spot_img
Tuesday, May 19, 2026
spot_img

ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದ ಬ್ರಹ್ಮರಥೋತ್ಸವ ಸಂಪನ್ನ

ಕುಂದಾಪುರ: ಕರಾವಳಿ ಜಿಲ್ಲೆಯ ಪ್ರಸಿದ್ಧ ಶಕ್ತಿಕ್ಷೇತ್ರವಾದ ಬಗ್ವಾಡಿಯ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಎ.2ರಂದು ಚಿತ್ರ ಪೂರ್ಣಿಮೆಯಂದು ವೈಭವದ ಬ್ರಹ್ಮರಥೋತ್ಸವ ನಡೆಯಿತು. ಬೆಳಿಗ್ಗೆ ಏಕಕಾಲದಲ್ಲಿ ಒಂದು ಸಾವಿರ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಬಗ್ವಾಡಿ ಹೋಬಳಿ ವ್ಯಾಪ್ತಿಯಿಂದ ಆಗಮಿಸಿದ ಭಕ್ತಾದಿಗಳು ಕುಲದೇವಿಗೆ ಹಣ್ಣುಕಾಯಿ ಸಮರ್ಪಣೆ ಮಾಡಿದರು.

ಪ್ರಧಾನ ತಂತ್ರಿಗಳಾದ ಪಾದೇಮಠ ವೇ.ಬ್ರ. ದೇವರಾಜ ಅಡಿಗ ಹಾಗೂ ದೇಗುಲದ ಪ್ರಧಾನ ಅರ್ಚಕರಾದ ಗಿರೀಶ ಭಟ್ ಬಗ್ವಾಡಿ ಇವರ ನೇತೃತ್ವದಲ್ಲಿ ಬೆಳಗ್ಗೆ ಪುಣ್ಯಾಹ, ಕಲಶ ಸ್ಥಾಪನೆ, ಪ್ರಧಾನಾಧಿವಾಸ ಹೋಮ, ಕಲಶಾಭಿಷೇಕ, ರಥಶುದ್ಧಿ ಉತ್ಸವ ಬಲಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.

ಪೂರ್ವಾಹ್ನ ರಥಾರೋಹಣದ ಬಳಿಕ ಅನ್ನಸಂತರ್ಪಣೆ ನಡೆಯಿತು. ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಮೊಗವೀರ ಮಹಾಜನ ಸೇವಾ ಸಂಘ ಮುಂಬಯಿ ಪ್ರಧಾನ ಕಚೇರಿಯ ಗೌರವಾಧ್ಯಕ್ಷರಾದ ಸುರೇಶ ಕಾಂಚನ್, ಅಧ್ಯಕ್ಷರಾದ ಸಂತೋಷ್ ಪುತ್ರನ್, ಕಾರ್ಯದರ್ಶಿ ಗಣೇಶ ಮೆಂಡನ್, ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಅಧ್ಯಕ್ಷ ಉದಯಕುಮಾರ್ ಹಟ್ಟಿಯಂಗಡಿ, ಕಾರ್ಯದರ್ಶಿ ಪ್ರಭಾಕರ ಮೊಗವೀರ ಸೇನಾಪುರ, ಉಪಾಧ್ಯಕ್ಷರಾದ ಜಗದೀಶ ಮೊಗವೀರ ಮಾರ್ಕೋಡು, ಸದಾನಂದ ಬಳ್ಕೂರು, ಖಜಾಂಚಿ ಸತೀಶ ಎಂ. ನಾಯ್ಕ ಡಾ| ಉಮೇಶ ಪುತ್ರನ್, ಎಂ. ಎಂ. ಸುವರ್ಣ, ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ರವೀಶ ಎಸ್. ಕೊರವಡಿ, ಮಹಾ ಅನ್ನಸಂತರ್ಪಣೆ ಸೇವಾಕರ್ತರಾದ ಶ್ರೀಮತಿ ಅಶ್ವಿನಿ ಮತ್ತು ಚಂದ್ರಶೇಖರ ಶೆಟ್ಟಿ ಹಾಗೂ ಅಭಿಜಿತ್ ಸಿ ಶೆಟ್ಟಿ ಪಡುಮನೆ ಬಗ್ವಾಡಿ, ಹಾಗೂ ಮೊಗವೀರ ಸ್ತ್ರೀಶಕ್ತಿ ಸಂಘಟನೆ ಅಧ್ಯಕ್ಷರು, ಪದಾಧಿಕಾರಿಗಳು, ಮೊಗವೀರ ಯುವ ಸಂಘಟನೆಯ ಹೆಮ್ಮಾಡಿ, ಕುಂದಾಪುರ, ಬೈಂದೂರು, ಶಂಕರನಾರಾಯಣ, ಕೋಟೇಶ್ವರ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಗುರಿಕಾರರು, ಗಣ್ಯರು ಉಪಸ್ಥಿತರಿದ್ದರು.
ಸಂಜೆ ಸಾವಿರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ಸಂಭ್ರಮದ ಬ್ರಹ್ಮ ರಥೋತ್ಸವ ನಡೆಯಿತು. ಬಳಿಕ ಅಷ್ಟಾವಧಾನ ಸೇವೆ, ನಿತ್ಯಪೂಜೆ, ಭೂತಬಲಿ, ಶಯನೋತ್ಸವ ನಡೆಯಿತು. ಮಧ್ಯಾಹ್ನ ಸಾಂಸ್ಕೃತಿಕ ವೈಭವ, ಶ್ರೀ ಮಹಿಷಾಸುರಮರ್ದಿನಿ ರಥೋತ್ಸವ ಬನಿ ಕಾಂಬ ಕಲಾ ಉತ್ಸವ-2026 ವೈವಿಧ್ಯಮಯ ಕಾರ್ಯಕ್ರಮ, ಬಳಿಕ ಶ್ರೀಮಹಿಷಾಸುರಮರ್ದಿನಿ ಸಾಂಸ್ಕೃತಿಕ ಬಳಗ ಬಗ್ವಾಡಿ ಇವರಿಂದ ಬಗ್ವಾಡಿ ಉತ್ಸವ ಸಾಂಸ್ಕೃತಿಕ ವೈಭವ ನಡೆಯಿತು.

