spot_img
Monday, March 16, 2026
spot_img

ಬೆಳಗಾವಿ ಅಧಿವೇಶನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಂಡ್ಸೆ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು

ಕುಂದಾಪುರ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ಸರಕಾರದ ಚಳಿಗಾಲದ ಅಧಿವೇಶದ ಪ್ರಯುಕ್ತ ಜಿಲ್ಲಾ ಆಡಳಿತ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಡಿ.16ರಂದು ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆನಕ ಇವೆಂಟ್ಸ್ ಮತ್ತು ಮ್ಯಾನೇಜ್ ಮೆಂಟ್ ಸಂದೇಶ ಶೆಟ್ಟಿ ಸಳ್ವಾಡಿ ಸಾರಥ್ಯದಲ್ಲಿ ನಡೆಯಲಿರುವ ಸುಶ್ಮಿತಾ ಸಾಲಿಗ್ರಾಮ ಅವರ ಕಲಾವಿಸ್ಮಯ ಸಾಲಿಗ್ರಾಮ ತಂಡದವರ ಯಕ್ಷಗಾನ ನೃತ್ಯ ರೂಪಕ, ಸಮೃದ್ಧಿ ಕೋಟೇಶ್ವರ ಅವರ ಯಕ್ಷಗಾನ ನೃತ್ಯ ಕಾರ್ಯಕ್ರಮ ನಡೆಯಲಿದೆ. ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿನ ವಿದ್ಯಾರ್ಥಿನಿಯರಾದ ತುಳಸಿ (6ನೇ ತರಗತಿ) ಮತ್ತು ಆಯುಷಿ (3ನೇ ತರಗತಿ) ಭಾಗವಹಿಸುತ್ತಿದ್ದಾರೆ.

ಈ ವಿದ್ಯಾರ್ಥಿನಿಯರು ಶಂಕರಪ್ಪನಕೊಡ್ಲು ಶ್ರೀ ಲಕ್ಷ್ಮೀವೆಂಕಟರಮಣ ಕೃಪಾಪೋಷಿತ ಯಕ್ಷಗಾನ ಕಲಾ ಸಂಘದಲ್ಲಿ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.

ತುಳಸಿ,  ಸತೀಶ್ ಮತ್ತು ರೇವತಿ ದಂಪತಿಯ ಪುತ್ರಿ. ಆಯುಷಿ,  ದಿವಾಕರ ವಂಡ್ಸೆ ಮತ್ತು ರೇವತಿ ದಂಪತಿಯ ಪುತ್ರಿ.

ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಸಹಿತವಾಗಿ ಸಚಿವರು, ಶಾಸಕರು, ಅಧಿಕಾರಿಗಳು ವೀಕ್ಷಿಸಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!