spot_img
Tuesday, March 31, 2026
spot_img

ಆನಗಳ್ಳಿಯಲ್ಲಿ ಎಪ್ರಿಲ್ 2-5ರ ತನಕ ‘ನಮ್ಮೂರ್ ಹಬ್ಬ’

ಕುಂದಾಪುರ: ಗೆಳೆಯರ ಬಳಗ ರಿ., ಆನಗಳ್ಳಿ, ಟೀಂ ನಮ್ಮೂರ್ ಹಬ್ಬ 2026 ಆನಗಳ್ಳಿ ನೇತೃತ್ವದಲ್ಲಿ ನಮ್ಮೂರ್ ಹಬ್ಬ 2026 ಎಪ್ರಿಲ್ 2ರಿಂದ ಎಪ್ರಿಲ್ 5ರ ತನಕ ಆನಗಳ್ಳಿಯಲ್ಲಿ ನಡೆಯಲಿದೆ. ಪ್ರತಿಭಾ ಹಬ್ಬ, ನಗೆ ಹಬ್ಬ, ಸಂಗೀತ ಹಬ್ಬ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿವೆ ಎಂದು ನಾಗರಾಜ ಹೇಳಿದರು.

ಅವರು ಕುಂದಾಪುರ ಪ್ರೆಸ್‌ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಎ.2 ಗುರುವಾರ ಸಂಜೆ 4.30ಕ್ಕೆ ಆನಗಳ್ಳಿ ದತ್ತಾಶ್ರಮದಿಂದ ಗೆಳೆಯರ ಬಳಗ ಕಲಾ ಮಂದಿರದ ತನಕ ಕರಾವಳಿ ಸಾಂಸ್ಕೃತಿಕ ಪ್ರತಿಬಿಂಬದ ಪುರಮೆರವಣಿಗೆ ನಡೆಯಲಿದೆ. ಎ.3 ಶುಕ್ರವಾರ ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ, ಸಂಜೆ 7ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ವಹಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರಾವಳಿ ಮಣ್ಣಿನ ಮಗ ಪುರಸ್ಕಾರವನ್ನು ಕೀರ್ತಿಶೇಷ ದಿ.ಅಪ್ಪಣ್ಣ ಹೆಗ್ಡೆ ಅವರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಗುವುದು. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪ್ರತಿಭಾ ಹಬ್ಬದಲ್ಲಿ ಎಂ.ಐ.ಟಿ ಮೂಡ್ಲಕಟ್ಟೆ, ಬಿ.ಬಿ.ಹೆಗ್ಡೆ ಕಾಲೇಜು, ಜನತಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಎ.4ರಂದು ಸಂಜೆ 6 ಗಂಟೆಗೆ ಗೆಳೆಯರ ಬಳಗದ 39ನೇ ವರ್ಷದ ವಾರ್ಷಿಕೋತ್ಸವ ನಡೆಯಲಿದೆ. ಸಂಜೆ 6 ಗಂಟೆಯಿಂದ ಸ್ಥಳೀಯ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ, 7 ಗಂಟೆಗೆ ಸಭಾ ಕಾರ್ಯಕ್ರಮ, ಸನ್ಮಾನ ನೆರವೇರಲಿದೆ. ಪ್ರಸಿದ್ಧ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಇವರಿಂದ ಸಂಗೀತ ಹಬ್ಬ ನೆರವೇರಲಿದೆ.ಖ್ಯಾತ ಗಾಯಕರಾದ ಸಂತೋಷ್ ದೇವ್, ದಿಯಾ ಹೆಗ್ಡೆ, ಸುರಕ್ಷಾ ದಾಸ್, ರಜತ್ ಮಯ್ಯ, ಸಿರುಂಡೆ ರಘು, ಸಂಕೇತ, ಪ್ರವೀಣ್ ಜೈನ್ ಮೊದಲಾದವರು ಭಾಗವಹಿಸಲಿದ್ದಾರೆ. ಆರ್.ಜೆ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಸಚಿವರಾದ ಮಂಕಾಳ ಎಸ್ ವೈದ್ಯ ಉದ್ಘಾಟಿಸಲಿದ್ದಾರೆ.ಗೆಳೆಯರ ಬಳಗದ ಅಧ್ಯಕ್ಷ ಶರತ್ ಕಾಂಚನ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಅವರಿಗೆ ಕರಾವಳಿ ಮಣ್ಣಿನ ಮಗ ಬಿರುದು ಪ್ರದಾನ ಮಾಡಲಾಗುವುದು ಎಂದರು.

ಎ.5 ಆದಿತ್ಯವಾರ ಸಂಜೆ 6 ಗಂಟೆಗೆ ಸ್ಥಳೀಯ ಪ್ರತಿಭೆಗಳಿಂದ ಪ್ರತಿಭಾ ಪ್ರದರ್ಶನ, ಸಂಜೆ 7ರಿಂದ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ನೆಡೆಯಲಿದೆ. ಕರುನಾಡ ಟ್ಯಾಲೆಂಟ್ ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಗಜಪುರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ.ಡಾ.ಚೆನ್ನಕೇಶವ ಭಟ್ ಉದ್ಘಾಟಿಸಲಿದ್ದಾರೆ ಎಂದರು.

ಪ್ರತಿವರ್ಷ ಗೆಳೆಯರ ಬಳಗದ ವತಿಯಿಂದ ಆನಗಳ್ಳಿ ಹಬ್ಬ ಎನ್ನುವ ಕಾರ್ಯಕ್ರಮ ನಡೆಸುತ್ತಿದ್ದು ಈ ವರ್ಷ ವಿಶೇಷವಾಗಿ ನಾಲ್ಕು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ಮನೋರಂಜನಾ ಆಟೋಟಗಳು, ವಿವಿಧ ಮಳಿಗೆಗಳು ಇರಲಿವೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಶರತ್ ಆನಗಳ್ಳಿ, ಪ್ರಶಾಂತ್, ಸುಮಿತ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!