆ. ಜಯರಾಮ ಶೆಟ್ಟಿಯವರು ಹಲವಾರು ಯಕ್ಷಗಾನಗಳನ್ನು ಸಂಘಟಿಸಿದ್ದಾರೆ. ಬಯಲಾಟ ಮೇಳಗಳ ನೂರಾರು ಪ್ರತಿಭಾನ್ವಿತ ಕಲಾವಿದರನ್ನು ಸನ್ಮಾನಿಸಲು ಪ್ರೇರಕರಾಗಿದ್ದಾರೆ. ಸ್ವತಃ ಸನ್ಮಾನ ಕೂಡಾ ಮಾಡಿದ್ದಾರೆ. ಹಲವಾರು ಕಲಾವಿದರ ನೆರವಿಗೂ ಧಾವಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಅಪಘಾತದ ಬಳಿಕ ಅವರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿದ್ದು ನೆರವಿನ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಯಕ್ಷಸಂಘಟಕರು ಒಟ್ಟಾಗಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ. ಇದಕ್ಕೆ ಕಲಾಭಿಮಾನಿಗಳ ಸಂಪೂರ್ಣ ಸಹಕಾರದ ಅಗತ್ಯವಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!