ವರುಣಾಕೃಪೆ:
ಸಂಜೆ ಆಕಾಶದಲ್ಲಿ ಕಾರ್ಮೋಡ ಕವಿಯತೊಡಗಿದ್ದು ರಥೋತ್ಸವಕ್ಕೆ ಮಳೆ ಬರಬಹುದೆಂಬ ಆತಂಕ ಎದುರಾಗಿತ್ತು. ಆದರೆ ರಥೋತ್ಸವ ಮುಗಿಯುವ ತನಕ ಒಂದೂ ಹನಿ ಮಳೆ ಬಾರದೇ ಇದ್ದುದು ವಿಶೇಷವಾಗಿತ್ತು. ದೇವಿಯ ಮಹಿಮೆಗೆ ಭಕ್ತಾದಿಗಳು ಉದ್ಘೋಷ ಮೊಳಗಿಸಿದರು. ರಥೋತ್ಸವ ಮುಗಿದ ಬಳಿಕ ವರ್ಷಾಧಾರೆಯ ಸಿಂಚನವಾಯಿತು.

ನಿರ್ವಿಘ್ನವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ:
ರಥೋತ್ಸವದ ಪ್ರಯುಕ್ತ ರಾತ್ರಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳ ನಿಗಧಿಪಡಿಸಲಾಗಿತ್ತು. ದೇವಸ್ಥಾನದ ಎದುರು ತೆರೆದ ಬಯಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಲಾಗಿತ್ತು. ಮಳೆಯ ಆತಂಕ ಇದ್ದ ಕಾರಣ ಸಭಾಂಗಣದ ಒಳಗಡೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸ್ಥಳಾಂತರ ಮಾಡುವುದಾ? ಎನ್ನುವ ಗೊಂದಲ ಏರ್ಪಟ್ಟಾಗ ಗೊಂದಲಕ್ಕೊಳಗಾದ ಸಂಘಟಕರು ದೇವಿಯ ಮುಂದೆ ಪ್ರಾರ್ಥನೆ ಮಾಡಿದರು. ಆಗ ಶುಭ ಸೂಚಕವಾಗಿ ಪ್ರಸಾದ ದೊರಕಿತು. ಪೂರ್ವ ನಿಶ್ಚಯಿಸಿದಂತೆ ಬಯಲು ರಂಗಮಂಟಪದಲ್ಲಿ, ದೇವಿಗೆ ಎದುರಾಗಿಯೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲಾಯಿತು. ಅರ್ಧ ಘಂಟೆಗೂ ಮಿಕ್ಕಿ ಸುರಿದ ಮಳೆ ಒಮ್ಮೆಗೆ ನಿಂತು ಆಕಾಶ ಶುಭ್ರವಾಯಿತು. ಚಂದ್ರ, ತಾರೆಗಳು ಮಿನುಗಿದವು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!