spot_img
Saturday, April 11, 2026
spot_img

ಮಾ.12ಕ್ಕೆ ಉಪ್ಪೂರು ಪಿಳ್ಕಳ ಗರಡಿ ನಾಗಬನದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ

ಉಡುಪಿ ತಾಲೂಕು ಉಪ್ಪೂರು ಗ್ರಾಮದ ಪಿಳ್ಕಳ ಗರಡಿಯ ಶ್ರೀ ನಾಗಬನದಲ್ಲಿ ಶ್ರೀಮತಿ ಮತ್ತು ಗೋಪಿ ರಾಮ ಪೂಜಾರಿ ಹಾಗೂ ಕುಟುಂಬಸ್ಥರ ಸೇವಾರ್ಥವಾಗಿ ಚತುಃಪವಿತ್ರ ನಾಗಮಂಡಲೋತ್ಸವ ಸೇವೆ ಮಾರ್ಚ್ 12 ಗುರುವಾರ ನಡೆಯಲಿದೆ.
ಮಾ.9ರಂದು ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಾ.10ರಂದು ಬೆಳಿಗ್ಗೆ ಗಣಹೋಮ,ಉಗ್ರಾಣ ಮುಹೂರ್ತ,ಪವಮಾನ ಹೋಮ, ಕೂಷ್ಮಾಂಡ ಹೋಮ, ತಿಲಹೋಮ, ಬ್ರಾಹ್ಮಣ ಆರಾಧನೆ, ವಟು ಅರಾಧನೆ, ಮಧ್ಯಾಹ್ನ 3 ಗಂಟೆಗೆ ಹೊರೆಕಾಣಿಕೆ ಸಮರ್ಪಣೆ ಶ್ರೀಭಗವತಿ ದುರ್ಗಾಪರಮಶ್ವರಿ ದೇವಸ್ಥಾನ ಪುತ್ತೂರಿನಿಂದ ಹೊರಟು ಪಿಳ್ಕಳ ಗರಡಿ ತಲುಪಲಿದೆ. ಸಂಜೆ ದುರ್ಗಾ ನಮಸ್ಕಾರ ಪೂಜೆ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ ನಡೆಯಲಿದೆ.
ಅಂದು ಸಂಜೆ 7 ಗಂಟೆಯಿದ ಗೋಳಿಗರಡಿ ಮೇಳದವರಿಂದ ಯಕ್ಷಗಾನ ಬಯಲಾಟ ‘ಶ್ರೀ ಕ್ಷೇತ್ರ ಗೋಳಿಗರಡಿ ಮಹಾತ್ಮೆ’ ಪ್ರದರ್ಶನಗೊಳ್ಳಲಿದೆ.
ಮಾ.11ರಂದು ಬೆಳಿಗ್ಗೆ ಗಣಹೋಮ, 48 ಕಲಶ ಪ್ರತಿಷ್ಠಾ ಪೂರ್ವಕ ಪ್ರಧಾನ ಹೋಮ, ಸರ್ಪತ್ರಯ ಮಂತ್ರ ಹೋಮ, ಪಂಚಾಮೃತ ಪೂರ್ವಕ ಕಲಶಾಭಿಷೇಕ, ವೇದ ಪಾರಾಯಣ ಹಾಗೂ ಮಹಾಪೂಜೆ, ಸಂಜೆ ನಾಗಮಂಡಲ ವೇದಿಕೆಯಲ್ಲಿ ವಾಸ್ತು, ಶ್ರೀ ಲಕ್ಷ್ಮಿ ಸತ್ಯನಾರಾಯಣ ಪೂಜೆ, ದಂಪತಿ ಪೂಜೆ ನಡೆಯಲಿದೆ.
ಅಂದು ಸಂಜೆ 6.30ಕ್ಕೆ ವಿಧೂಷಿ ಮೇಧಾ ತಂತ್ರಿ ಮತ್ತು ಲಿಷಾ ಪೂಜಾರಿ ಮುಂಬಯಿ ಇವರಿಂದ ‘ನೃತ್ಯ ರೂಪಕ’, 7.30ಕ್ಕೆ ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಕಲಾ ಸಂಗಮ ಕಲಾವಿದರಿಂದ ತುಳು ನಾಟಕ ‘ಶಿವದೂತ ಗುಳಿಗೆ’ ಪ್ರದರ್ಶನಗೊಳ್ಳಲಿದೆ.
ಮಾ.12ರಂದು ಗಣಹೋಮ, ಆಶ್ಲೇಷಾಬಲಿದಾನ, ಆಚಾರ್ಯ ಪೂಜೆ, ಮಹಾಪೂಜೆ, ನಾಗಸಂದರ್ಶನ, ಪಲ್ಲಪೂಜೆ, ಬ್ರಾಹ್ಮಣಾರಾಧಾನೆ, ಮಹಾ ಅನ್ನಸಂತರ್ಪಣೆ, ಸಂಜೆ 5ಗಂಟೆಗೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರ ಆಗಮನ, ಪಾದಪೂಜೆ, ಆಶೀರ್ವಚನ, ಸಂಜೆ 6.30ಕ್ಕೆ ಹಾಲಿಟ್ಟು ಸೇವೆ, 7.30ರಿಂದ ನಾಗಮಂಡಲ ಪೂಜೆ ಆರಂಭ, ರಾತ್ರಿ 10.30ಕ್ಕೆ ಮಂಡಲ ಪ್ರಸಾದ ವಿತರಣೆ ನಡೆಯಲಿದೆ.
ಅಂದು ದುರ್ಗಾಭಜನಾ ಮಂಡಳಿ ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದಗಳೊಂದಿಗೆ ಉಪ್ಪೂರು ಪದ್ಮನಾಭ ಐತಾಳರ ಆಚಾರ್ಯತ್ವದಲ್ಲಿ ಸುರೇಶ ಮಧ್ಯಸ್ಥ ಕುಟುಂಬಸ್ಥರ ಸಹಭಾಗಿತ್ವದಲ್ಲಿ ಚತುಃಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ನಾಗಪಾತ್ರಿಗಳಾಗಿ ಕಲ್ಲಂಗಳ ಬಿ.ಎನ್.ರಾಮಚಂದ್ರ ಕುಂಜಿತ್ತಾಯರ ಮಾರ್ಗದರ್ಶನದಲ್ಲಿ, ಕೃಷ್ಣಪ್ರಸಾದ ವೈದ್ಯ ಮತ್ತು ಬಳಗ ಮುದ್ದೂರು, ನಾಗಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ ಮತ್ತು ನಟರಾಜ ವೈದ್ಯರ ಸಹಕರಿಸಲಿದ್ದಾರೆ.
ಚತುಃಪವಿತ್ರ ನಾಗಮಂಡಲೋತ್ಸವದಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀಮತಿ ಮತ್ತು ಶ್ರೀ ಸುನಿತಾ ವಿಠ್ಠಲ ಪೂಜಾರಿ ಮತ್ತು ಮಕ್ಕಳು ಮುಂಬೈ, ಶ್ರೀಮತಿ ಗೋಪಿ ರಾಮ ಪೂಜಾರಿ ಮತ್ತು ಮಕ್ಕಳು ಪುತ್ತೂರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!