spot_img
Friday, January 30, 2026
spot_img

ಕೋಟ ಪಡುಕೆರೆ ಸಂತೋಷ್ ಪೂಜಾರಿ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಕೋಟ: ಕೋಟ ಪಡುಕೆರೆಯಲ್ಲಿ ನಡೆದ ಸಂತೋಷ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದ ಆರೋಪಿಗಳಾದ ದರ್ಶನ್ (21), ಪಾರಂಪಳ್ಳಿ, ಪಡುಕೆರೆ, ಕೌಶಿಕ್ (21), ಸಾಸ್ತಾನ, ನೀರಾಡಿಜೆಡ್ಡು, ಪಾಂಡೇಶ್ವರ, ಅಂಕಿತ (19), ಕೋಟತಟ್ಟು, ಪಡುಕೆರೆ ಮತ್ತು ಸುಜನ್(21), ಕೋಟತಟ್ಟು, ಪಡುಕೆರೆ ದಸ್ತಗಿರಿ ಮಾಡಲಾಗಿದೆ.

ಡಿ.14  ಸಂಜೆ ಮೃತ ಸಂತೋಷ್ ಪೂಜಾರಿ, ಸಚಿನ್, ಚೇತನ್, ಕೌಶಿಕ್, ಸುಜನ್ ಮತ್ತು ದರ್ಶನ್ ಬಾರ್‌ನಲ್ಲಿ ಪಾರ್ಟಿ ಮುಗಿಸಿ ಪಡುಕೆರೆಯ ಸರ್ಕಲ್‌ಗೆ ಬಂದು ಅಲ್ಲಿ ಊಟ ಮಾಡಿಕೊಂಡು ಮಾತನಾಡುತ್ತಿರುವಾಗ, ದರ್ಶನ್ ಮತ್ತು ಕೌಶಿಕ್, ಅಂಕಿತ ಹಾಗೂ ಸುಜನ್ ರವರು ಸಂತೋಷನ ಕುಟುಂಬದ ವಿಚಾರದಲ್ಲಿ ಮತ್ತು ಕುಡಿಯುವ ವಿಚಾರದಲ್ಲಿ ಮಾತುಕತೆ ಆಗಿ ಅವಾಚ್ಯವಾಗಿ ಮಾತನಾಡಿ ಜಗಳ ಮಾಡಿ ಸಂತೋಷನಿಗೆ ನಾಲ್ಕು ಜನರು ಸೇರಿ ಹೊಡೆದಿದ್ದರು. ಪರಸ್ಪರ ದೂಡಾಡಿಕೊಂಡಿದ್ದು, ದರ್ಶನ್ ಸಂತೋಷನಿಗೆ ಕುತ್ತಿಗೆ ಹಿಂಬದಿ ಕೈಯಿಂದ ಬಲವಾಗಿ ಹೊಡೆದಿದ್ದಾನೆ. ಕೌಶಿಕನು ಸಂತೋಷನಿಗೆ ಕೈಯಿಂದ ಹೊಡೆದಿದ್ದಾನೆ. ರಜತ್ ಇವರುಗಳ ಜಗಳ ತಪ್ಪಿಸಿದ್ದು ಅವರುಗಳು ಹೊಡೆದಿರುವುದರಿಂದ ಸಂತೋಷನು ಅಲ್ಲಿಯೇ ಕುಸಿದು ಬಿದ್ದಿದ್ದು, ಕೂಡಲೇ ಅವರೆಲ್ಲರೂ ಅಲ್ಲಿಂದ ಹೊರಟು ಹೋಗಿದ್ದರು. ಆ ಸಂದರ್ಭದಲ್ಲಿ ಸಂತೋಷನಿಗೆ ಬಾಯಿಯಿಂದ ನೊರೆ ಬರುತ್ತಿದ್ದು ಮಾತನಾಡುತ್ತಿರಲಿಲ್ಲ. ರಜತ್ ಅವರು ಸ್ಥಳೀಯರನ್ನು ಕರೆಸಿ ಸಂತೋಷನನ್ನು ಒಂದು ಕಾರಿನಲ್ಲಿ ಹಾಕಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿ ವೈದ್ಯರು ಸಂತೋಷನನ್ನು ಪರೀಕ್ಷಿಸಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!