spot_img
Monday, March 16, 2026
spot_img

ಹಾಲಾಡಿಯಲ್ಲಿ ನೂತನ ಜೆಸಿ‌ಐ ಘಟಕ ಉದ್ಘಾಟನೆ

ಹಾಲಾಡಿ: ಯುವ ನಾಯಕತ್ವ ಅಭಿವೃದ್ಧಿ, ಸಮುದಾಯ ಸೇವೆ ಸಾಮಾಜಿಕ ಬದಲಾವಣೆ ಮತ್ತು ಅಂತರಾಷ್ಟ್ರೀಯ ಯೋಜನೆಗಳ ಮೂಲಕ ವ್ಯಕ್ತಿತ್ವ ಅಭಿವೃದ್ಧಿ ಮೊದಲಾದ ಸಾಮಾಜಿಕ ಕಾರ್ಯಗಳ ಮೂಲಕ, ಅಂತರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಜೆ. ಸಿ. ಐ ಸಂಸ್ಥೆಯ ಶಂಕರನಾರಾಯಣ ಘಟಕ ಪ್ರವರ್ತಿತ, ನೂತನ ಘಟಕ ಹಾಲಾಡಿ-ವಾರಾಹಿ ದಿನಾಂಕ:4-2026 ರಂದು ಗುರುವಾರ ಹಾಲಾಡಿಯ ದುರ್ಗಾನುಗ್ರಹ ಸಭಾಂಗಣದಲ್ಲಿ ಶುಭಾರಂಭಗೊಂಡಿತು.

ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ. ಮಂಜುನಾಥ ಕಾಮತ್ ಹಾಲಾಡಿ ಇವರು ದೀಪ ಪ್ರಜ್ವಲಿಸುವ ಮೂಲಕ ಘಟಕವನ್ನು ಉದ್ಘಾಟಿಸಿ ಶುಭಕೋರಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜೆಸಿ‌ಐ ವಲಯಾಧ್ಯಕ್ಷರಾದ ಜೆ.ಎಫ್.ಎಫ್ ಸಂತೋಷ ಶೆಟ್ಟಿ. ಪೂರ್ವ ವಲಯದ ಉಪಾಧ್ಯಕ್ಷರಾದ ಜೆ. ಎಫ್ .ಎಂ ಪ್ರದೀಪ ಶೆಟ್ಟಿ, ದುರ್ಗಾನುಗ್ರಹ ಸಭಾಂಗಣದ ಮಾಲಕರಾದ ನಾಗರಾಜ ಅಡಿಗ , ಶಂಕರನಾರಾಯಣ ಜೆ .ಸಿ. ಐ ಘಟಕದ ಅಧ್ಯಕ್ಷರಾದ ಜೇಸಿ ಪ್ರವೀಣ ಬಾಳೆಕೊಡ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು..

ಹಾಲಾಡಿ – ವಾರಾಹಿ ಜೆಸಿ‌ಐ ಘಟಕದ ನೂತನ ಅಧ್ಯಕ್ಷರಾಗಿ ಪ್ರದೀಪ ಹಾಲಾಡಿ, ಕಾರ್ಯದರ್ಶಿಯಾಗಿ ಅಶೋಕ ಆಚಾರ್ಯ, ಖಜಾಂಚಿಯಾಗಿ ಮಹೇಶ ಕುದ್ರುಬೆಟ್ಟು, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಅವಶ್ಯ ಶೆಟ್ಟಿ, ಜೂನಿಯರ್ ಜೆಸಿ‌ಐ ಅಧ್ಯಕ್ಷರಾಗಿ ವಿಶ್ವನಾಥ.ಡಿ ಆಯ್ಕೆಯಾದರು.. ನೂತನ ಅಧ್ಯಕ್ಷರಿಗೆ ಶಂಕರನಾರಾಯಣ ಘಟಕದ ಅಧ್ಯಕ್ಷರಾದ ಪ್ರವೀಣ ಬಾಳೆಕೊಡ್ಲು , ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಪೂರ್ವ ವಲಯದ ಉಪಾಧ್ಯಕ್ಷರಾದ ಸಂತೋಷ ಶೆಟ್ಟಿಯವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಸಂಸ್ಥೆಯ ಉದ್ದೇಶಗಳ ಕುರಿತು ಮಾರ್ಗದರ್ಶನ ಮಾಡಿದರು.

ಜೇಸಿ ಪ್ರವೀಣ ಬಾಳೆಕೊಡ್ಲು ಸ್ವಾಗತಿಸಿ, ಜೇಸಿ ಅಶೋಕ ಆಚಾರ್ಯ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!