spot_img
Friday, April 3, 2026
spot_img

‘ವಸುಪುರದ ದೇವ ಶ್ರೀ ಮಹಾಲಿಂಗೇಶ್ವರ’ ಧ್ವನಿ ಸುರುಳಿ ಬಿಡುಗಡೆ

ಬಸ್ರೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಸ್ರೂರು ಇಲ್ಲಿನ ವಾರ್ಷಿಕ ರಥೋತ್ಸವದ ಅಂಗವಾಗಿ ಎಪ್ರಿಲ್ 2 ಗುರುವಾರದಂದು, ಎಬಿ ಮೂವೀಸ್ ಬಸ್ರೂರು ಹಾಗೂ ಶ್ರೀ ಅಘೋರೇಶ್ವರ ಮೆಲೋಡೀಸ್ ಗ್ರೂಪ್ ಸಂಗೀತ ತರಬೇತಿ ಕೇಂದ್ರ ಬಸ್ರೂರು ಮಾರ್ಗೋಳಿ ಇವರ ಸಹಕಾರದೊಂದಿಗೆ ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸುಮಧುರ ಭಕ್ತಿಗೀತೆ ಧ್ವನಿ ಸುರುಳಿ ವಸುಪುರದ ದೇವ ಶ್ರೀ ಮಹಾಲಿಂಗೇಶ್ವರ ರಥಬೀದಿ ಫ್ರೆಂಡ್ಸ್ ಬಸ್ರೂರು ಇದರ ವೇದಿಕೆಯಲ್ಲಿ ಬಿಡುಗಡೆ ಕಾರ್ಯಕ್ರಮ ಜರಗಿತು.

ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ ಮಾತನಾಡಿ, ಸುಮಾರು ವರ್ಷಗಳ ಹಿಂದೆ ಮಹಾಲಿಂಗೇಶ್ವರ ದೇವಸ್ಥಾನದ ಧ್ವನಿ ಸುರುಳಿ ಬಿಡುಗಡೆ ಮಾಡಿದ್ದು, ಇದೀಗ ರವಿ ಬನ್ನಾಡಿ ಹಾಗೂ ಮುಂಬಾರು ದಿನಕರ ಶೆಟ್ಟಿ ಇವರ ಚೊಚ್ಚಲ ಸಾಹಿತ್ಯದಲ್ಲಿ ಮೂಡಿಬಂದಿರುವ, ಹಾಗೂ ಈ ಎಲ್ಲಾ ಹಾಡಿಗೆ ಸಾರಥ್ಯವನ್ನು ವಹಿಸಿರುವ ಚಂದ್ರಶೇಖರ ಬಸ್ರೂರು ಸೇರಿದಂತೆ ಹಲವು ಗಾಯಕರೊಂದಿಗೆ ಬಸ್ರೂರಿನ ಗಾಯಕರು ಹಾಡಿದ್ದು ಮತ್ತು ಅದಕ್ಕೆ ಸ್ಪೂರ್ತಿ ತುಂಬಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ತಾಲೂಕು ಅಧ್ಯಕ್ಷರಾದ ರಾಜೇಂದ್ರ ಕುಮಾರ ಮಾತನಾಡಿ, ಭಕ್ತಿಯ ಸಂಗೀತ ಮೂಲಕ ಜನರನ್ನು ಭಕ್ತಿಮಾರ್ಗದತ್ತ ಸೆಳೆಯಲು ಸಹಕಾರಿ. ಸ್ಥಳೀಯವಾಗಿ ಇಂಥಹ ಪ್ರತಿಭೆಗಳು ಹುಟ್ಟಿಕೊಳ್ಳಬೇಕು, ಈ ಭಕ್ತಿ ಸಾಹಿತ್ಯಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ, ಗೀತೆ ರಚನೆಕಾರ ಮುಂಬಾರು ದಿನಕರ ಶೆಟ್ಟಿ, ನಟ ನಿರ್ಮಾಪಕ ರಾಹುಲ್ ಹೆಗ್ಡೆ, ರಥಬೀದಿ ಫ್ರೆಂಡ್ಸ್ ಬಸ್ರೂರು ಇದರ ಗೌರವಾಧ್ಯಕ್ಷರಾದ ಹರೀಶ್ ಪಡಿಯಾರ್, ರಥ ಬೀದಿ ಫ್ರೆಂಡ್ಸ್ ಬಸ್ರೂರು ಇದರ ಅಧ್ಯಕ್ಷರಾದ ಶ್ರೀಕಾಂತ ಕೆರೆಕಟ್ಟೆ, ಚಂದ್ರಶೇಖರ್ ಬಸ್ರೂರು, ತ್ಯಾಗರಾಜ್ ಕೆ ಬಳ್ಕೂರು, ಗಣೇಶ್ ಪೂಜಾರಿ ಬಸ್ರೂರು, ಪ್ರಜ್ಞಾ ಬಳ್ಕೂರು ಮುಂತಾದವರು ಉಪಸ್ಥಿತರಿದ್ದರು.
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಿಗೀತೆ ಎಬಿ ಮೂವೀಸ್ ಬಸ್ರೂರು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ಶಿಕ್ಷಕಿ ಸಾರಿಕಾ ಅಶೋಕ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಅಘೋರೇಶ್ವರ ಮೆಲೋಡೀಸ್ ಗ್ರೂಪ್ ಸಂಗೀತ ತರಬೇತಿ ಕೇಂದ್ರ ಬಸ್ರೂರು ಮಾರ್ಗೋಳಿ ಸಂಸ್ಥೆಯ ಎಲ್ಲಾ ಗಾಯಕರು ಪಾಲ್ಗೊಂಡಿದ್ದರು.

ಈ ಧ್ವನಿ ಸುರುಳಿಯಲ್ಲಿ ಒಟ್ಟು ಆರು ಹಾಡುಗಳಿದ್ದು ಒಂದು ಹಾಡನ್ನು ಸಾಹಿತ್ಯ ಕಳಸ ಪ್ರಶಸ್ತಿ ಪುರಸ್ಕೃತ ಮುಂಬಾರು ದಿನಕರ ಶೆಟ್ಟಿ ರಚಿಸಿದರೆ, ಉಳಿದ ಐದು ಹಾಡನ್ನು ಗಾನರತ್ನ ಪ್ರಶಸ್ತಿ ಪುರಸ್ಕೃತ ರವಿ ಬನ್ನಾಡಿ ರಚಿಸಿದ್ದಾರೆ. ಧ್ವನಿ ಸುರುಳಿ ಬಿಡುಗಡೆ ಸಂದರ್ಭದಲ್ಲಿ ಸಾಹಿತ್ಯ ಒದಗಿಸಿದವರನ್ನು ಸನ್ಮಾನಿಸಲಾಯಿತು. ಧ್ವನಿ ಸುರುಳಿಯಲ್ಲಿ ರವಿ ಬನ್ನಾಡಿ, ಚಂದ್ರಶೇಖರ ಬಸ್ರೂರು, ಪ್ರಜ್ಞಾ ಬಳ್ಕೂರು, ಗಣೇಶ ಪೂಜಾರಿ ಬಸ್ರೂರು, ತ್ಯಾಗರಾಜ್ ಕೆ ಬಳ್ಕೂರು ಹಾಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!