spot_img
Tuesday, July 14, 2026
spot_img

ಮೇಲ್ ಹೊಸೂರು: ಯಕ್ಷಗಾನ ಕಲಾವಿದರಾದ ನರಸಿಂಹ ಚಿಟ್ಟಾಣಿ ಹಾಗೂ ರವಿ ಕಾಡೂರು ಅವರಿಗೆ ಸನ್ಮಾನ

ಕುಂದಾಪುರ: ಮೇಲ್ ಹೊಸೂರು ಗೋತೆ ಸಣ್ಣಹೊಸಿಮನೆ ಗುಲಾಬಿ ದಿ.ನರಸಿಂಹ ಶೆಟ್ಟಿ ಅವರ ನೂತನ ಗೃಹ ನಂದಗೋಕುಲ ಪ್ರವೇಶೋತ್ಸವದ ಅಂಗವಾಗಿ ನಡೆದ ಸಿಗಂದೂರು ಮೇಳದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಸಿಗಂಧೂರು ಮೇಳದ ಹಿರಿಯ ಕಲಾವಿದರಾದ ನರಸಿಂಹ ಚಿಟ್ಟಾಣಿ ಹಾಗೂ ಹಿಮ್ಮೇಳ ಚಂಡೆ ವಾದಕರಾದ ರವಿ ಕಾಡೂರು ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಶೆಟ್ಟಿ, ಮುಂಬೈ ಉದ್ಯಮಿಗಳಾದ ಸುರೇಶ್ ಶೆಟ್ಟಿ ಕಲ್ಗದ್ದೆ, ಸಮಾಜ ಸೇವಕ ಬೆಂಕಿ ಮಣಿ ಸಂತು ಅರೆಹೊಳೆ, ಬೆಂಗಳೂರು ಉದ್ಯಮಿ ಭಾಸ್ಕರ್ ಶೆಟ್ಟಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ಭಾಸ್ಕರ ಶೆಟ್ಟಿ, ಸೀತರಾಮ ಶೆಟ್ಟಿ, ಸತೀಶ್ ಶೆಟ್ಟಿ, ಸೇವಾರ್ಥಿಗಳಾದ ಗುಲಾಬಿ ಶೆಟ್ಟಿ, ಮಕ್ಕಳು, ಕುಟುಂಬಿಕರು, ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಪ್ರವೀಣ್ ಶೆಟ್ಟಿ ಮಕ್ಕಿಮನೆ ಕಾರ್ಯಕ್ರಮ ನಿರ್ವಹಿಸಿದರು.

ಯಕ್ಷ ಪ್ರೇಮಿ ಜಯರಾಮ್ ಶೆಟ್ಟಿ ನೇತೃತ್ವದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು. ೨೦೧೨ ಇಸವಿಯಿಂದ ಜಯರಾಮ ಶೆಟ್ಟಿಯವರು ಇಲ್ಲಯ ತನಕ ಬಯಲಾಟ ಮೇಳಗಳ ಪ್ರತಿಭಾನ್ವಿತ ೮೦ಕ್ಕೂ ಹೆಚ್ಚು ಕಲಾವಿದರನ್ನು ಸನ್ಮಾನಿಸಿದ್ದಾರೆ.

ಬಳಿಕ ಸಿಗಂದೂರು ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು. ವಿಶೇಷವಾಗಿ ಅತಿಥಿ ಕಲಾವಿದರಾಗಿ ವಿಜೇಂದ್ರ ನಾಯ್ಕ ಮದ್ದೂರು ಮಹಿಷಾಸುರ ಪಾತ್ರದಲ್ಲಿ ರಂಜಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!