spot_img
Friday, January 30, 2026
spot_img

ಕುಂದಾಪುರದಲ್ಲಿ ಅಗ್ನಿಶಾಮಕ ವಾಹನ ನಿಲುಗಡೆಗೆ ಶಿವರಾಮ ಪುತ್ರನ್ ಆಗ್ರಹ

ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ತುರ್ತು ಅಗ್ನಿಶಾಮಕ ವಾಹನ ನಿಲುಗಡೆ ಮಾಡಬೇಕು ಎಂದು ಕುಂದಾಪುರ ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ, ಮಾಜಿ ಪುರಸಭೆ ಸದಸ್ಯರಾದ ಶಿವರಾಮ ಪುತ್ರನ್ ಆಗ್ರಹಿಸಿದ್ದಾರೆ.

ಇತ್ತೀಚೆಗೆ ನಡೆದ ಅಗ್ನಿ ದುರಂತದಲ್ಲಿ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಯಿತು. ಈ ಹಿಂದೆ ಕುಂದಾಪುರದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ ಪ್ರತಾಪ್ ಚಂದ್ರ ಶೆಟ್ಟಿ ಅವರ ಮುತುವರ್ಜಿಯಿಂದ ಕುಂದಾಪುರ ನಗರದಲ್ಲಿ ತುರ್ತು ಸೇವೆಗಾಗಿ ಅಗ್ನಿಶಾಮಕ ವಾಹನವನ್ನು ತಂದಿದ್ದರು. ಆದರೆ ಇದೀಗ ನಗರದ ಹೊರಗೆ ಇರುವ ಕೋಣಿಗೆ ಅಗ್ನಿಶಾಮಕ ಠಾಣೆಯನ್ನು ವರ್ಗಾಯಿಸಲಾಗಿದೆ. ನಗರದಲ್ಲಿ ಅಗ್ನಿಶಾಮಕ ವಾಹನವೊಂದು ಇದ್ದಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕ್ಯಾಂಟೀನ್ ನಿರ್ಮಾಣವಾಗಲಿ:
ಈ ಹಿಂದೆ ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಾರ್ವಜನಿಕರಿಗೆ ಉಪಯೋಗವಾಗುವ ದೃಷ್ಟಿಯಿಂದ ಆಸ್ಪತ್ರೆಯ ಕ್ಯಾಂಟೀನ್ ತೆರೆಯಲಾಗಿತ್ತು ಆದರೆ ಅದೀಗ ಕೂಡವು ಮುಚ್ಚಲಾಗಿದೆ. ಇದರಿಂದ ರೋಗಿಯ ವಾರೀಸುದಾರರಿಗೆ ಸಮಸ್ಯೆಯಾಗುತ್ತಿದೆ. ಆಸ್ಪತ್ರೆಯ ವಠಾರದಲ್ಲಿ ಕ್ಯಾಂಟೀನ್ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಕುಂದಾಪುರದಲ್ಲಿ ಮಹಿಳಾ ಪೊಲೀಸ್ ಠಾಣೆ ಇತ್ತು. ಸಮಸ್ಯೆಗೀಡಾದ ಮಹಿಳೆಯರು ಕೂಡಲೇ ಹೋಗಿ ಕಾನೂನು ಸಹಾಯ ಪಡೆಯಲು ಅನುಕೂಲವಾಗುತ್ತಿತ್ತು. ಈಗ ಅದೂ ಮಾಯಾವಾಗಿದೆ. ಬೆಳೆಯುತ್ತಿರುವ ಕುಂದಾಪುರದಿಂದ ಒಂದೊಂದೇ ಸೌಲಭ್ಯಗಳನ್ನು ಕುಂಠಿತಗೊಳಿಸಲಾಗುತ್ತಿದೆ. ಇದು ನಗರ ಬೆಳವಣಿಗೆಗೆ ಹಿನ್ನೇಡೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!