spot_img
Saturday, April 11, 2026
spot_img

ಸ.ಹಿ.ಪ್ರಾ.ಶಾಲೆ ಉಳ್ಳೂರು-74:ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೋಡುಗೆ

ಉಳ್ಳೂರು-74: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಳೂರು-೭೪ ಶಾಲೆಯಿಂದ ಹೆಚ್ಚುವರಿ ಶಿಕ್ಷಕರಾಗಿ ವರ್ಗಾವಣೆಗೊಂಡಿರುವ ಸುಂದರ ನಾಯ್ಕ, ಮಮತಾ ಹಾಗೂ ನಿಶಾ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಬೀಳ್ಕೊಡುಗೆಗೊಂಡ ಶಿಕ್ಷಕರಿಗೆ ಶಾಲಾ ಪರವಾಗಿ ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿರುವ ಗಣೇಶ ಪೂಜಾರಿ ವಹಿಸಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿರುವ ಪ್ರಸಾದ್ ಶೆಟ್ಟಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಗ್ರಾ.ಪಂ. ಸದಸ್ಯರಾಗಿರುವ ರಾಜೇಶ ಹೆಬ್ಬಾರ್, ಗ್ರಾ. ಪಂ. ಸದಸ್ಯರಾಗಿರುವ ಸುಧಾಕರ ಶೆಟ್ಟಿ , ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿರುವ ರತ್ನಾಕರ ಶೆಟ್ಟಿ, ಹಿರಿಯರು ಹಾಗೂ ಶಿಕ್ಷಣ ಪ್ರೇಮಿಯಾಗಿರುವ ಗಣೇಶ್ ಭಟ್, ಶಾಲಾ ಮುಖ್ಯ ಶಿಕ್ಷಕರಾದ ಕರುಣಾಕರ ಹೆಗ್ಡೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೀಳ್ಕೊಡುಗೆಗೊಂಡ ಶಿಕ್ಷಕರು ಶಾಲೆಗೆ ಒಂದು ಟಿವಿಯನ್ನ ಹಸ್ತಾಂತರಿಸಿದರು. ಸಹ ಶಿಕ್ಷಕರಾದ ಪ್ರಕಾಶ್ ಅವರು ವರ್ಗಾವಣೆಗೊಂಡ ಶಿಕ್ಷಕರ ಬಗ್ಗೆ ಅನಿಸಿಕೆ ಹೇಳಿಕೊಂಡರು. ಮುಖ್ಯ ಶಿಕ್ಷಕರಾದ ಕರುಣಾಕರ ಹೆಗ್ಡೆ ಇವರು ಸ್ವಾಗತಿಸಿ, ಶಿಕ್ಷಕರಾದ ಶ್ರೀಕಾಂತ್ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಅನ್ವಿತಾ ಮತ್ತು ಸಾನ್ವಿಕ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!