spot_img
Monday, March 30, 2026
spot_img

ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಲ್ಯಾಪ್‌ಟಾಪ್ ಕೊಡುಗೆ

ಕುಂದಾಪುರ: ದೃಷ್ಟಿದೋಷವಿರುವ ವಿದ್ಯಾರ್ಥಿಗೆ ನೇತ್ರ ತಜ್ಞರ ಸಲಹೆ ಮೇರೆಗೆ ಲ್ಯಾಪ್‌ಟಾಪ್ ಕೊಡುಗೆಯನ್ನು ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ನೀಡಲಾಯಿತು.
ಕೋಟೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಸದಸ್ಯರಾದ ಪರಿಶಿಷ್ಟ ಪಂಗಡದ ಕುಸುಮ ಎಂಬುವವರ ಮಗ ಸಾತ್ವಿಕ್ ಮೂರನೇ ತರಗತಿಯಲ್ಲಿ ಓದುತ್ತಿದ್ದು, ದೃಷ್ಟಿ ದೋಷ ಹೊಂದಿದ್ದನು. ಉಡುಪಿಯ ಪ್ರಸಾದ್ ನೇತ್ರಾಲಯ ವೈದ್ಯರ ಸಲಹೆ ಮೇರೆಗೆ ಕಲಿಕೆಗೆ ಲ್ಯಾಪ್‌ಟಾಪ್ ಅಗತ್ಯತೆಯನ್ನು ಹೇಳಿದ್ದರು.
ಇದನ್ನು ಮನಗಂಡ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಸಾತ್ವಿಕ್‌ಗೆ ಲ್ಯಾಪ್‌ಟಾಪ್‌ನ್ನು ಹಸ್ತಾಂತರಿಸಿದೆ.
ಸಂಘದ ಅಧ್ಯಕ್ಷರಾದ ಕೆದೂರು ಸದಾನಂದ ಶೆಟ್ಟಿ ಲ್ಯಾಪ್‌ಟಾಪ್ ವಿದ್ಯಾರ್ಥಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಗೋಪಾಲ ಪೂಜಾರಿ, ನಿರ್ದೇಶಕರಾದ ಶರತ್ ಕುಮಾರ್ ಹೆಗ್ಡೆ ಶಾನಾಡಿ, ಎಂ. ಮೋಹನದಾಸ ಶೆಟ್ಟಿ, ನವೀನ್ ಕುಮಾರ್ ಹೆಗ್ಡೆ, ಅಶೋಕ ಪೂಜಾರಿ ಬೀಜಾಡಿ, ಭರತ್ ಕುಮಾರ್ ಶೆಟ್ಟಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಐತಾಳ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!