spot_img
Thursday, October 1, 2026
spot_img

ಬಳ್ಕೂರು-ಕಂಡ್ಲೂರು ಹಳೆ ಸೇತುವೆ ಉಳಿಸಿಕೊಂಡು ಹೊಸ ಸೇತುವೆ ನಿರ್ಮಿಸುವಂತೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ

ಕುಂದಾಪುರ: ಬಳ್ಕೂರು-ಕಂಡ್ಲೂರು ಸೇತುವೆ ಶಿಥಿಲಗೊಂಡಿದ್ದು ಹೊಸ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು, ಹಳೆ ಸೇತುವೆಯನ್ನು ಉಳಿಸಿಕೊಂಡೆ ಹೊಸ ಸೇತುವೆ ನಿರ್ಮಾಣ ಮಾಡಬೇಕು, ಈ ಬಗ್ಗೆ ಹೊಸ ಡಿಪಿ‌ಆರ್ ತಯಾರಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿ ರಾಜ್ಯದ ಚುನಾಯಿತ ಪ್ರತಿನಿಧಿಗಳು, ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹಳೆ ಸೇತುವೆಯನ್ನು ಒಡೆದು ಹೊಸ ಸೇತುವೆ ಮಾಡಲು ಮುಂದಾದರೆ ರಾಜ್ಯ ಹೆದ್ದರಿ ಸ್ತಗಿತವಾಗುತ್ತದೆ. ದಿನ 20ಸಾವಿರಕ್ಕೂ ಹೆಚ್ಚು ವಾಹನ ಓಡಾಡುವ ಮಾರ್ಗ ಇದಾಗಿದ್ದು ಯಾವುದೇ ಪರ್ಯಾಯ ರಸ್ತೆಗಳು ಇಲ್ಲದೆ ಇರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಕಾರ್ಮಿಕರಿಗೆ ಹೇಳಲಾರದಷ್ಟು ಸಮಸ್ಯೆಯಾಗುತ್ತದೆ. ಹಾಗಾಗಿ ಹಳೆ ಸೇತುವೆಯ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣವಾಗಬೇಕು. ಹೊಸ ಸೇತುವೆ ನಿರ್ಮಾಣದ ತನಕ ಹಳೆ ಸೇತುವೆ ತಗೆಯಬಾರದು. ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಬಾರದು ಎಂದು ಮನವಿ ಮಾಡಲಾಯಿತು.

ಪಿಡಬ್ಲ್ಯೂಡಿ ಸಚಿವರಾದ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅಶ್ರಾದ್ , ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ,ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಗೋಪಾಲ ಪೂಜಾರಿ, ಬಿ.ಎಂ ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ, ಸಹಾಯಕ ಆಯುಕ್ತರಾದ ರಶ್ಮಿ ಎಸ್.ಆರ್., ದಿನೇಶ ಹೆಗ್ಡೆ ಮೊಳಹಳ್ಳಿ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್, ಕುಂದಾಪುರ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಹೋರಾಟ ಸಮಿತಿಯ ಪ್ರಮುಖರಾದ ಸದಾನಂದ ಬಳ್ಕೂರು, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಕಾಮರಾಜ ಶೆಟ್ಟಿ ಹಳ್ನಾಡು, ಪ್ರಕಾಶ್ಚಂದ್ರ ಶೆಟ್ಟಿ ಜೋರ್‍ಮಕ್ಕಿ, ಮುಂಬಾರು ದಿನಕರ ಶೆಟ್ಟಿ, ಸಾಮ್ರಾಟ್ ಶೆಟ್ಟಿ, ದಯಾನಂದ ಮೇಸ್ಟ್ರು, ವಿಜಯ ಪುತ್ರನ್, ಜ್ಯೋತಿ ಪುತ್ರನ್ ಕಿರಣ್ ಹೆಗ್ಡೆ ಅಂಪಾರು, ಮುನಾಫ್ ಕಂಡ್ಲೂರು, ನಿಶ್ಚಿತ್ ಶೆಟ್ಟಿ ಬಳ್ಕೂರು, ತ್ಯಾಗರಾಜ ಬಳ್ಕೂರು, ಸಂತೋಷ್ ಶೆಟ್ಟಿ ಬಲಾಡಿ, ಮಿಥುನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!