spot_img
Saturday, March 7, 2026
spot_img

ಎಚ್.ಎಸ್ ಶೆಟ್ಟಿ ಅವರದ್ದು ಮಾನವೀಯ ಸಂವೇದನೆಯ ಹೆಂಗರುಳು-ಬಿ.ಎಲ್ ಸಂತೋಪ್ ಜಿ

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರೂ.2.5 ಕೋಟಿ ರೂ.ವೆಚ್ಚದಲ್ಲಿ ಉಳ್ಳೂರು-74 ಗ್ರಾಮದಲ್ಲಿ ನಿರ್ಮಿಸಲಾದ 14 ಕೊರಗರ ಮನೆಗಳ ಹಸ್ತಾಂತರ

ಜನಪ್ರತಿನಿಧಿ ವಾರ್ತೆ] ಕುಂದಾಪುರ: ಸೇವಾಕ್ಷೇತ್ರ ಧನ್ಯವಾದ ನಿರೀಕ್ಷಿಸುವಂತಿಲ್ಲದ ಕ್ಷೇತ್ರ. ಟೀಕೆ ಟಿಪ್ಪಣಿಗಳನ್ನು ಸ್ವೀಕರಿಸುತ್ತಾ ಗಟ್ಟಿ ಗುಂಡಿಗೆಯಿಂದ ಕೆಲಸ ನಿರ್ವಹಿಸಬೇಕಾಗುತ್ತದೆ. ಸಮಾಜದ ನೋವಿಗೆ ಸ್ಪಂದಿಸುವ ಮಾನವೀಯ ಸಂವೇದನೆಯ ಹೆಂಗರುಳು ಎಚ್.ಎಸ್ ಶೆಟ್ಟಿ ಅವರಿಗೆ ಇದೆ. ಹಾಗಾಗಿ ಅವರು ಸರಕಾರ ಮತ್ತು ಸಂಘಟನೆ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಪ್ ಜಿ ಹೇಳಿದರು.

ಅವರು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ 2.5 ಕೋಟಿ ರೂ.ವೆಚ್ಚದಲ್ಲಿ ಉಳ್ಳೂರು-೭೪ ಗ್ರಾಮದ 14 ಕೊರಗರ ಮನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರಿಸಿ ಮಾತನಾಡಿದರು.

ಎಚ್.ಎಸ್ ಶೆಟ್ಟರಿಗೆ ಇದರಿಂದ ಯಾವುದೇ ಪ್ರಚಾರ, ಪ್ರಶಂಸೆ ಬೇಕಾಗಿಲ್ಲ. ಅವರು ಸಾರ್ಥಕ್ಯತೆಗೋಸ್ಕರ ಮಾಡಿದ್ದಾರೆ. ಸಮಾಜವನ್ನು ಎಚ್ಚರಿಸುವ, ಜಾಗೃತಿ ಮೂಡಿಸುವ ಕೆಲಸ ಅವರು ಮಾಡಿದ್ದಾರೆ. ಈ ಸಮುದಾಯಗಳನ್ನು ಸ್ವಾವಲಂಬಿಯನ್ನಾಗಿ ಮುಖ್ಯ ವಾಹಿನಿಗೆ ತರುವ ಕೆಲಸ ನಾವೆಲ್ಲಾ ಮಾಡಬೇಕಾಗಿದೆ. ಇವತ್ತು ಉದ್ಯೋಗ ಮೀಸಲಾತಿಯ ಪ್ರಯೋಜನ ಕೊರಗ ಸಮುದಾಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಅಸಮಾಧಾನವಿದೆ. ನೇರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಅವರ ಬೇಡಿಕೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇನೆ. ಅದೇ ರೀತಿ ಈ ಜನಾಂಗದ ಆರೋಗ್ಯ ಸಂಶೋಧನೆ ನೆಡೆಸುವ ಕಾರ್ಯ ಆಗಬೇಕು. ಆ ಬಗ್ಗೆ ಕೇಂದ್ರದ ಗಮನಕ್ಕೆ ತರುತ್ತೇನೆ ಎಂದರು.

14 ಮನೆಗಳ ಗೃಹ ಪೂಜೆ ನಡೆಸಿ ಲೋಕಾರ್ಪಣೆಗೊಳಿಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಆಶೀರ್ವಚಿಸಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಿದೆ. ಇನ್ನೂ ರಾಮ ರಾಜ್ಯ ನಿರ್ಮಾಣಗೊಳ್ಳಬೇಕಾಗಿದೆ. ಅಂತಹ ಕೆಲಸ ಈಗ ಆಗುತ್ತಿದೆ. ಕೊರಗರಿಗೆ ಮನೆ ನಿರ್ಮಾಣ ಮಾಡಿಕೊಟ್ಟಿರುವ ಸೇವೆಯನ್ನು ಅಯೋಧ್ಯೆಯ ಶ್ರೀರಾಮನ ಪದತಲಕ್ಕೆ ಅರ್ಪಿಸುತ್ತೇನೆ ಎಂದರು.

ಚಿತ್ರದುರ್ಗಾ ಮಾದಾರ ಚೆನ್ನಯ್ಯ ಗುರುಪೀಠದ ಡಾ| ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಆಶಯ ಭಾಷಣ ಮಾಡಿ, ಸಮಾಜದಲ್ಲಿ ನಿರಾಶ್ರಿತರಾಗಿರುವರಿಗೆ ಆಶ್ರಯದಾತರಾಗಿ ಎಚ್.ಎಸ್ ಶೆಟ್ಟಿರಲ್ಲಿ ಬಸವಣ್ಣಾದಿ ಶರಣರ ವ್ಯಕ್ತಿತ್ವವನ್ನು ಕಾಣಬಹುದು. ಶೋಷಿತ ಸಮಾಜಗಳ ಅಭ್ಯುದಯಕ್ಕೆ ಅವರು ತನ್ನ ದುಡಿಮೆಯ ಒಂದು ಭಾಗವನ್ನು ಅರ್ಪಣ ಭಾವದಿಂದ ನೀಡುತ್ತಿದ್ದಾರೆ. ಇದೊಂದು ಒಳ್ಳೆಯ ಸತ್ಕಾರ್ಯಕ್ಕೆ ನಾವೆಲ್ಲಾ ಸಾಕ್ಷೀಕರಿಸಿದ್ದೇವೆ ಎಂದು ಹೇಳಿದ ಅವರು, ಕೊರಗ ಸಮುದಾಯ ಶಿಕ್ಷಣ, ಸಂಸ್ಕಾರ, ಸಾಧನೆಯ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ| ಎಚ್.ಎಸ್ ಶೆಟ್ಟಿ ಅವರು ಮಾತನಾಡಿ, ನನ್ನ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ನೀಡುತ್ತಿದ್ದೇನೆ. ಪ್ರಾರಂಭದಲ್ಲಿ ಶಿಕ್ಷಣ ಒತ್ತು ನೀಡಿದ್ದೆ. ಬಳಿಕ ಪೇಜಾವರ ಶ್ರೀಗಳ ಪ್ರೇರಣೆಯಿಂದ ಕೊರಗ ಜನಾಂಗ ಮುಖ್ಯವಾಹಿನಿಗೆ ಬರಬೇಕು ಎನ್ನುವ ದೃಷ್ಟಿಯಲ್ಲಿ ತುಂಬಾ ಕಷ್ಟ್ಟದಲ್ಲಿರುವ 100 ಮನೆ ನಿರ್ಮಾಣ ಮಾಡಿ ಕೊಡುವ ಗುರಿ ಹೊಂದಿದ್ದೇನೆ. ಈಗಾಗಲೇ 28ಮನೆಗಳ ನಿರ್ಮಾಣವಾಗಿದೆ. ಇನ್ನೂ 72 ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು ಎಂದರು.
ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಆತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಗುರುರಾಜ ಗಂಟಿಹೊಳೆ, ಕಿರಣ್‌ಕುಮಾರ ಕೊಡ್ಗಿ, ಯಶಪಾಲ್ ಸವರ್ಣ, ಗುರ್ಮೆ ಸುರೇಶ ಶೆಟ್ಟಿ, ಭರತ್ ಶೆಟ್ಟಿ ಮಂಗಳೂರು, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ಕರ್ನಾಟಕ-ಕೇರಳ ಕೊರಗಾಭಿವೃದ್ಧಿ ಸಂಸ್ಥೆಗಳ ಅಧ್ಯಕ್ಷೆ ಸುಶೀಲ ನಾಡ, ಉಳ್ಳೂರು-೭೪ ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಶೆಟ್ಟಿ, ಉಳ್ಳೂರು-೭೪ ಶ್ರೀ ಬನಶಂಕರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಶೆಟ್ಟಿ ಸಂಪಿಗೇಡಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ನಾಗರಾಜ ಶೆಟ್ಟಿ ಹಾಲಾಡಿ ,ಕಾರ್ಯದರ್ಶಿ ಡಾ.ಸುಮನಾ ಶ್ರೀನಿವಾಸ ಶೆಟ್ಟಿ   ಉಪಸ್ಥಿತರಿದ್ದರು.

ಧಾತ್ರಿ ಪ್ರಾರ್ಥಿಸಿದರು. ಕಾರವಾರ ಪಹರೆ ವೇದಿಕೆ ಅಧ್ಯಕ್ಷ ನ್ಯಾಯವಾದಿ ನಾಗರಾಜ ನಾಯಕ್ ಪ್ರಾಸ್ತವಿಕವಾಗಿ ಮಾತನಾಡಿದರು.
ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

14 ಮನೆಗಳಿಗೆ ಕೃಷ್ಣನ ವಿವಿಧ ಹೆಸರುಗಳನ್ನು ಇರಿಸಲಾಗಿದೆ. ಕೃಷ್ಣ, ಕೇಶವ, ಮಾಧವ, ಗೋವಿಂದ, ಮಧುಸೂದನ, ಜನಾರ್ದನ, ಗೊವರ್ಧನ, ಗೋಪಾಲ, ಶ್ಯಾಮ, ಗಿರಿಧರ, ಅಚ್ಯುತ, ಮುಕುಂದ, ದಾಮೋದರ, ನಾರಾಯಣ ಈ ರೀತಿ ಶ್ರೀಕೃಷ್ಣನ ಹೆಸರುಗಳನ್ನು ಮನೆಗಳಿಗೆ ಇರಿಸಲಾಗಿದ್ದು, ಮನೆಗಳನ್ನು ಫಲಾನುಭವಿಗಳಾದ ಬಸವ ಕೊರಗ, ಉದ್ದೇಶ ಕೊರಗ, ಗುಲಾಬಿ, ಪಾಂಡು ಕೊರಗ, ರಾಮ ಕೊರಗ, ಬಡಿಯ ಕೊರಗ, ಮರಿಯ ಕೊರಗ, ಐತು ಕೊರಗ, ಚಂದ್ರ ಕೊರಗ, ರುಕ್ಕು, ಕಾವೇರಿ, ಯೋಗೇಂದ್ರ ಕೊರಗ, ಜಲಜ, ಮುತ್ತ ಕೊರಗ ಇವರಿಗೆ ಹಸ್ತಾಂತರಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!